Bollywood
oi-Muralidhar S
90ರ
ದಶಕದಲ್ಲಿ
ಕೊನೆಯಲ್ಲಿ
ಶುರುವಾಗಿದ್ದ
ಟಿವಿ
ಶೋ
‘CID’.
ಸೋನಿ
ಟಿವಿಯಲ್ಲಿ
ಪ್ರಸಾರ
ಆಗುತ್ತಿದ್ದ
ಈ
ತನಿಖಾ
ಶೋ
ಕಿರುತೆರೆ
ಲೋಕದಲ್ಲಿ
ತುಂಬಾನೇ
ಜನಪ್ರಿಯತೆ
ಕಂಡಿತ್ತು.
ಎಂಟರ್‌ಟೈನ್ಮೆಂಟ್
ಚಾನೆಲ್
ಸೋನಿ
ಟಿವಿಯಲ್ಲಿ
ಪ್ರಸಾರವಾದ
ಅತ್ಯಂತ
ಯಶಸ್ವಿ
ಶೋಗಳಲ್ಲಿ
ಇದೂ
ಕೂಡ
ಒಂದು.
‘CID’
ಶೋ
ನೋಡುತ್ತಿದ್ದ
ಅಭಿಮಾನಿಗಳಿಗೆ
ಅದರಲ್ಇ
ನಟಿಸಿದ
ಪ್ರತಿಯೊಂದು
ಪಾತ್ರವೂ
ಪರಿಚಯವಿದೆ.
ಎಸಿಪಿ
ಪ್ರದ್ಯುಮನ್,
ಇನ್‌ಸ್ಪೆಕ್ಟರ್
ಅಭಿಜಿತ್,
ಇನ್‌ಸ್ಪೆಕ್ಟರ್
ದಯಾ
ಎಲ್ಲಾ
ಹೆಸರುಗಳು
ನೆನಪಿನಲ್ಲಿವೆ.
ಆ
ಪಾತ್ರಗಳನ್ನು
ನಿಭಾಯಿಸದವರು
ಕಣ್ಮುಂದೆ
ಬಂದರೆ,
ಇಂದಿಗೂ
ಗುರುತಿಸುವವರಿದ್ದಾರೆ.
ಇದೇ
ಟೀಮ್‌ನಲ್ಲಿದ್ದ
ಇನ್ನೊಂದು
ಜನಪ್ರಿಯ
ಪಾತ್ರ
ಇನ್‌ಸ್ಟೆಕ್ಟರ್
ವಿವೇಕ್.
ಇನ್‌ಸ್ಪೆಕ್ಟರ್
ವಿವೇಕ್
ಪಾತ್ರದಲ್ಲಿ
ನಟಿಸಿದ್ದ
ಆ
ನಟನ
ಅಸಲಿ
ಹೆಸರು
ಕೂಡ
ವಿವೇಕ್..
ಅಂದ್ಹಾಗೆ,
ಪೂರ್ತಿ
ಹೆಸರು
ವಿವೇಕ್
ಮಶ್ರು.
ಸುಮಾರು
ಒಂದು
ದಶಕಗಳಿಂದ
ಈ
ನಟ
ಬಣ್ಣದ
ಲೋಕದಲ್ಲಿ
ಕಾಣಿಸಿಕೊಳ್ಳಲೇ
ಇಲ್ಲ.
ಯಾರು
ಹೆಚ್ಚು
ತಲೆಕೆಡಿಸಿಕೊಂಡಿರಲಿಲ್ಲ.
ಆದರೆ,
ಎರಡು-ಮೂರು
ದಿನಗಳಿಂದ
ವಿವೇಕ್
ಮಶ್ರು
ಬಗ್ಗೆನೇ
ಚರ್ಚೆಯಾಗುತ್ತಿದೆ.
ಅದಕ್ಕೆ
ಕಾರಣ
ಈ
ನಟ
ಆಕ್ಟಿಂಗ್‌ಗೆ
ಗುಡ್
ಬೈ
ಹೇಳಿ
ಬೆಂಗಳೂರಿನಲ್ಲೇ
ಕಾಲೇಜ್
ಒಂದರಲ್ಲಿ
ಕೆಲಸ
ಮಾಡುತ್ತಿದ್ದಾರೆ.
ಇನ್‌ಸ್ಪೆಕ್ಟರ್
ವಿವೇಕ್
ನೆನಪಿಲ್ಲವೇ?
80
ದಶಕದಲ್ಲಿ
ಹುಟ್ಟಿದವರಿಗೆ
CID
ಟಿವಿ
ಶೋ
ಅಚ್ಚಳಿಯದೇ
ಅವರ
ನೆನಪಿನಲ್ಲಿ
ಉಳಿದಿರುತ್ತೆ.
ಅದರಲ್ಲೊಂದು
ಪಾತ್ರ
ಇನ್‌ಸ್ಪೆಕ್ಟರ್
ವಿವೇಕ್
ಕೂಡ
ಅಷ್ಟೇ
ನೆನಪಿದ್ದೇ
ಇರುತ್ತೆ.
ಸೋನಿ
ಟಿವಿಯಲ್ಲಿ
ಪ್ರಸಾರ
ಆಗುತ್ತಿದ್ದ
CIDಯ
ಸ್ಪುರದ್ರೂಪಿ
ನಟ.
ಸುಮಾರು
2006
ರಿಂದ
2012ರವರೆಗೆ
ಇದೇ
CIDಯಲ್ಲಿ
ಇನ್‌ಸ್ಟೆಕ್ಟರ್
ವಿವೇಕ್
ಪಾತ್ರದಲ್ಲಿ
ಕಾಣಿಸಿಕೊಂಡಿದ್ದರು.
Thank
you
so
much
for
your
kindness,
love,
and
appreciation
for
whatever
little
I
have
done.
It
means
a
lot
to
me
and
it
is
deeply
appreciated!
Infinite
gratitude
and
love,
always.👍🙏🙏🙏☀️⭐️💛
https://t.co/TjD0UJVR9B—
Viivek
Mashru
(@VIIVEKMASHRU)
June
21,
2023
ಆದರೆ,
ಇದ್ದಕ್ಕಿದ್ದ
ಹಾಗೇ
ಕಿರುತೆರೆಯಿಂದ,
ಬಣ್ಣದ
ಪ್ರಪಂಚದಿಂದ
ದೂರುವೇ
ಉಳಿದಿದ್ದಾರೆ.
ಹೆಚ್ಚು
ಕಡಿಮೆ
11
ವರ್ಷಗಳಿಂದ
ನಟನಾ
ಜಗತ್ತಿನಲ್ಲಿ
ಮತ್ತೆ
ಕಾಣಿಸಿಕೊಂಡೇ
ಇಲ್ಲ.
ಇಷ್ಟು
ದಿನ
ತೆರೆಮರೆಯಲ್ಲಿದ್ದ
ವಿವೇಕ್
ಈಗ
ಸೋಶಿಯಲ್
ಮೀಡಿಯಾದಲ್ಲಿ
ದೊಡ್ಡ
ಸಂಚಲನವನ್ನೇ
ಸೃಷ್ಟಿಸಿದ್ದಾರೆ.
ಅಷ್ಟಕ್ಕೂ
ವಿವೇಕ್
ದಿಢೀರನೇ
ಸೀನ್‌ಗೆ
ಬಂದಿದ್ದೇಗೆ?
ನೆಟ್ಟಿಗರು
ವಿವೇಕ್
ಹೆಸರು
ತೆಗೆದಿದ್ದೇಕೆ?
ಇದೇ
ಒಂದು
ಇಂಟ್ರೆಸ್ಟಿಂಗ್
ಸ್ಟೋರಿ.
ವಿವೇಕ್
ನೆಟ್ಟಿಗರ
ಕಣ್ಣಿಗೆ
ಬಿದ್ದಿದ್ದೇಗೆ?
ಟ್ವಿಟರ್
ಬಳಕೆದಾರರೊಬ್ಬರು
ಎರಡು
ತಿಂಗಳ
ಹಿಂದೆ
ನಟ
ವಿವೇಕ್
ಫೋಟೊ
ಹಾಕಿ
”
ನಿಮಗೆ
ಇವರು
ಗೊತ್ತಿದ್ದರೆ,
ನಿಮ್ಮ
ಬಾಲ್ಯ
ಅದ್ಭುತವಾಗಿತ್ತು
ಎಂದರ್ಥ”
ಎಂದು
ಪೋಸ್ಟ್
ಮಾಡಿದ್ದರು.
ಇದನ್ನು
5
ಮಿಲಿಯನ್‌ಗೂ
ಅಧಿಕ
ಮಂದಿ
ವೀಕ್ಷಿಸಿದ್ದರು.
ಇದಾದ
ಸುಮಾರು
ಎರಡು
ತಿಂಗಳ
ಬಳಿಕ
ವಿವೇಕ್
ಈ
ಟ್ವೀಟ್‌ಗೆ
ಪ್ರತಿಕ್ರಿಯಿಸಿದ್ದರು.
ಇದರ
ಮಧ್ಯೆ
ಇನ್ನೊಂದು
ಟ್ವೀಟ್
ವಿವೇಕ್
ಹಿನ್ನೆಲೆ
ಹುಡುಕುವುದಕ್ಕೆ
ಕಾರಣವಾಯ್ತು.
46ನೇ
ವಯಸ್ಸಿನಲ್ಲಿ
“ಅಮ್ಮ
ಆಗ್ತಿದ್ದೀನಿ”
ಎಂದು
ವಿಡಿಯೋ
ಬಿಟ್ಟ
‘ಸೂರ್ಯವಂಶ’
ನಟಿ:
ಆದ್ರೆ
ಕೊನೆಯಲ್ಲೊಂದು
ಟ್ವಿಸ್ಟ್
ಮೋನಿಕಾ
ಶರ್ಮಾ
ಅನ್ನೋರು
“ಇವರು
ನನ್ನ
ಸಹೋದರ
ಕಾಲೇಜಿನಲ್ಲಿ
ಪ್ರೊಫೆಸರ್
ಆಗಿದ್ದಾರೆ.
ನಾನು
ಸುಳ್ಳು
ಹೇಳುತ್ತಿಲ್ಲ”
ಎಂದು
ಟ್ವೀಟ್
ಮಾಡಿದ್ದರು.
ಒಂದಿಷ್ಟು
ಹುಡುಕಾಟದ
ಬಳಿಕ
ಬೆಂಗಳೂರಿನ
ಕಾಲೇಜ್
ಒಂದರಲ್ಲಿ
ಕೆಲಸ
ಮಾಡುತ್ತಿದ್ದಾರೆ
ಅನ್ನೋದು
ಗೊತ್ತಾಗಿತ್ತು.
ಇಲ್ಲಿಂದ
ಎಲ್ಲಾ
ಮಾಧ್ಯಮಗಳಲ್ಲೂ
CID
ವಿವೇಕ್
ಬಗ್ಗೆನೇ
ಸುದ್ದಿಯಾಗುತ್ತಿದೆ.
ಬೆಂಗಳೂರಿನ
ಸಿಎಂಆರ್
ಯುನಿವರ್ಸಿಟಿಯಲ್ಲಿ
ಕೆಲಸ
CID
ವಿವೇಕ್
ಮೂಲತ:
ಬೆಂಗಳೂರಿನರೇ.
ಅವರ
ಕುಟುಂಬ
ಇಲ್ಲೇ
ನೆಲೆಸಿದೆ.
ಅವರ
ತಂದೆ
ಬ್ಯುಸಿನೆಸ್
ಕೂಡ
ಇದೆ.
CIDಯಲ್ಲಿ
ನಟಿಸಿದ
ಬಳಿಕ
ಅವರ
ಕುಟುಂಬವನ್ನು
ನೋಡಿಕೊಳ್ಳುವುದಕ್ಕೆ
ಬೆಂಗಳೂರಿಗೆ
ಹಿಂತಿರುಗಬೇಕಿತ್ತು.
ಹೀಗಾಗಿ
ನಟನೆಗೆ
ಗುಡ್
ಬೈ
ಹೇಳಿದ್ದರು.
ಆ
ನಂತರ
ಹತ್ತು
ಹಲವು
ಕೆಲಸಗಳನ್ನು
ಮಾಡಿದ್ದರು.
ಕೊನೆಗೆ
ಟೀಚಿಂಗ್
ವೃತ್ತಿಯನ್ನು
ಆಯ್ಕೆ
ಮಾಡಿಕೊಂಡಿದ್ದಾರೆ.
21
ವರ್ಷದ
ನಟಿಯ
ತುಟಿಗೆ
ಚುಂಬನ:
ಟೀಕೆಗೊಳಗಾದ
ನವಾಜುದ್ದೀನ್
ಸಿದ್ಧಿಕಿಯ
ವಾದವೇನು?
ಅಂದ್ಹಾಗೆ
ವಿವೇಕ್
ಮಶ್ರು
ಬೆಂಗಳೂರಿನ
ಸಿಎಂಆರ್
ಯುನಿವರ್ಸಿಯಲ್ಲಿ
ಕೆಲಸ
ಮಾಡುತ್ತಿರೋದು
ನಿಜ.
ಆದರೆ,
ಪ್ರೊಫೆಸರ್
ಅಲ್ಲ.
ಬದಲಿಗೆ
ಕಾಮನ್
ಕೋರ್
ಕರಿಕ್ಯೂಲಂ
ವಿಭಾಗದ
ನಿರ್ದೇಶಕರಾಗಿ
ಕೆಲಸ
ಮಾಡುತ್ತಿದ್ದಾರೆ
ಅನ್ನೋದು
ಅವರ
ಲಿಂಕ್ಡ್
ಇನ್
ಪ್ರೊಫೈಲ್‌ನಿಂದ
ತಿಳಿದು
ಬಂದಿದೆ.
English summary
CID TV Series Actor Inspector Vivek is now a professor at CMR University, Bengaluru: Know More
Saturday, June 24, 2023, 22:15
Story first published: Saturday, June 24, 2023, 22:15 [IST]