Tv
oi-Narayana M
ಬಿಗ್ಬಾಸ್
ಖ್ಯಾತಿಯ
ಚೈತ್ರಾ
ವಾಸುದೇವನ್
ಅಭಿಮಾನಿಗಳಿಗೆ
ಶಾಕ್
ಕೊಟ್ಟಿದ್ದಾರೆ.
ಪತಿ
ಸತ್ಯ
ನಾಯ್ಡುಗೆ
ಡಿವೋರ್ಸ್
ನೀಡಿದ್ದು
ಈ
ವಿಚಾರವನ್ನು
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದಾರೆ.
ಇದ್ದಕ್ಕಿದ್ದಂತೆ
ಡಿವೋರ್ಸ್
ಘೋಷಿಸಿದ್ದಾರೆ.
ಬಹಳ
ಹಿಂದೆಯೇ
ಚೈತ್ರಾ,
ಸತ್ಯ
ನಾಯ್ಡು
ಮದುವೆ
ಆಗಿತ್ತು.
ಇಬ್ಬರು
ಇವೆಂಟ್
ಮ್ಯಾನೇಜ್ಮೆಂಟ್
ಸಂಸ್ಥೆ
ನಡೆಸುತ್ತಿದ್ದಾರೆ.
ಜೊತೆಗೆ
ಚೈತ್ರಾ
ವಾಸುದೇವನ್
ನಿರೂಪಕಿಯಾಗಿಯೂ
ಮಿಂಚುತ್ತಾ
ಬರ್ತಿದ್ದಾರೆ.
ಖಾಸಗಿ
ಸಮಾರಂಭವೊಂದರಲ್ಲಿ
ಸತ್ಯ
ಮತ್ತು
ಚೈತ್ರಾ
ಭೇಟಿಯಾಗಿದ್ದರು.
ಚೈತ್ರಾನ
ನೋಡಿ
ಸತ್
ಇಷ್ಟಪಟ್ಟಿದ್ದರು.
ಬಳಿಕ
ಚೈತ್ರಾ
ಪೋಷಕರನ್ನು
ಒಪ್ಪಿಸಿ
2017ರ
ನವೆಂಬರ್ನಲ್ಲಿ
ಇಬ್ಬರ
ಮದುವೆ
ನಡೆದಿತ್ತು.
ಈವೆಂಟ್
ಮ್ಯಾನೇಜ್ಮೆಂಟ್
ಸಂಸ್ಥೆಯ
ಜೊತೆ
ಜೊತೆಗೆ
ಜಾಹೀರಾತು,
ಕ್ರೀಡಾ
ನಿರೂಪಣೆ,
ಫೋಟೊಶೂಟ್
ನಿರೂಪಣೆಯನ್ನು
ಚೈತ್ರಾ
ಮಾಡುತ್ತಿದ್ದಾರೆ.
ಇದಕ್ಕೆ
ತಮ್ಮ
ಪತಿ
ಹಾಗೂ
ಅತ್ತೆ
ಮಾವನ
ಪ್ರೋತ್ಸಾಹ
ಕೂಡ
ಇದೆ
ಎಂದು
ಹೇಳುತ್ತಿದ್ದಾರೆ.
ಬಿಗ್ಬಾಸ್
ಸೀಸನ್-7ರ
ಸ್ಪರ್ಧಿಯಾಗಿ
ಚೈತ್ರಾ
ಕೆಲವು
ವಾರ
ದೊಡ್ಮನೆಯಲ್ಲಿ
ಇದ್ದರು.
ಇತ್ತೀಚೆಗೆ
ಸೆಲೆಬ್ರೆಟಿಗಳು
ಸೋಷಿಯಲ್
ಮೀಡಿಯಾದಲ್ಲಿ
ತಮ್ಮ
ಡಿವೋರ್ಸ್
ವಿಚಾರಗಳನ್ನು
ಘೋಷಿಸುತ್ತಿದ್ದಾರೆ.
ಇದೀಗ
ಚೈತ್ರಾ
ಕೂಡ
ಅದನ್ನೇ
ಮಾಡಿದ್ದಾರೆ.
“ಎಲ್ಲರಿಗೂ
ನಮಸ್ಕಾರ.
ಹಲವಾರು
ತಿಂಗಳುಗಳಿಂದ
ಸಾಕಷ್ಟು
ಯೋಚಿಸಿದ
ನಂತರ
ನಾನು
ನನ್ನ
ವಿಚ್ಛೇದನದ
ಬಗ್ಗೆ
ನಿಮಗೆ
ಹೇಳಲು
ಧೈರ್ಯವನ್ನು
ತೆಗೆದುಕೊಂಡಿದ್ದೇನೆ.
ಸತ್ಯ
ಮತ್ತು
ನಾನು
ಬೇರೆಯಾಗಿದ್ದೇವೆ.
ನಿಂದನೆ
/ದ್ವೇಷ
ಬೇಡ
ಎಂದು
ನಿಮ್ಮಲ್ಲಿ
ವಿನಂತಿಸಿಕೊಳ್ಳುತೇನೆ.
ನನ್ನ
ಈ
ಸ್ಥಿತಿಯಿಂದ
ಹೊರಬರಲು
ಕಷ್ಟ
ಪಡುತ್ತಿದ್ದೇನೆ.
ಕೆಲಸ
ಮಾತ್ರ
ಜೀವನದಲ್ಲಿ
ಮುನ್ನಡೆಯಲು
ಸಹಾಯ
ಮಾಡುತ್ತದೆ.
ನಾನು
ಈವೆಂಟ್
ಮತ್ತು
ಟಿವಿ
ಉದ್ಯಮದಲ್ಲಿ
10
ವರ್ಷಗಳಿಂದ
ಕೆಲಸ
ಮಾಡಿದ್ದೇನೆ.
ನನ್ನ
ಸೇವೆಯನ್ನು
ಇನ್ನುಮುಂದೆಯೂ
ಮುಂದುವರಿಸಲು
ಬಯಸುತ್ತೇನೆ
ಮತ್ತು
ನಿಮ್ಮಿಂದ
ಹೆಚ್ಚಿನ
ಪ್ರೀತಿ
ಮತ್ತು
ಬೆಂಬಲಕ್ಕಾಗಿ
ಎದುರು
ನೋಡುತ್ತಿದ್ದೇನೆ”
ಎಂದು
ಇನ್ಸ್ಟಾಗ್ರಾಮ್ನಲ್ಲಿ
ಚೈತ್ರಾ
ವಾಸುದೇವನ್
ಬರೆದುಕೊಂಡಿದ್ದಾರೆ.
English summary
Chaitra Vasudevan announces split from husband Sathya naidu. know more.
Friday, July 28, 2023, 10:32