Bengaluru
oi-Shankrappa Parangi
ಬೆಂಗಳೂರು, ಜುಲೈ 28: ನೆರೆಯ ಹೈದರಾಬಾದ್ಗೆ ತೆರಳಬೇಕಿದ್ದ ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ವಿಮಾನ ಹಾರಿದ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜಲೈ 27ರಂದು ಗುರುವಾರ ರಾಜ್ಯಪಾಲರು ಹೈದರಾಬಾದ್ಗೆ ತೆರಳಬೇಕಿತ್ತು. ಆದರೆ ಅವರು ವಿಮಾನ ನಿಲ್ದಾಣಕ್ಕೆ ಸುಮಾರು 10 ನಿಮಿಷ ತಡವಾಗಿ ತಲುಪಿದರು. ಸಿಬ್ಬಂದಿ ನಿರ್ಲಕ್ಷ್ಯೆಯಿಂದಾಗಿ ಅವರು ವಿಮಾನ ಮಿಸ್ ಮಾಡಿಕೊಂಡರು ಹತ್ತು ನಿಮಿಷ ವಿಳಂಬವಾಗಿ ಏರ್ಪೋರ್ಟ್ ತಲುಪಿದ ಥಾವರ್ ಚಂದ್ ಗೆಲ್ಹೋಟ್ ಅವರನ್ನು ಬಿಟ್ಟು ವಿಮಾನ ಹಾರಿದೆ.
ರಾಜ್ಯಪಾಲರು ಎಂದರೆ ಅವರು ರಾಜ್ಯದ ಪ್ರಥಮ ಪ್ರಜೆ. ಈ ಘಟನೆಯಿಂದ ನನಗೆ ಅಗೌರವ ಉಂಟಾಗಿದೆ. ನನ್ನ ವಿಚಾರದಲ್ಲಿ ಶಿಷ್ಟಾಚಾರ (Protocal) ಉಲ್ಲಂಘಿಸಲಾಗಿದೆ. 10 ನಿಮಿಷ ತಡವಾಗಿದ್ದಕ್ಕೆ ಕಾಯದೇ ಬಿಟ್ಟು ಹೋಗಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಏರ್ಏಶಿಯಾ ಏರ್ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾತೃಭಾಷೆ ಶಿಕ್ಷಣ ಬೇಗ ಕಲಿಯಲು ಸಹಕಾರಿ: ಥಾವರ್ ಚಂದ್ರ ಗೆಹಲೋಟ್
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳಲು ಅವರು ಬೆಂಗಳೂರಿನಿಂದ ಗುರುವಾರ ಹೈದರಾಬಾದ್ಗೆ ಹೊರಟಿದ್ದರು. ಹತ್ತು ನಿಮಿಷ ತಡವಾಗಿ ಅವರು ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಅಷ್ಟರಲ್ಲಿ ಈ ಪ್ರಮಾದ ನಡೆದಿದೆ. ಬಳಿಕ ಒಂದು ತಡವಾಗಿ ಅವರು ಹೈದರಾಬಾದ್ಗೆ ತೆರಳಿದ್ದಾರೆ.
ರಾಜ್ಯಪಾಲರನ್ನು ಬಿಟ್ಟು ಹೋಗುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ ಏರ್ಏಶಿಯಾ ಏರ್ಲೈನ್ಸ್ ವಿರುದ್ಧ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ವಿಮಾನ ಮಿಸ್ ಆಗಲು ಕಾರಣವೇನು, ತಪ್ಪಿತಸ್ಥರ ವಿರುದ್ಧ ಕ್ರಮವಹಿಸುವಂತೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶುಕ್ರವಾರ ಈ ದೂರಿನ ಮೇರೆಗೆ FIR ದಾಖಲಾಗಿ ತನಿಖೆ ಮುಂದುವರಿಯುವ ಸಾಧ್ಯತೆಗಳು ಇವೆ.
English summary
Air Asia flight left leaving Karnataka Governor Thawar Chand Gehlot in Bengaluru airport
Story first published: Friday, July 28, 2023, 11:36 [IST]