ಸರ್ವಾಧಿಕಾರಿ ನಾಡಿಗೆ ರಷ್ಯಾ ರಕ್ಷಣಾ ಸಚಿವರ ಮಹತ್ವದ ವಿಸಿಟ್! | Russian defence minister visits North Korea

International

oi-Malathesha M

|

Google Oneindia Kannada News

ಸಿಯೋಲ್‌: ಉಕ್ರೇನ್ ವಿರುದ್ದ ಭೀಕರ ಯುದ್ಧ ಸಾರಿದ ನಂತರ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ತಿರುಗಿಬಿದ್ದಿವೆ. ಹೀಗಾಗಿ ರಷ್ಯಾ ಜೊತೆಗೆ ನಿಲ್ಲುತ್ತಿರುವ ಬೆರಳೆಣಿಕೆಯಷ್ಟು ದೇಶಗಳ ಪೈಕಿ ಉತ್ತರ ಕೊರಿಯಾ ಕೂಡ ಒಂದು. ಸ್ಥಿತಿ ಹೀಗಿದ್ದಾಗ ಉತ್ತರ ಕೊರಿಯಾ ಜೊತೆಗೆ ಸಂಬಂಧ ವೃದ್ಧಿಗೆ ರಷ್ಯಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಈಗ ಸರ್ವಾಧಿಕಾರಿ ನಾಡಿಗೆ ರಷ್ಯಾ ರಕ್ಷಣಾ ಸಚಿವರು ಮಹತ್ವದ ಭೇಟಿ ನೀಡಿದ್ದಾರೆ.

ಅಂದಹಾಗೆ ಕೊರಿಯನ್‌ ಯುದ್ಧದ 70ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ʻವಿಜಯ ದಿನʼ ಆಚರಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೊಯ್ಗು ನೇತೃತ್ವದ ತಂಡ ಉತ್ತರ ಕೊರಿಯಾಗೆ ಭೇಟಿ ನೀಡಿದೆ. ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಕಳುಹಿಸಿದ್ದ ವಿಶೇಷ ಪತ್ರವನ್ನು ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೊಯ್ಗು, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ಗೆ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಗುಡುಗಿದ್ದ ಕಿಮ್ ಜಾಂಗ್ ಉನ್, ಹೊಸದಾಗಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದ್ದ. ಎಲ್ಲಾ ಘಟನೆ ಬೆನ್ನಲ್ಲೇ ರಷ್ಯಾ ರಕ್ಷಣಾ ಸಚಿವರ ಭೇಟಿ ಕುತೂಹಲ ಕೆರಳಿಸಿದೆ.

russian-defence-minister-visits-north-korea

ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಬೆಂಬಲ!

ಕೆಲವು ದಿನಗಳ ಹಿಂದಷ್ಟೇ ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ರಷ್ಯಾ ಪರ ಉಕ್ರೇನ್ ನಿಲ್ಲಲಿದೆ ಎಂಬ ಸಂದೇಶ ನೀಡಿದ್ದ. ಅಲ್ಲದೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕಿಮ್ ಜಾಂಗ್ ಉನ್ ಬಹಿರಂಗವಾಗಿ ಸಮರ್ಥಿಸಿದ್ದ. ಎಲ್ಲಾ ಬೆಳವಣಿಗೆ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಷ್ಯಾ ರಕ್ಷಣ ಸಚಿವರೇ ನೇರ ಉತ್ತರ ಕೊರಿಯಾಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ತಿಕ್ಕಾಟ ಜೋರಾಗಿರುವ ಸಂದರ್ಭದಲ್ಲೇ ಇಂತಹ ಬೆಳವಣಿಗೆ ನಡೆದಿದ್ದು ಭಾರಿ ಅಚ್ಚರಿ ಮೂಡಿಸಿದೆ.

ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ?ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ?

ಕೈಮೀರಿ ಹೊಗುತ್ತಿದೆಯಾ ಪರಿಸ್ಥಿತಿ?

ಕಿಮ್ ಜಾಂಗ್ ಉನ್ ಮೊನ್ನೆ ಮೊನ್ನೆಯಷ್ಟೇ ಹೊಸ ಕ್ಷಿಪಣಿಯ ಪ್ರಯೋಗ ನಡೆಸಿದ್ದ. ಕ್ಷಿಪಣಿ ಹೇಗಿತ್ತು ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆಯೂ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿತ್ತು. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯ ಭಯ ಶುರುವಾಗಿತ್ತು. ಈ ಘಟನೆ ನಡೆದು ಕೆಲದಿನ ಕಳೆಯುವ ಒಳಗೆ ಮತ್ತೆ 2 ಕ್ಷಿಪಣಿ ಹಾರಿಸಿತ್ತು ಉತ್ತರ ಕೊರಿಯಾ. ಸಾವಿರಾರು ಕಿಲೋ ಮೀಟರ್ ದೂರದ ಗುರಿಯನ್ನ ಅತಿ ವೇಗವಾಗಿ ತಲುಪಿ ನಾಶ ಮಾಡಬಲ್ಲ ಶಕ್ತಿ ಈ ಕ್ಷಿಪಣಿಗಳಿಗೆ ಇದೆ.

russian-defence-minister-visits-north-korea

ಕ್ಷಿಪಣಿಗಳ ರಾಶಿ ಇಟ್ಟಿದ್ದಾನೆ ಕಿಮ್!

1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, 3 ತಿಂಗಳ ಹಿಂದಷ್ಟೇ ತನ್ನ ದೇಶದ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಬಗ್ಗೆ ಮಾಹಿತಿ ನೀಡಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಆದರೆ ಈ ಪ್ರಯೋಗ ವಿಫಲವಾಗಿ ಉತ್ತರ ಕೊರಿಯಾದ ಮಿಲಿಟರಿ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಸೇನಾ ಉಪಗ್ರಹ ಸೋತರೆ ಏನು, ತನ್ನ ಬಳಿ ಕ್ಷಿಪಣಿಗಳ ರಾಶಿಯನ್ನೇ ಇಟ್ಟುಕೊಂಡು ಜಗಳಕ್ಕೆ ನಿಂತಿದ್ದಾನೆ ಕಿಮ್ ಜಾಂಗ್ ಉನ್.

English summary

Russian defence minister visits North Korea

Story first published: Thursday, July 27, 2023, 23:44 [IST]

Source link