Karnataka
oi-Reshma P
ಹಾಸನ, ಜೂನ್ 24: ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನೆಯ ರಾಜ್ಯಕಾರಣಿ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಕೆಲ ವಿಷಯ ವಾಪಾಸ್ ಪಡಿತಿವಿ ಅಂದಿದ್ದಾರೆ. ಭಗತ್ ಸಿಂಗ್, ಸಾವರ್ಕರ್ ಸೇರಿದಂತೆ ಮೂರು ಪಾಠ ವಾಪಾಸ್ ತಗೋತೀವಿ ಅಂದ್ದಿದ್ದಾರೆ. ಸಾವರ್ಕರ್, ಭಗತ್ ಸಿಂಗ್ ಇವ್ರೆಲ್ಲಾ ದೇಶಕ್ಕೆ ಜೀವ ಮುಡುಪಿಟ್ಟವರು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಭದ್ರತೆ ಬಗ್ಗೆ ಕಾಳಜಿ ಇಲ್ಲ. ಉತ್ತಮ ವಿಚಾರ ಯಾರು ಬರೆದ್ರೆನು ವಿಷಯ ಮುಖ್ಯ.
ನೀವು ಶಿಕ್ಷಣ ಪಡೆಯುವ ಮಕ್ಕಳ ವಿಚಾರದಲ್ಲಿ ರಾಜಕೀಯ ಮಾಡ ಬೇಡಿ. ಗಾಂಧೀಯನ್ನೂ ಕೂಡ ಅಂಡಮಾನ್ ಜೈಲಿನಲ್ಲಿಟ್ಟಿರಲಿಲ್ಲ. ನೆಹರು ಅವ್ರನ್ನೂ ಅಂಡಮಾನ್ ಜೈಲಿನಲ್ಲಿ ಇಟ್ಟಿರಲಿಲ್ಲ. ನೀವು ಇನ್ನೊಮ್ಮೆ ಚರ್ಚೆ ಮಾಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
ಅಧಿಕಾರಕ್ಕೆ ಬಂದ್ರೆ ಏನು ಬೇಕಾದ್ರು ಮಾಡಬಹುದೇನು? ಇದ್ರಿಷ್ ಪಾಷ ಎಂಬ ಗೋವು ಕಳ್ಳನಿಗೆ 25 ಲಕ್ಷ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇದೆಂತ ವಿಪರ್ಯಾಸ? ಇವತ್ತು ಅವನ ಪೋಸ್ಟ್ ಮಾರ್ಟಮ್ ದಾಖಲೆಯಲ್ಲಿ ಸಹಜ ಸಾವು ಅಂತ ಬಂದಿದೆ. ಅಂತವನಿಗೆ 25 ಲಕ್ಷ ಕೊಟ್ಟಿದ್ದು, ಇತನ ಮೇಲೆ 6 ಗೋವು ಕಳ್ಳತನ ಕೇಸ್ ಮಾಡಲಾಗಿದೆ. 25 ಲಕ್ಷ ರೂಗಳನ್ನ ಒಬ್ಬ ಗೋ ಕಳ್ಳನಿಗೆ ಕೊಟ್ಟಿರೋದು ಕೂಡಲೇ ವಾಪಾಸ್ ಪಡೆಯಬೇಕು. ಇದು ರೈತರಿಗೆ ಮಾಡಿದ ದ್ರೋಹ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಮೊದಲು ಜೋಡೆತ್ತು ನಂತರ ಕರು, ಆಮೇಲೆ ಕೈ ಬಂದಿದ್ದು. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಕೆಲವರಿಗೆ ಮದ ಬಂದಿದೆ. ಹಿಂದು ಸಂಘಟನೆ ಬ್ಯಾನ್ ಮಾಡ್ತಿವಿ, ಹಲಾಲ್, ಹಿಜಾಬ್ ಬಗ್ಗೆ ಮಾತನಾಡಿದರೇ ಒದ್ದು ಒಳಗಾಗ್ತಿವಿ ಅಂತ ಕೆಲವು ಮಂತ್ರಿಗಳೇ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಎಮರ್ಜನ್ಸಿಯಿತ್ತು. ಆಗಲೇ ನಮ್ಮೆದೆಗೆ ಗುಂಡಿಟ್ಟರೂ ಹಿಂದು ಸಂಘಟನೆ ಹೆದರಲಿಲ್ಲ.ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಬಿಜೆಪಿಯವರು ನಾಟಕ ಮಾಡಿದ್ರು. ಒಂದೇ ಒಂದು ಗೋ ರಕ್ಷಣೆ ಮಾಡಲಿಲ್ಲ.
ಇನ್ನೂ ಈ ಬಗ್ಗೆ ನಿಮಗೆ ಮಾಹಿತಿ ಇದ್ರೂ ನಾವು ಮಾಹಿತಿ ಕೊಟ್ರು ಒಂದೇ ಗೋವು ಹಿಡಿಯಲಿಲ್ಲ. ಮತಾಂತರ ಕಾಯಿದೆ ಜಾರಿ ಕೇವಲ ಪೇಪರಲ್ಲಿ ತಂದ್ರು. ಕಾನೂನು ಬಾಹಿರ ಎಂದು ಒಂದೇ ಒಂದು ಚರ್ಚ್ ನ್ನು ತೆರವುಗೊಳಿಸಲು ಬಿಜೆಪಿಗೆ ಆಗಲಿಲ್ಲ. ಇನ್ನ ಕಾಂಗ್ರೆಸ್ ಅದೇ ಕಥೆ. ಕೇವಲ ಮುಸ್ಲಿಂ ಓಲೈಕೆಗೆ ಬಿದ್ದು ತಳ ಸೇರಿದ್ರೆ ಇದೇ ರೀತಿ ಮತ್ತೆ ಮಾಡಿದ್ರೆ ಅದೇ ಗತಿ ಬರುವುದು ಎಂದು ಎಚ್ಚರಿಸಿದರು.
ಮತ್ತು ಗೋ ಹತ್ಯೆ ಬಿಲ್ ಪಾಸ್ ಮಾಡಬಾರದು ಅಂತ ರಾಜ್ಯಾಪಾಲರಿಗೆ ನಾವು ಮನವಿ ಪತ್ರ ಸಲ್ಲಿಸುತ್ತವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆಝಾನ್ ಡಬಲ್ ಸೌಂಡ್ ಆಗಿದೆ. ಪ್ರಾರ್ಥನೆಗೆ ನಮ್ಮ ವಿರೋದ ಇಲ್ಲ. ಆದರೆ ಬೆಳಿಗ್ಗೆ 5 ಗಂಟೆಗೆ ಆಝಾನ್ ಕೂಗೋದು ನಮ್ಮ ವಿರೋಧವಿದೆ. ಸುಪ್ರೀಂಕೋರ್ಟ್‌ಗೆ ಗೌರವ ಕೊಡಿ ಅನ್ನೊದು ನಮ್ಮ ಹೇಳಿಕೆ. ಅದನ್ನಾದ್ರು ಕಾಂಗ್ರೆಸ್ ಹೇಳಲಿ ಎಂದು ಕುಟುಕಿದರು.
English summary
Karnataka Governor Not to Revoke Anti-cow Slaughter Law Pramod Muthalik Pleaded.