ಯು.ಎಸ್. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಅಡ್ಮಿನಿಸ್ಟ್ರೇಟರ್: ಚೆನ್ನೈನ ಶಾಲಾ | U.S. Environmental Protection Agency Administrator Engages in Ocean Health Activity

News

oi-Mallika P

By ಒನ್‌ ಇಂಡಿಯಾ ಡೆಸ್ಕ್‌

|

Google Oneindia Kannada News

ಚೆನ್ನೈ, ಜುಲೈ 27: ಯು.ಎಸ್. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ(ಇಪಿಎ)ಯ ಅಡ್ಮಿನಿಸ್ಟ್ರೇಟರ್ ಮೈಕೇಲ್ ಎಸ್. ರೇಗನ್ ಅವರು ಜಿ20 ಪರಿಸರ ಮತ್ತು ವಾತಾವರಣ ಸುಸ್ಥಿರತೆಯ ಕುರಿತಾದ ಜಿ20 ಸಚಿವರ ಸಭೆಯಲ್ಲಿ ಭಾಗವಹಿಸಲು ಚೆನ್ನೈನಲ್ಲಿದ್ದು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಬಂಗಾಳ ಕೊಲ್ಲಿಯ ನೀರಿನ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ನಡೆಸಲಾಯಿತು, ನಂತರ ಜುಲೈ 27ರಂದು ಗುರುವಾರ ನಗರದ ಎಲಿಯಟ್ಸ್ ಬೀಚ್‌ನಲ್ಲಿ ಸಮುದ್ರ ತೀರದ ನಡಿಗೆ ನಡೆಸಲಾಯಿತು.

ಅಡ್ಮಿನಿಸ್ಟ್ರೇಟರ್ ರೇಗನ್ ವಿದ್ಯಾರ್ಥಿಗಳೊಂದಿಗೆ ಸಮುದ್ರದ ನೀರಿನ ಉಷ್ಣತೆ ಮತ್ತು ಲವಣಾಂಶವನ್ನು ಅಳೆಯುವ ಪ್ರಯೋಗ ನಡೆಸಿದರು, ಈ ಚಟುವಟಿಕೆಯನ್ನು ಯು.ಎಸ್. ಕಾನ್ಸುಲೇಟ್ ಜನರಲ್, ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ ಟಿಟ್ಯೂಟ್(ತೇರಿ)ಸಹಯೋಗದಲ್ಲಿ ನಡೆಸುತ್ತಿರುವ ನಾಗರಿಕ ವಿಜ್ಞಾನ ಯೋಜನೆ,”ಓಷನ್ ಮ್ಯಾಟರ್ಸ್” ಭಾಗವಾಗಿ ನಡೆಸಲಾಯಿತು ಇದು ವಿದ್ಯಾರ್ಥಿಗಳಲ್ಲಿ ಸಮುದ್ರದ ಆರೋಗ್ಯದ ಮಾನದಂಡಗಳನ್ನು ಅಳೆಯಲು ಮತ್ತು ಮೇಲ್ವಿಚಾರಣೆ ವಹಿಸಲು ಸಾಮರ್ಥ್ಯ ನಿರ್ಮಿಸುತ್ತದೆ.

u-s-environmental-protection-agency-administrator

ಇಪಿಎ ಅಡ್ಮಿನಿಸ್ಟ್ರೇಟರ್ ರೇಗನ್, “ಯುವಜನರು ಸದಾ ಸಾಮಾಜಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ ಮತ್ತು ಪರಿಸರ ಚಳವಳಿ ಅದಕ್ಕೆ ಹೊರತಾಗಿಲ್ಲ. ಇಂದು ಚೆನ್ನೈನಲ್ಲಿ ವಿದ್ಯಾರ್ಥಿಗಳೊಂದಿಗೆ ವಾತಾವರಣ ಬದಲಾವಣೆಯ ಪರಿಣಾಮಗಳು ಮತ್ತು ನಮ್ಮ ಸಮುದ್ರಗಳನ್ನು ರಕ್ಷಿಸಲು ಅವರ ಪ್ರಯತ್ನಗಳ ಕುರಿತು ಚರ್ಚೆ ನಡೆಸಲು ಬಹಳ ಸಂತೋಷ ಹೊಂದಿದ್ದೇನೆ. ಯುನೈಟೆಡ್ ಸ್ಟೇಟ್ಸ್ ವಾತಾವರಣ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ನಿಷ್ಪಕ್ಷಪಾತದ ಪರಿವರ್ತನೆಗೆ ಬದ್ಧವಾಗಿದ್ದು ನಮ್ಮ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರಿಗೂ ಆರೋಗ್ಯಕರ ಭೂಗ್ರಹ ನೀಡಲು ಶ್ರಮಿಸುತ್ತದೆ” ಎಂದರು.

ನಂತರ ಅಡ್ಮಿನಿಸ್ಟ್ರೇಟರ್ ರೇಗನ್ ಹೇಗೆ ವಾತಾವರಣ ಬದಲಾವಣೆಯು ಕರಾವಳಿ ಮತ್ತು ಅಲ್ಲಿನ ನೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಗಮನಿಸುವ ಮತ್ತು ಅರ್ಥ ಮಾಡಿಕೊಳ್ಳಲು ಸಮುದ್ರ ತೀರದ ನಡಿಗೆಯಲ್ಲಿ ಇತರರೊಂದಿಗೆ ಭಾಗವಹಿಸಿದರು. ಈ ನಡಿಗೆಯಲ್ಲಿ ಅಡ್ಮಿನಿಸ್ಟ್ರೇಟರ್ ರೇಗನ್ ಭಾಗವಹಿಸಿದ ಎಲ್ಲರೊಂದಿಗೆ ಕರಾವಳಿ ಮತ್ತು ದ್ವೀಪ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚೆ ನಡೆಸಿದರು, ಅದರಲ್ಲಿ ಸಮುದ್ರದ ಉಷ್ಣತೆ, ಸಮುದ್ರಮಟ್ಟ ಹೆಚ್ಚಳ ಮತ್ತು ಸಮುದ್ರದ ಆಮ್ಲೀಕರಣ, ಮೀನು ಸಂಗ್ರಹದ ನಷ್ಟ ಮತ್ತು ಸಮುದ್ರದ ಜೀವಿಗಳಿಗೆ ಹಾನಿ ಕುರಿತು ಚರ್ಚಿಸಿದರು.

ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿ ಬಂಧನ ಬೆಂಗಳೂರಿನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿ ಬಂಧನ

ಯು.ಎಸ್. ಕಾನ್ಸುಲೇಟ್ ಜನರಲ್ ನ ಪಬ್ಲಿಕ್ ಅಫೇರ್ಸ್ ಆಫೀಸರ್ ಜೆನ್ನಿಫರ್ ಬುಲಾಕ್, “ವಾತಾವರಣ ಮತ್ತು ಸಮುದ್ರಗಳು ಪರಸ್ಪರ ಸಂಪರ್ಕ ಹೊಂದಿವೆ; ಸಮುದ್ರಗಳಿಗೆ ಹಾನಿಯುಂಟು ಮಾಡುವ ಅಂಶಗಳೆಂದರೆ ಮಾಲಿನ್ಯ, ಉಷ್ಣತೆಯಲ್ಲಿ ಹೆಚ್ಚಳ, ಸಮುದ್ರದ ಆಮ್ಲೀಕರಣ, ಸವಕಳಿ ಮತ್ತು ಅತಿಯಾದ ಮೀನುಗಾರಿಕೆಯು ಅತಿಯಾದ ಮಳೆಗೂ ಕಾರಣವಾಗುತ್ತದೆ, ಇದರಿಂದ ವಿಪರೀತ ವಾತಾವರಣದ ಪರಿಸ್ಥಿತಿಗಳು ಉಂಟಾಗುತ್ತವೆ, ನೆಲೆಗಳು ನಾಶವಾಗುತ್ತವೆ ಮತ್ತು ಕರಾವಳಿ ಕರಗುತ್ತದೆ. ಸಮುದ್ರಗಳು ಮತ್ತು ಕರಾವಳಿಯನ್ನು ಸಂರಕ್ಷಿಸುವುದರಿಂದ ಪ್ರಹಾಹ, ಚಂಡಮಾರುತ ಮತ್ತು ಸಮುದ್ರದ ನೀರು ಭೂಮಿಯ ಮೇಲೆ ನುಗ್ಗುವಂತಹ ಸಮಸ್ಯೆಗಳನ್ನು ತಡೆಯಬಹುದು. ವಾತಾವರಣ-ಸಮುದ್ರದ ಆವರ್ತಗಳನ್ನು ರಕ್ಷಿಸುವುದು ಕೂಡಾ ಊಹಿಸಬಲ್ಲ ಮಳೆಗಾಲಕ್ಕೆ ನೆರವಾಗುತ್ತದೆ ಮತ್ತು ಅದರಿಂದ ಆಹಾರ ಭದ್ರತೆ, ಸುಸ್ಥಿರ ನೀರಿನ ನಿರ್ವಹಣೆ ಮತ್ತು ಆರೋಗ್ಯ ಕಾಪಾಡಲು ನೆರವಾಗುತ್ತದೆ. “ಓಷನ್ ಮ್ಯಾಟರ್ಸ್” ಯೋಜನೆಯು ಯುವಜನರ ಸಾಮರ್ಥ್ಯವನ್ನು ಸಮುದ್ರದ ರಿಸ್ಕ್ ಗಳನ್ನು ಊಹಿಸಲು, ಕ್ರಿಯಾಶೀಲರಾಗಲು ಮತ್ತು ಸ್ಥಿತಿ ಸ್ಥಾಪಕತ್ವ ನಿರ್ಮಿಸಲು ನೆರವಾಗುತ್ತದೆ” ಎಂದರು.

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್‌ನ ಎಜುಕೇಷನ್ ಆಫೀಸರ್ ಸ್ಟೆಫಿ ಜಾನ್ ಈ ಸಮುದ್ರ ತೀರದ ನಡಿಗೆಯನ್ನು ಆಯೋಜಿಸಿದ್ದು ಅವರು, “ವಾತಾವರಣ ಬದಲಾವಣೆಗೆ ಸನ್ನದ್ಧರಾಗಲು ತಕ್ಷಣ ಕಾರ್ಯ ಪ್ರವೃತ್ತರಾಗುವುದು, ತೊಂದರೆಯಲ್ಲಿರುವ ಕರಾವಳಿ ಪ್ರದೇಶಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳ ಮೇಲೆ ವಾತಾವರಣ ಬದಲಾವಣೆಯ ಪರಿಣಾಮಗಳನ್ನು ನಿರ್ಬಂಧಿಸುವುದು ಅಗತ್ಯವಿದೆ. ಇಂದಿನ ಗಮನಿಸುವ ಮತ್ತು ದಾಖಲಿಸುವ ಸಮುದ್ರತೀರದ ಚಟುವಟಿಕೆಯು ಈ ವಿದ್ಯಾರ್ಥಿಗಳಿಗೆ ವಾತಾವರಣ ಬದಲಾವಣೆ ಮತ್ತು ಸಮುದ್ರ ತೀರದ ಇಕೊಸಿಸ್ಟಂಗಳ ಕುರಿತು ಅರಿಯಲು ನೆರವಾಗುತ್ತದೆ ಮತ್ತು ಅವರಿಗೆ ಈ ಪ್ರಮುಖ ಜಾಗತಿಕ ಸಮಸ್ಯೆಯನ್ನು ದಾಖಲಿಸಲು ಆಸಕ್ತಿದಾಯಕ ವಿಧಾನವನ್ನು ಪ್ರಸ್ತುತಪಡಿಸುತ್ತದೆ” ಎಂದರು.

ತೇರಿ ಫೆಲೊ ಮತ್ತು ಓಷನ್ ಮ್ಯಾಟರ್ಸ್ ಪ್ರಾಜೆಕ್ಟ್ ಇನ್-ಚಾರ್ಜ್ ಆಗಿರುವ ಸಲ್ತಾನತ್ ಎಂ. ಕಾಝಿ, “ತೇರಿ ಮತ್ತು ಯು.ಎಸ್. ಕಾನ್ಸುಲೇಟ್ ಜನರಲ್ ಚೆನ್ನೈ ನಡುವಿನ ಸಹಯೋಗವು ಚೆನ್ನೈ, ಪುದುಚೆರಿ, ಕೊಚ್ಚಿ, ಮುಂಬೈ, ಮಂಗಳೂರು ಮತ್ತು ಮರ್ಮುಗಾವೊದ 200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಲುಪಲು ಮತ್ತು ಅವರಿಗೆ ಪ್ರಯೋಗಗಳನ್ನು ಬಳಸಿ ವಿಜ್ಞಾನ ಮತ್ತು ಪರಿಸರದ ಬಗ್ಗೆ ತಿಳಿಯಲು ಅವಕಾಶ ಕಲ್ಪಿಸಿದೆ” ಎಂದರು. “ಈ ಯೋಜನೆಯು ವಿದ್ಯಾರ್ಥಿಗಳಿಗೆ ಮಾಲೀಕತ್ವದ ಭಾವನೆ ಮೂಡಿಸಲು ಮತ್ತು ಸಮುದ್ರದ ಆರೋಗ್ಯ ರಕ್ಷಿಸಲು ಜವಾಬ್ದಾರಿ ತೆಗೆದುಕೊಳ್ಳಲು ಕೂಡಾ ನೆರವಾಗುತ್ತದೆ” ಎಂದರು.

‘ಓಷನ್ ಮ್ಯಾಟರ್ಸ್’ ಕುರಿತು ಮಾಹಿತಿ

2022ರಲ್ಲಿ ಪ್ರಾರಂಭವಾದ ‘ಓಷನ್ ಮ್ಯಾಟರ್ಸ್’ ಸಮುದ್ರದ ಆರೋಗ್ಯದ ಕುರಿತು ಅರಿವನ್ನು ಮೂಡಿಸುವ ಉದ್ದೇಶ ಹೊಂದಿದೆ ಮತ್ತು ವೈಜ್ಞಾನಿಕ ಮತ್ತು ಪುರಾವೆ ಆಧರಿತ ವಿಧಾನಗಳ ನಮೂನೆ, ಪರೀಕ್ಷೆ, ದತ್ತಾಂಶ ಸಂಗ್ರಹ, ದಾಖಲೀಕರಣ ಮತ್ತು ಸಂಶೋಧನೆಯ ವಿಧಾನಗಳ ಮೂಲಕ ಯುವಜನರಲ್ಲಿ ವಾತಾವರಣ ಕುರಿತು ಕ್ರಿಯಾಶೀಲರಾಗಲು ಉತ್ತೇಜಿಸುತ್ತದೆ.

ಟ್ರೈನ್-ದಿ-ಟ್ರೈನರ್ ಆಧಾರದ ಮೂಲಕ ಈ ಯೋಜನೆಯು ವೈಜ್ಞಾನಿಕ ಪರೀಕ್ಷೆಯ ನಿಯಮಗಳು ಮತ್ತು ತರಬೇತಿಯನ್ನು ಗ್ಲೋಬಲ್ ಲರ್ನಿಂಗ್ ಅಂಡ್ ಅಬ್ಸರ್ವೇಷನ್ ಟು ಬೆನಿಫಿಟ್ ದಿ ಎನ್ವಿರಾನ್ಮೆಂಟ್(ಗ್ಲೋಬ್) ಮೂಲಕ ಅಭಿವೃದ್ಧಿ ಪಡಿಸಲಾಗಿದ್ದು ಇದು ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮವಾಗಿದ್ದು ನ್ಯಾಷನಲ್ ಏರೊನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ), ನ್ಯಾಷನಲ್ ಸೈನ್ಸ್ ಫೌಂಡೇಷನ್(ಎನ್.ಎಸ್.ಎಫ್) ಮತ್ತು ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಬೆಂಬಲ ಪಡೆದಿದೆ. 200ಕ್ಕೂ ಹೆಚ್ಚು ಶಿಕ್ಷಕರು ಮತ್ತು 1,000 ವಿದ್ಯಾರ್ಥಿಗಳಿಗೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಇಲ್ಲಿಯವರೆಗೆ ತರಬೇತಿ ನೀಡಲಾಗಿದೆ.

‘ಓಷನ್ ಮ್ಯಾಟರ್ಸ್ನ’ ಎರಡನೆಯ ಅಂಶದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಅಭಿವೃದ್ಧಿಪಡಿಸಿದ ಪ್ರೊಟೊಕಾಲ್ ಮೂಲಕ ಮೈಕ್ರೊಪ್ಲಾಸ್ಟಿಕ್ಸ್ ಇರುವಿಕೆಯನ್ನು ಪರೀಕ್ಷಿಸುವುದು ಒಳಗೊಂಡಿದೆ. ಇದನ್ನು ಚೆನ್ನೈ, ಪುದುಚೆರಿ ಮತ್ತು ಕೊಚ್ಚಿಯ ಶಾಲೆಗಳಲ್ಲಿ ಅಳವಡಿಸಲಾಗಿದೆ.

‘ಓಷನ್ ಮ್ಯಾಟರ್ಸ್ನ’ ಭಾಗವಹಿಸಲು ಆಸಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು [email protected] ಇಲ್ಲಿಗೆ ಇಮೇಲ್ ಮಾಡಬಹುದು.

English summary

U.S. Environmental Protection Agency Administrator Engages in Ocean Health Activity with Chennai School Students

Story first published: Thursday, July 27, 2023, 19:26 [IST]

Source link