BS Yediyurappa: ಕಾಂಗ್ರೆಸ್ ಭರವಸೆ ಈಡೇರಿಸಲ್ಲ, ಸರ್ಕಾರ ಉಳಿಯೋದೂ ಇಲ್ಲ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ | Congress Government Will Not Last Long Says BS Yediyurappa

Karnataka

oi-Reshma P

|

Google Oneindia Kannada News

ಶಿವಮೊಗ್ಗ, ಜೂನ್‌ 19: ಕಾಂಗ್ರೆಸ್‌ ಕೊಟ್ಟ ಭರವಸೆಗಳನ್ನ ಈಡೇರಿಸಲ್ಲ. ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಸೋಮವಾರ ಲೋಕಸಭಾ ಚುನಾವಣೆ ಹಿನ್ನಲೆ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಸೋಲಾಗಿದೆ. ಸೋಲಿನ ಬಗ್ಗೆ ಧೃತಿಗೆಡುವುದು ಬೇಡ, ನಾವು ಮತ್ತೊಮ್ಮೆ ಎದ್ದು ನಿಲ್ಲಬೇಕಿದೆ. ನಮ್ಮ ಪಕ್ಷವನ್ನ ಪಡಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

BJP Leader BS Yediyurappa

ಕಾಂಗ್ರೆಸ್‌ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಕೊಟ್ಟಿರುವ ಸುಳ್ಳು ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಲೇಬೇಕು ಎಂದು ನಾವು ಅವರಿಗೆ ಒತ್ತಡ ಹೇಳಬೇಕಿದೆ. ಅದರ ಮೂಲಕ ಪಕ್ಷವನ್ನು ಬಲಪಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ನೀವೆಲ್ಲ ಸೇರಿ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅಧಿಕಾರ ಸಿಗದೇ ಹಿನ್ನಡೆ ಆಗಬಹುದು ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಅವರು ಕೊಟ್ಟಿರುವ ಸುಳ್ಳು ಆಶ್ವಾಸನೆಗಳಿಂದ ಜನನಂಬಿ ಮೋಸ ಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ವಾಸ್ತವ ಸತ್ಯ ಸಂಗತಿ ರಾಜ್ಯದ ಜನತೆಗೆ ಮನವರಿಕೆ ಆಗುತ್ತೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದ್ದು, ಭರವಸೆಗಳನ್ನು ಈಡೇರಿಸುವಂತಹ ಶಕ್ತಿ ಕಳೆದುಕೊಂಡಿದೆ. ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಇದ್ದಾಗ, ನಾವು ಅನೇಕ ಜನಪರ ಯೋಜನೆಗಳನ್ನ ತಂದಿದ್ದೆವು. ಭಾಗ್ಯಲಕ್ಷ್ಮಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೀಗೆ ಹಲವಯ ಜನರಪ ಕೆಲಸ ಮಾಡಿದ್ದೆವು. ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅನೇಕ ಭರವಸೆಗಳಿಂದ ಕೊಟ್ಟಿದೆ. ಅದು ತಾತ್ಕಾಲಿಕ ಎಂದು ವಾಗ್ದಾಳಿ ನಡೆಸಿದರು.

BJP Leader BS Yediyurappa

ನಾನು ನಿಮಗೆ ವಿನಂತಿ ಮಾಡಿಕೊಳ್ಳುತ್ತೇನೆ ಯಾವ ಕಾರಣಕ್ಕೂ ನಾವು ಧೃತಿಗೆಡುವ ಅವಶ್ಯಕತೆ ಇಲ್ಲ. ಈಗಿರುವ ನಮ್ಮ ಶಾಸಕರು ಒಟ್ಟಿಗೆ ಕೆಲಸ ಮಾಡಿದರೆ, ನಮ್ಮೆಲ್ಲ ಕಾರ್ಯಕರ್ತರು ಆತ್ಮ ವಿಶ್ವಾಸದಿಂದ ಆಯಾ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೆಲಸ ಮಾಡಲು ನಿಂತರೆ, ಆಡಳಿತ ಪಕ್ಷವನ್ನು ಕಟ್ಟಿಹಾಕಬಹುದು.

ಕಾಂಗ್ರೆಸ್‌ ಸುಳ್ಳು ಭರವಸೆಗಳ ಕುರಿತು ಬೀದಿಗೆ ಇಳಿದು ಹೋರಾಟ ಮಾಡಬೇಕು. ಇದಕ್ಕೆಲ್ಲ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದನ್ನ ಜನರಿಗೆ ನೆನಪು ಮಾಡಿ ಸಂಘಟನೆ ಬಲಪಡಿಸಬೇಕು. ನಾನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತೇನೆ. ಕೂತು ಚರ್ಚೆ ಮಾಡೋಣ. 65 ಜನ ಶಾಸಕರು ನಾವಿದ್ದೇವೆ. ಹೊರಗೆ ಹೋರಾಟ ಮಾಡುವ ಮೂಲಕ ಈ ಪಕ್ಷವನ್ನು ಬಲಪಡಿಸುವಂತಹ ಒಂದು ಪ್ರಾಮಾಣಿಕ ಪ್ರಯತ್ನ ನಾವು ನೀವೆಲ್ಲ ಸೇರಿ ಮಾಡಬೇಕಿದೆ. ಆ ಕೆಲಸವನ್ನು ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಏಕ್ ದೇಶ್ ಮೇ ಧೋ ಪ್ರಧಾನ್, ಧೋ ವಿಧಾನ್, ಧೋ ನಿಶಾನ್ ನಹೀ ಚಲೇಂಗೇ ಎಂದು ಶಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರದಿಂದ ಹೋರಾಟ ಮಾಡಿದ್ದರು, ವಾಪಸ್ ಬರಲೇ ಇಲ್ಲ..! ಅಂತಹ ಮಹಾನ್ ವ್ಯಕ್ತಿ ಕಟ್ಟಿರುವಂತಹ ಈ ಪಕ್ಷ ಬರುವ ದಿನಗಳಲ್ಲಿ ನಮ್ಮ ವಿಶೇಷ ಪರಿಶ್ರಮದಿಂದ ಮೇಲೆ ಏಳಬೇಕಾಗಿದೆ.

ಅಕ್ಕಿ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾಂಗ್ರೆಸ್ ಕುಂಟು ನೆಪ: ಬೊಮ್ಮಾಯಿ‌ಅಕ್ಕಿ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾಂಗ್ರೆಸ್ ಕುಂಟು ನೆಪ: ಬೊಮ್ಮಾಯಿ‌

ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠರಾಗಿರಬೇಕಾದರೆ ಕಾಂಗ್ರೆಸ್ ಯಾವುದೇ ಲೆಕ್ಕಕ್ಕೆ ಸಿಗೋದಿಲ್ಲ. ವಿಶ್ವವೇ ಇಡೀ ಪ್ರಧಾನಿಯನ್ನ ನೋಡುತ್ತಿದೆ. ಅಂತಹ ಮಹಾನ್ ವ್ಯಕ್ತಿ ಈ ದೇಶದ ಪ್ರಧಾನಿಯಾಗಬೇಕಿದ್ದರೆ,‌ ನೀವು ನಿರ್ಧಾರ ಮಾಡಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಂಘಟನೆ ಬಲಪಡಿಸುವಲ್ಲಿ ವಿಶೇಷ ಗಮನ ಕೊಡಿ.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಿಂದುಳಿದ ವರ್ಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುವ ಮೂಲಕ ನಾವೆಲ್ಲ ಎದ್ದು ನಿಲ್ಲಬೇಕಾಗಿದೆ. ನನಗೆ ವಿಶ್ವಾಸವಿದೆ, ಈ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಯನ್ನ ಈಡೇರಿಸುವುದಿಲ್ಲ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿಕಾರಿದರು.

English summary

BJP Leader BS Yediyurappa Said That Congress Government Will Not Last Long

Source link