Karnataka
oi-Reshma P
ಬೆಂಗಳೂರು, ಜೂನ್ 23: ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಬೆಂಗಳೂರಿಗರ ಬೇಡಿಕೆಯಾಗಿದ್ದ ಅಮೆರಿಕ ರಾಯಭಾರಿ ಕಚೇರಿ ರಚನೆ, ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯಿಂದ ಸಾಧ್ಯವಾಗಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಆರಂಭವಾಗುತ್ತಿರುವುದರಿಂದ 4 ರಿಂದ 5 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಅಮೆರಿಕಾ ರಾಯಭಾರಿ ಕಚೇರಿ ಬೆಂಗಳೂರಿನಲ್ಲಿ ಆರಂಭಿಸಲು ಅಮೆರಿಕಾದ ಅಧಿಕಾರಿಗಳಿಗೆ ಹಿಂದಿನ ಸರ್ಕಾರ ಕೊಟ್ಟ ಭರವಸೆಯನ್ನು ಇವಾಗ ಕಾಂಗ್ರೆಸ್ ಉಳಿಸಿಕೊಳ್ಳಬೇಕು. ಆದಷ್ಟು ಬೇಗ ರಾಯಭಾರಿ ಕಚೇರಿ ಆರಂಭವಾಗಲು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಅಮೆರಿಕ ಭೇಟಿ ವಿವಿಧ ಆಯಾಮದಲ್ಲಿ ಲಾಭವಾಗಿದೆ. ಅಮೇರಿಕಾದಲ್ಲಿ ಮೋದಿ ಈ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಹಲವು ಪ್ರಯೋಜನಕಾರಿಯಾಗಿದೆ. ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿಗೆ ಇಪ್ಪತ್ತು ವರ್ಷಗಳಿಂದ ಬೇಡಿಕೆ ಇತ್ತು. ಬೆಂಗಳೂರು ಐಟಿ ರಾಜಧಾನಿಯಾಗಿದೆ. ಅತಿ ಹೆಚ್ಚು ಅಮೆರಿಕಾ ಪ್ರಯಾಣಿಕರ ಸಂಖ್ಯೆ ಕರ್ನಾಟಕದಲ್ಲಿ ಇದೆ. ಆದರೆ ಹಿಂದಿನ ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ತೆರೆಯಲುಪ್ರಯತ್ನ ಮಾಡಿರಲಿಲ್ಲ ಎಂದರು.
ಯುಪಿಎ ಅವಧಿಯಲ್ಲಿ ಹೈದರಾಬಾದ್ ಹಾಗೂ ಕಲ್ಕತ್ತಾದಲ್ಲಿ ಅಮೆರಿಕಾದ ರಾಯಬಾರಿ ಕಚೇರಿ ತೆರೆಯಲಾಗಿತ್ತು. ಆದರೆ ಇದೀಗ ನರೇಂದ್ರ ಮೋದಿ ಸರ್ಕಾರ ಜನರ ಅಪೇಕ್ಷೆಯಂತೆ ಸಂಸದರ ಪ್ರಯತ್ನದ ಮೇರೆಗೆ ಈ ಬೇಡಿಕೆ ಈಡೇರುತ್ತಿದೆ ಎಂದರು. ಇನ್ನೂ 2020 ರಲ್ಲಿ ವಿದೇಶಾಂಗ ಸಚಿವ ಜಯಶಂಕರ್ ಅವರನ್ನು ನಾವು ಭೇಟಿ ಮಾಡಿ ಮನವಿ ಮಾಡಿದ್ದೆವು. ಬೆಂಗಳೂರಿನಲ್ಲಿ ಮತ್ತೊಂದು ರಾಯಭಾರಿ ಕಚೇರಿ ತೆರೆಯಬೇಕಾದರೆ ಭಾರತ ಸರ್ಕಾರ ಅಮೆರಿಕಾದ ಊರಲ್ಲಿ ಒಂದು ರಾಯಭಾರಿ ಕಚೇರಿ ಆರಂಭ ಮಾಡಬೇಕು ಎಂಬ ನಿಯಮ ಇದೆ. ಇದೀಗ ಅಮೆರಿಕಾದ ಸಿಯಾಟಲ್ ನಲ್ಲಿ ರಾಯಬಾರಿ ಕಚೇರಿ ಆರಂಭಿಸಲು ತಯಾರಾದಲ್ಲಿ, ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆಯಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.
ರಾಯಬಾರಿ ಕಚೇರಿ ಆರಂಭಿಸುವುದರಿಂದ ವರ್ಷಕ್ಕೆ 4 ರಿಂದ 5 ಲಕ್ಷ ಜನರಿಗೆ ಅನುಕೂಲವಾಗಲಿದೆ. ಮೀಸಾ ಸ್ಟಾಪಿಂಗ್ ಮಾಡಲು ಕರ್ನಾಟಕದವರು ಚೆನೈ ಹಾಗೂ ಹೈದರಾಬಾದ್ ಗೆ ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಪ್ರಯತ್ನಗಳ ಫಲವಾಗಿ ಅಮೆರಿಕಾ ರಾಯಬಾರಿ ಕಚೇರಿ ಬೆಂಗಳೂರಿನಲ್ಲಿ ಆರಂಭಿಸಲು ಒಪ್ಪಿದೆ ಸೂಚಿಸಿದೆ. ಇದರಿಂದ ಜನರಿಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಯಭಾರಿ ಕಚೇರಿ ತರೆಯಲು ಜಾಗವನ್ನ ಕೊಡುವುದಾಗಿ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ರು, ಈ ಎಲ್ಲಾ ಪ್ರಯತ್ನದಿಂದಾಗಿ ರಾಯಭಾರಿ ಕಚೇರಿಗೆ ಅನುಕೂಲವಾಗಲಿದೆ.
ಹಿಂದಿನ ಸರ್ಕಾರ ಅಮೇರಿಕಾದ ರಾಯಭಾರಿ ಕಚೇರಿಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಯನ್ನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು.
English summary
PM Modi visit to America will be a historic benefit for India including karnataka says Tejasvi Surya.
Story first published: Friday, June 23, 2023, 13:38 [IST]