‘ಒತ್ತಡ ಎದುರಿಸುವ ಶಕ್ತಿ ಅವರಲ್ಲಿಲ್ಲ’
ಏಷ್ಯಾಕಪ್ ಟೂರ್ನಿಗೂ ಮೊದಲೇ ಸಂಚಲನ ಹೇಳಿರುವ ಪಾಕ್ ಮಾಜಿ ಕ್ರಿಕೆಟಿಗ, ರೋಹಿತ್ ಶರ್ಮಾ ದೊಡ್ಡ ಆಟಗಾರ. ಅದನ್ನು ನಾನು ಕೂಡ ಒಪ್ಪುತ್ತೇನೆ. ಅವರು ನೂರಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನದ ಮೂಲಕ ಭಾರತ ತಂಡದ ಪರ ಆಡುತ್ತಿದ್ದಾರೆ. ಆದರೆ, ಒತ್ತಡದ ಸಂದರ್ಭವನ್ನು ಎದುರಿಸುವ ಶಕ್ತಿ ಅವರಲ್ಲಿಲ್ಲ. ಇದೇ ಕಾರಣಕ್ಕೆ ಅವರು ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ಬಟ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.