Last Updated:
ಇಂಗ್ಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ಮುಂದುವರೆದಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸತತ 5 ಸೋಲು ಕಂಡಿದೆ.
ಇಂಗ್ಲೆಂಡ್ ವಿರುದ್ಧದ (England vs India) ಮೂರನೇ ಟಿ20 ಪಂದ್ಯದಲ್ಲಿ (T20 Series) ನಮ್ಮ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ (Shreyas Iyer) ಹೇಳಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಮಂಗಳವಾರ ನಾಟಿಂಗ್ಹ್ಯಾಮ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ 125 ರನ್ ಗಳ ಅಂತರದೊಂದಿಗೆ ಭಾರೀ ಗೆಲುವಿನೊಂದಿಗೆ ಟೀಂ ಇಂಡಿಯಾ (Team India) ಸೋಲಿನ ರುಚಿ ತೋರಿಸಿತ್ತು.
ನಾಟಿಂಗ್ಹ್ಯಾಂಮ್ ನಂತಹ ಪಿಚ್ ಗಳಲ್ಲಿ 200 ರನ್ ಬಿಟ್ಟುಕೊಡುವುದು ಸರಿ ಅಲ್ಲ. ಇತ್ತ ಬ್ಯಾಟಿಂಗ್ ಪವರ್ ಪ್ಲೇ ನಲ್ಲೇ ಹೆಚ್ಚು ವಿಕೆಟ್ ಕಳೆದುಕೊಂಡಿದ್ದು ನಮ್ಮ ಗೆಲುವಿನ ಅವಕಾಶಗಳನ್ನು ದೂರ ಮಾಡಿತ್ತು. ನಮ್ಮ ಪ್ರದರ್ಶನ ತೀರ ಕಳಪೆಯಾಗಿತ್ತು. ಈ ರೀತಿ ಭಾರೀ ಅಂತರದೊಂದಿಗೆ ಸೋಲುವುದು ಸ್ವೀಕಾರಾರ್ಹವಲ್ಲ. ಈ ಸೋಲನ್ನು ನಾವು ಸ್ವೀಕರಿಸಲೇಬೇಕಿದೆ. ಅದೇ ರೀತಿ ನಾವು ನಮ್ಮ ಆಟದ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಬೇಕಿದೆ ಎಂದು ಶ್ರೇಯಸ್ ಹೇಳಿದ್ದಾರೆ.
ಈ ಪಿಚ್ನಲ್ಲಿ ಬೌಲರ್ಗಳು 200 ರನ್ ಕೊಟ್ಟಿತ್ತು ಸರಿ ಅಲ್ಲ. ಚೇಸಿಂಗ್ ನಲ್ಲೂ ನಾವು ಪವರ್ ಪ್ಲೇ ನಲ್ಲಿಯೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿದ್ದೆವು. ಇದು ನಮ್ಮ ಸೋಲಿಗೆ ಕಾರಣವಾಯಿತು. ಟೀಂ ಮೀಟಿಂಗ್ ನಲ್ಲಿ ಹಲವು ತಂತ್ರಗಳನ್ನು ಮಾಡಬಹುದು. ಆದರೆ ಮೈದಾನಕ್ಕೆ ಬಂದ ಬಳಿಕ ಪರಿಸ್ಥಿತಿಗೆ ತಕ್ಕಂತೆ ಆಡಬೇಕು ಎಂದು ಹೇಳಿದ್ದಾರೆ.
ಈ ಪಿಚ್ನಲ್ಲಿ ಬೌಲರ್ಗಳಿಗೆ ಹಾರ್ಡ್ ಲೆಂತ್ ಚೆನ್ನಾಗಿ ಮಾಡಬಹುದಿತ್ತು. ಆದರೆ ನಮ್ಮ ಬೌಲರ್ ಗಳು ಹಾರ್ಡ್ ಲೆಂತ್ ಹಾಕಲು ಸಾಧ್ಯವಾಗಲಿಲ್ಲ. ಸೋಲುಗಳ ಕುರಿತು ಯೋಚನೆ ಮಾಡುತ್ತಾ ಕುಳಿತುಕೊಂಡರೆ ಯಾವ ಉಪಯೋಗ ಇರೋದಿಲ್ಲ. ತಂಡದ ಆಟಗಾರರು ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಲು ಪ್ರಯತ್ನಿಸಬೇಕಿದೆ. ನಾವು ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಬೇಕಿದೆ. ನಮ್ಮ ಪ್ರದರ್ಶನ ಚೆನ್ನಾಗಿಲ್ಲ ಎಂದು ಶ್ರೇಯಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡ ಬಳಿಕ ಟೀಂ ಇಂಡಿಯಾ ಆಡಿದ ಐದು ಪಂದ್ಯಗಳಲ್ಲಿ ಸೋಲುಂಡಿದ್ದು, ಒಂದೇ ಒಂದು ಗೆಲುವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿಯಲ್ಲೂ 2-0ಯೊಂದಿಗೆ ಟೀಂ ಇಂಡಿಯಾ ಮುಖಭಂಗ ಅನುಭವಿಸಿತ್ತು. ಈಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲುಂಡಿದ್ದು, ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಟಿ20 ಕ್ರಿಕೆಟ್ ಶುರುವಾದ ಬಳಿಕ ಟೀಂ ಇಂಡಿಯಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 5 ಸತತ ಸೋಲುಗಳನ್ನು ಕಂಡಿದೆ. ಈ ಅಪಖ್ಯಾತಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೆಗಲೇರಿದೆ.
Jul 08, 2026 10:46 AM IST













