ಬಿಎಲ್‌ ಸಂತೋಷ್‌ ರಕ್ಷಿಸಲು ಪ್ರಹ್ಲಾದ್‌ ಜೋಶಿ ತಲೆದಂಡ? ಬಿಜೆಪಿಯ ಒಳಗೊಳಗೇ ನಡೆಯುತ್ತಿದೆ ಸ್ಫೋಟಕ ಬೆಳವಣಿಗೆ | Will BJP High Command Expels Pralhad Joshi to Save BL Santosh? Inside Story

Karnataka

oi-Ravindra Gangal

By ಒನ್‌ಇಂಡಿಯಾ ಡೆಸ್ಕ್

|

Google Oneindia Kannada News

ಬೆಂಗಳೂರು, ಜೂನ್‌ 24: ಕರ್ನಾಟಕದಲ್ಲಿನ ಹೀನಾಯ ಸೋಲು ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ತಲ್ಲಣಗೊಳಿಸಿದೆ. ಚುನಾವಣೆ ಫಲಿತಾಂಶ ಬಂದು ನಲವತ್ತು ದಿನ ಕಳೆದರೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಇದಕ್ಕೆ ಕಾರಣ ಬಿಜೆಪಿಯ ಒಳಗೊಳಗೇ ನಡೆಯುತ್ತಿರುವ ಸಂಘರ್ಷಗಳೆಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಕರ್ನಾಟಕದಲ್ಲಿನ ಸೋಲಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲು ಬಿಜೆಪಿ ಮಂದಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಲಿಂಗಾಯತರನ್ನು ಸೆಳೆಯುವ ಲೆಕ್ಕಾಚಾರ

ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿ ಪರ ನಿಂತಿಲ್ಲವೆಂಬುದು ಫಲಿತಾಂಶದಿಂದ ತಿಳಿದುಬಂದಿದೆ. ಇದಕ್ಕೆ ಕಾರಣ, ಬಿಜೆಪಿ ಮಾಡಿಕೊಂಡಿರುವ ಯಡವಟ್ಟು ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಲಿಂಗಾಯತರು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಅರಿತುಕೊಳ್ಳುವಲ್ಲಿ ಬಿಜೆಪಿ ಸೋತಿತು.

Will BJP High Command Expels Pralhad Joshi to Save BL Santosh? Inside Story

ಆ ನಂತರ, ಚುನಾವಣೆ ಹೊಸ್ತಿಲಲ್ಲಿರುವಾಗಲೇ ಬಿಜೆಪಿ ಹಲವು ತಪ್ಪುಗಳನ್ನು ಮಾಡಿತು. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಿತು. ಈ ಇಬ್ಬರು ನಾಯಕರು ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರು. ಜಗದೀಶ್‌ ಶೆಟ್ಟರ್‌ ಸೋತರೂ ಸಹ ಎಂಎಲ್‌ಸಿಯಾಗಿ ನೇಮಕವಾಗಿದ್ದಾರೆ. ಇನ್ನು ಲಕ್ಷ್ಮಣ ಸವದಿ ಬಹುಮತಗಳ ಅಂತರದಿಂದ ಜಯಸಾಧಿಸಿದ್ದಾರೆ.

ಸಂಕಷ್ಟದಲ್ಲಿ ಕರ್ನಾಟಕ ಬಿಜೆಪಿ

ಈ ಎಲ್ಲ ಬೆಳವಣಿಗೆಗಳು ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಕಷ್ಟಕ್ಕೆ ತಳ್ಳಿವೆ. ಬಿಜೆಪಿಯಲ್ಲಿ ಎರಡು ಬಣಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರ ನಡುವೆ ಅಸಮಾಧಾನವಿದೆ ಎನ್ನಲಾಗುತ್ತಿದೆ.

Will BJP High Command Expels Pralhad Joshi to Save BL Santosh? Inside Story

ಬಿಜೆಪಿ ಸೋಲಿಗೆ ಸಂತೋಷ್‌ ಹಾಗೂ ಪ್ರಹ್ಲಾದ್‌ ಜೋಶಿ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಕಾರಣವೆಂದು ಹೇಳಲಾಗುತ್ತಿದೆ. ಬಿಎಲ್‌ ಸಂತೋಷ್‌ ಅವರ ಮಾತುಗಳನ್ನು ಕೇಳಿರುವ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಹಂಚಿಕೆಯಲ್ಲಿ ಯಡವಟ್ಟು ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತೆ ಲಿಂಗಾಯತರನ್ನು ಸೆಳೆಯುವ ನಿಟ್ಟಿನಲ್ಲಿ ಯತ್ನ ನಡೆಸುತ್ತಿದೆ ಎನ್ನಲಾಗಿದೆ. ಬಿಎಸ್‌ ಯಡಿಯೂರಪ್ಪ ಅವರನ್ನು ಮುನ್ನೆಲೆಗೆ ತರಲು ಬಿಜೆಪಿ ಮುಂದಾಗಿದೆ. ಲಿಂಗಾಯತರ ಸಿಟ್ಟನ್ನು ಕಡಿಮೆ ಮಾಡಲು ಪ್ರಹ್ಲಾದ್‌ ಜೋಶಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಬಹುದು ಎಂದು ಪಕ್ಷದ ಮೂಲಗಳು ಹೇಳಿವೆ.

Will BJP High Command Expels Pralhad Joshi to Save BL Santosh? Inside Story

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಹ್ಲಾದ್‌ ಜೋಶಿ ಅವರ ತಲೆದಂಡ ಮಾಡಿದರೆ, ಲಿಂಗಾಯರ ಸಿಟ್ಟು ಸ್ಪಲ್ಪ ಮಟ್ಟಿಗೆ ತನ್ನಗಾಗಬಹುದು ಎಂಬ ಚಿಂತನೆಯಲ್ಲಿ ಹೈಕಮಾಂಡ್‌ ಮುಳುಗಿದೆ ಎಂಬ ಮಾತುಗಳು ಕೇಳಿಬಂದಿದೆ. ಬಿಎಲ್‌ ಸಂತೋಷ್‌ರನ್ನು ಉಳಿಸಲು ಜೋಶಿಯನ್ನು ಉರುಳಿಸಲಾಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

English summary

BJP High Command backing BL Santosh expels Union Minister Pralhad Joshi In Upcoming Lok Sabha Election | Know more at Oneindia Kannada.

Story first published: Saturday, June 24, 2023, 11:56 [IST]

Source link