Karnataka
oi-Reshma P
ಬೆಂಗಳೂರು, ಜೂನ್ 19: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಣವನ್ನ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ ಬಸ್ ಗಳಲ್ಲಿ ಉಚಿತ ಪ್ರಯಣ ಎಂದು ಮಹಿಳಾಮಣಿಗಳು ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸವನ್ನ ಕೈಗೊಂಡಿದ್ದು, ಕಾಂಗ್ರೆಸ್ ನ ಶಕ್ತಿ ಯೋಜನೆ ಹಲವರಿಗೆ ಅನುಕೂಲಕವಾದ್ರೆ, ಇನ್ನೂ ಕೆಲವರಿಗೆ ಸಂಕಟವನ್ನ ತಂದಿಟ್ಟಿದೆ. ಉಚಿತ ಬಸ್ ಪ್ರಯಣದಿಂದ ಹೆಂಡತಿ ಮನೆಯಲ್ಲಿ ಇರುತ್ತಿಲ್ಲ,ಅಡುಗೆ ಮಾಡುತ್ತಿಲ್ಲ, ಇನ್ನೂ ಬಸ್ ನಲ್ಲಿ ನಮಗೆ ಸೀಟ್ ಸಿಗುತ್ತಿಲ್ಲ ಎಂದು ಪುರುಷರು ಶಕ್ತಿ ಯೋಜನೆ ವಿರುದ್ದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ಮತ್ತೊಂದೆಡೆ ತನ್ನ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಷಕರೊಬ್ಬರು ಕಣ್ಣೀರು ಹಾಕಿದ್ದಾರೆ. ಹೌದು, ಕಾಂಗ್ರೆಸ್ ನ ಉಚಿತ ಬಸ್ ಸೇವೆ ಪೋಷಕರಿಗೆ ಸಂಕಷ್ಟ ತಂದಿದೆ. ಅಪ್ಪನಿಗೆ ಚಾಕಲೇಟ್ ತೆಗೆದುಕೊಳ್ಳಲು ಹಣ ಬೇಕು ಎಂದು ಕೇಳಿದ್ದಾರೆ, ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಮಕ್ಕಳು ಕಾಣುತ್ತಿಲ್ಲ ಎಂದು ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ತಂದೆ-ತಾಯಿ ಮೇಲಿನ ಕೋಪಕ್ಕೆ ಈ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಚಾಕಲೇಟ್ ತೆಗೆದುಕೊಳ್ಳಲು ಅಪ್ಪ ಹಣ ಕೊಟ್ಟಿಲ್ಲ ಎಂದು ಬೇಸರಗೊಂಡು ಇಬ್ಬರು ಪುತ್ರಿಯರು ಬಸ್ ಹತ್ತಿ ಫ್ರೀಯಾಗಿ ಕೋಣನಕುಂಟೆಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸಿದ್ದಾರೆ.
ಉಚಿತ ಬಸ್ ಸೇವೆ ಎಫೆಕ್ಟ್: ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸಿದ್ದು ಎಷ್ಟು ಜನ?
ಇನ್ನೂ ಈ ವಿಚಾರ ತಿಳಿಯದ ಪೋಷಕರು ಭಯಗೊಂಡು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇಬ್ಬರು ಹೆಣ್ಣು ಮಕ್ಕಳ ಹುಡುಕಾಟ ನಡೆಸಿದ ಪೊಲೀಸರು, ಮಕ್ಕಳು ನಾಪತ್ತೆಯಾದ ಎರಡು ದಿನದ ಬಳಿಕ ಅಂದ್ರೆ ಜೂನ್ 18 ರಂದು ಧರ್ಮಸ್ಥಳದಲ್ಲಿ ಇಬ್ಬರು ಹೆಣ್ಣು ಮಕ್ಕಳು ಪತ್ತೆ ಹಚ್ಚಿದ್ದಾರೆ. ಸದ್ಯ ಮಕ್ಕಳ ಪತ್ತೆಯಿಂದ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.
English summary
Two Daughters travel to dharmasthala without informing parents over father refuse to give money to buy chocolate