ಚೀನಾ ವಿರುದ್ಧ ಭಾರತವನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ಳುವ ಉದ್ದೇಶ ನಮ್ಮದಲ್ಲ: ಅಮೆರಿಕ ಸ್ಪಷ್ಟನೆ | America said that India is a sovereign nation after PM Modi visit

International

oi-Malathesha M

|

Google Oneindia Kannada News

ವಾಷಿಂಗ್ಟನ್: ಚೀನಾ ಮತ್ತು ಭಾರತದ ಮಧ್ಯೆ ಸಾಕಷ್ಟು ಗೊಂದಲ ಹಾಗೂ ವಿವಾದಗಳು ಇವೆ. ಹೀಗಾಗಿ ಅಮೆರಿಕನ್ನರು ಭಾರತದ ಜೊತೆ ಸಂಬಂಧ ಬೆಳೆಸುತ್ತಿದ್ದು, ಚೀನಾ ವಿರುದ್ಧ ಅಸ್ತ್ರವಾಗಿ ಭಾರತವನ್ನು ಅಮೆರಿಕ ಬಳಸಿಕೊಳ್ಳುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪಕ್ಕೆ ಅಮೆರಿಕ ಖಡಕ್ ರಿಯಾಕ್ಷನ್ ಕೊಟ್ಟಿದ್ದು, ಆರೋಪ ಮಾಡಿದವರ ಬಾಯಿ ಮುಚ್ಚಿಸಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಉದ್ದೇಶ ಚೀನಾಗೆ ಪ್ರತಿಯಾಗಿ ಭಾರತವನ್ನು ಸಾಧನವಾಗಿ ಬಳಸಿಕೊಳ್ಳುವುದಾಗಿರಲಿಲ್ಲ. ರಕ್ಷಣಾ ಕ್ಷೇತ್ರವು ಸೇರಿದಂತೆ ಎರಡೂ ದೇಶಗಳ ಬಾಂಧವ್ಯ ಗಟ್ಟಿಗೊಳಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಶ್ವೇತಭವನ ತನ್ನ ಮಹತ್ವದ ಹೇಳಿಕೆಯಲ್ಲಿ ಪ್ರಸ್ತಾಪಿಸಿದೆ. ಇದಲ್ಲದೆ ಭಾರತ ಹಾಗೂ ಹಿಂದೂ ಮಹಾಸಾಗರ ಪ್ರದೇಶ ಚೀನಾದ ಸವಾಲು ಎದುರಿಸುತ್ತಿವೆ. ಸಹಜವಾಗಿ ಭಾರತ ಮತ್ತು ಅಮೆರಿಕಕ್ಕೆ ಚೀನಾ ಒಡ್ಡಿರುವ ಸವಾಲುಗಳು ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ಪಟ್ಟಿಯಲ್ಲಿತ್ತು ಎಂದು ಅಮೆರಿಕ ಸ್ಪಷ್ಟನೆ ನೀಡಿದೆ. ಶ್ವೇತಭವನದ ಸಮನ್ವಯಕಾರ ಜಾನ್‌ ಕಿರ್ಬಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ (PM Modi America Visit).

America said that India is sovereign nation

‘ಭಾರತ ಒಂದು ಸಾರ್ವಭೌಮ ರಾಷ್ಟ್ರ’

ಈ ಬಾರಿಯ ಅಮೆರಿಕ ಪ್ರವಾಸ ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದು, ಭಾರತದ ಪ್ರಧಾನಿಗೆ ಸಿಕ್ಕ ಅದ್ಧೂರಿ ಸ್ವಾಗತ ಭಾರತದ ಶತ್ರು ರಾಷ್ಟ್ರಳ ಕಣ್ಣು ಕುಕ್ಕುವಂತೆ ಮಾಡಿದೆ. ಹಾಗೇ ಅಮೆರಿಕ ಕೂಡ ಭಾರತದ ಶಕ್ತಿಯನ್ನು ಹೊಗಳಿದ್ದು, ‘ಚೀನಾ ವಿರುದ್ಧ ಭಾರತವನ್ನು ಸಾಧನವನ್ನಾಗಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿಲ್ಲ. ಭಾರತ ಸಾರ್ವಭೌಮ ರಾಷ್ಟ್ರ, ತನ್ನದೇ ವಿದೇಶಾಂಗ ನೀತಿ ಹೊಂದಿದೆ. ತನ್ನ ನೆರೆ ರಾಷ್ಟ್ರಗಳಿಂದ ಎದುರಾಗುತ್ತಿರುವ ಸವಾಲುಗಳನ್ನು ಆ ರಾಷ್ಟ್ರವೇ ನಿಭಾಯಿಸಬೇಕಿದೆ. ಭಾರತವು ರಕ್ಷಣಾ ವ್ಯವಸ್ಥೆಗಳನ್ನು ರಫ್ತು ಮಾಡುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಅಮೆರಿಕ ಇದನ್ನು ಸ್ವಾಗತಿಸುತ್ತದೆ’ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.

ಅಮೆರಿಕ TO ಈಜಿಪ್ಟ್‌ಗೆ ಪ್ರಧಾನಿ ಮೋದಿ ಪ್ರಯಾಣ: 26 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಈಜಿಪ್ಟ್ ಭೇಟಿ!ಅಮೆರಿಕ TO ಈಜಿಪ್ಟ್‌ಗೆ ಪ್ರಧಾನಿ ಮೋದಿ ಪ್ರಯಾಣ: 26 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಈಜಿಪ್ಟ್ ಭೇಟಿ!

ಚೀನಾ & ಅಮೆರಿಕ ನಡುವೆ ಕಿತ್ತಾಟ

ದಕ್ಷಿಣ ಚೀನಾ ಸಮುದ್ರ, ತೈವಾನ್ ವಿಚಾರವೂ ಸೇರಿದಂತೆ ಹಲವು ಸಂಗತಿಗಳಲ್ಲಿ ಚೀನಾ ಮತ್ತು ಅಮೆರಿಕ ಕಿತ್ತಾಡುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಚೀನಾ ಜೊತೆಗೆ ಸಂಬಂಧ ವೃದ್ಧಿಗೆ ಅಮೆರಿಕ ಯತ್ನಿಸಿತ್ತು. ಆದ್ರೆ ಅದು ಯಾಕೋ ಸರಿಯಾಗುತ್ತಿಲ್ಲ, ಹೀಗಾಗಿ ಭಾರತದ ಜೊತೆ ದೊಡ್ಡಣ್ಣ ಅಮೆರಿಕ ಸಂಬಂಧ ಬೆಸೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಎಲ್ಲಾ ಆರೋಪಗಳಿಗೆ ಅಮೆರಿಕ ಉತ್ತರ ನೀಡಿದೆ. ಈ ಮಧ್ಯೆ ಚೀನಾ ಜೊತೆಗೂ ಸಂಬಂಧ ಕಾಪಾಡಿಕೊಳ್ಳುವ ಮುನ್ಸೂಚನೆ ನೀಡಿದೆ. ಇಷ್ಟೆಲ್ಲದರ ಮಧ್ಯೆ ಪ್ರಧಾನಿ ಮೋದಿ ಅಮೆರಿಕ ಭೇಟಿ ಸಕ್ಸಸ್ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

America said that India is sovereign nation

ಈಜಿಪ್ಟ್‌ಗೆ ತೆರಳಿದ ಪ್ರಧಾನಿ ಮೋದಿ

3 ದಿನಗಳ ಮಹತ್ವದ ಅಮೆರಿಕ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಈಜಿಪ್ಟ್‌ಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಈಜಿಪ್ಟ್‌ ಅಧ್ಯಕ್ಷ ಅಬ್ದುಲ್‌ ಫತ್ತಾಹ್‌ ಅಲ್‌ ಆಹ್ವಾನದ ಹಿನ್ನೆಲೆ ಪಿಎಂ ಮೋದಿ ಈಜಿಪ್ಟ್‌ಗೆ ತೆರಳಿದ್ದಾರೆ. ಈಗ ಜಾಗತಿಕ ಮಟ್ಟದಲ್ಲಿ ಭಾರತದ ಸ್ನೇಹ ಎಲ್ಲರಿಗೂ ಬೇಕು. ಹೀಗಾಗಿ ಅಮೆರಿಕದಿಂದ ಹಿಡಿದು ಈಜಿಪ್ಟ್ ತನಕ ಪ್ರತಿಯೊಂದು ರಾಷ್ಟ್ರವು ಭಾರತದ ಸ್ನೇಹಕ್ಕೆ ಹಾತೊರೆಯುತ್ತಿವೆ. ಈ ಸಂದರ್ಭದಲ್ಲೇ ಅಮೆರಿಕ ಕೂಡ ಭಾರತದ ಪ್ರಧಾನಿ ಮೋದಿ ಭೇಟಿ ಹಾಗೂ ಚರ್ಚೆಯಾದ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿರುವುದು ಕುತೂಹಲ ಕೆರಳಿಸಿದೆ.

26 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ!

ಅಂದಹಾಗೆ 1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಅತ್ತ ಅಮೆರಿಕ ಅಧ್ಯಕ್ಷ ಬೈಡನ್‌ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಆಹ್ವಾನದ ಹಿನ್ನೆಲೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸವನ್ನ ಕೈಗೊಂಡಿದ್ರು. ಈ ಭೇಟಿ ಮುಗಿಸಿಕೊಂಡು ನೇರವಾಗಿ ಈಜಿಪ್ಟ್‌ಗೆ ತೆರಳಿದ್ದಾರೆ ಪಿಎಂ ಮೋದಿ. ಇದೇ ವೇಳೆ ಮೊದಲನೇ ಮಹಾಯುದ್ಧದ ವೇಳೆ ಹುತಾತ್ಮರಾದ 4,000 ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು, ಕೈರೋದ ಎಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಕೂಡ ಪ್ರಧಾನಿ ಮೋದಿ ಭೇಟಿ ನೀಡಿಲಿದ್ದಾರೆ.

English summary

America said that India is a sovereign nation after PM Modi visit.

Story first published: Saturday, June 24, 2023, 23:50 [IST]

Source link