ಗುಜರಾತ್‌ನಲ್ಲಿ ಜಾಗತಿಕ ಫಿನ್‌ಟೆಕ್ ಹಬ್ ತೆರೆಯಲು ನಿರ್ಧರಿಸಿದ ಗೂಗಲ್ – ಪ್ರಧಾನಿ ಭೇಟಿ ನಂತರ ಸುಂದರ್ ಪಿಚೈ ಘೋಷಣೆ | Google decided to open a global fintech hub in Gujarat – Sundar Pichai’s announcement after PM’s visit

International

oi-Sunitha B

|

Google Oneindia Kannada News

ವಾಷಿಂಗ್ಟನ್ ಜೂನ್ 24: ಪ್ರಧಾನಿಯವರನ್ನು ಭೇಟಿ ಮಾಡಿದ ನಂತರ ಸುಂದರ್ ಪಿಚೈ ಗುಜರಾತ್‌ನಲ್ಲಿ ಗೂಗಲ್ ಜಾಗತಿಕ ಫಿನ್‌ಟೆಕ್ ಕೇಂದ್ರವನ್ನು ತೆರೆಯಲಿದೆ ಎಂದು ಘೋಷಿಸಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಬಳಿಕ ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಗೂಗಲ್ ತನ್ನ ಗ್ಲೋಬಲ್ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದರು.

Google decided to open a global fintech hub in Gujarat - Sundar Pichais announcement after PMs visit

ಭಾರತದ ಪ್ರಧಾನಿ ಮೋದಿ ಅವರು ಜೂನ್ 21-24 ರವರೆಗೆ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಅವರು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ರಕ್ಷಣಾ ಮತ್ತು ವ್ಯಾಪಾರ ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದ ವೇಳೆ ಶ್ವೇತಭವನದಲ್ಲಿ ಅಮೆರಿಕ-ಭಾರತೀಯ ಉದ್ಯಮಿಗಳು ಮತ್ತು ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾದರು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಕೂಡ ಭಾಗವಹಿಸಿದ್ದರು.

ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಜಿಲ್ ಬಿಡೆನ್ ಅವರು ಪ್ರಧಾನಿ ಮೋದಿಯವರೊಂದಿಗೆ ಭೋಜನ ಕೂಟವನ್ನು ಆಯೋಜಿಸಿದ್ದರು. ಅಲ್ಲಿ ಅವರು ಪಿಚೈ ಅವರನ್ನು ಹೊರತುಪಡಿಸಿ ಉನ್ನತ ಕಂಪನಿಗಳ ಸಿಇಒಗಳಾದ ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಆಪಲ್‌ನ ಟಿಮ್ ಕುಕ್, ಓಪನ್‌ಎಐನ ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಎಎಮ್‌ಡಿಯ ಲಿಸಾ ಸೇರಿದಂತೆ ಹಲವರೊಂದಿಗೆ ಸಂವಾದ ನಡೆಸಿದರು. ಇವರೊಂದಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಬಳಿಕ ಗುಜರಾತ್‌ನಲ್ಲಿ ಗೂಗಲ್ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಿದೆ ಎಂದು ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಅವರು, “ಪ್ರಧಾನಿ ಮೋದಿಯವರ ಯುಎಸ್ ಭೇಟಿ ಗೌರವ ತಂದಿದೆ. ಭಾರತದ ಡಿಜಿಟೈಸೇಶನ್ ಫಂಡ್‌ನಲ್ಲಿ ಗೂಗಲ್ $ 10 ಬಿಲಿಯನ್ ಹೂಡಿಕೆ ಮಾಡುತ್ತಿದೆ ಎಂದು ನಾವು ಪ್ರಧಾನಿಯೊಂದಿಗೆ ಹಂಚಿಕೊಂಡಿದ್ದೇವೆ. ನಾವು ಗುಜರಾತ್‌ನಲ್ಲಿ ನಮ್ಮ ಗ್ಲೋಬಲ್ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದಾಗಿ ಘೋಷಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಧಾನಿಯವರ ದೂರದೃಷ್ಟಿ ಅವರ ಸಮಯಕ್ಕಿಂತ ಮುಂದಿದೆ. ನಾನು ಈಗ ಅದನ್ನು ಇತರ ದೇಶಗಳು ಅನುಸರಿಸಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಅನೇಕ ಪ್ರದೇಶಗಳಿಗೆ ಆಹ್ವಾನ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಫಿನ್‌ಟೆಕ್, ಸೈಬರ್ ಭದ್ರತಾ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಸಹಕಾರಕ್ಕಾಗಿ ಪಿಚೈ ಅವರನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. ಇಬ್ಬರೂ ಗೂಗಲ್ ಮತ್ತು ಭಾರತದಲ್ಲಿನ ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗದ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.

English summary

After the Prime Minister’s visit, Sundar Pichai has announced that he has decided to open a global fintech hub in Gujarat.

Story first published: Saturday, June 24, 2023, 9:43 [IST]

Source link