ಲೋಕಸಭಾ ಚುನಾವಣೆ: ಜುಲೈ 28 ಕ್ಕೆ ‘ನನ್ನ ಭೂಮಿ, ನನ್ನ ಜನ’ ಪಾದಯಾತ್ರೆಗೆ ಅಮಿತ್ ಶಾ ಚಾಲನೆ | Lok Sabha election 2024: Amit Shah to launch En Mann, En Makkal Padayatra on July 28

India

oi-Mamatha M

|

Google Oneindia Kannada News

ಚೆನ್ನೈ, ಜುಲೈ. 27: ತಮಿಳುನಾಡು ಬಿಜೆಪಿಯು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ನಾಯಕ ನರೇಂದ್ರ ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿಯನ್ನಾಗಿ ಮಾಡಲು ತಯಾರಿ ಆರಂಭಿಸಿದೆ. ನಿರ್ಣಾಯಕ ಜನಾದೇಶವನ್ನು ಕೋರಿ ಜುಲೈ 28 ರಂದು ಆರು ತಿಂಗಳ ಅವಧಿಯ ‘ಎನ್ ಮನ್, ಎನ್ ಮಕ್ಕಳ್’ (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ.

ರಾಜ್ಯದ 234 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚುನಾವಣಾ ಪ್ರಚಾರವನ್ನು ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಂಜೆ ರಾಮೇಶ್ವರಂ ದೇವಸ್ಥಾನದಲ್ಲಿ ರಾಮೇಶ್ವರಂನಲ್ಲಿ ಈ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಗುರುವಾರ ಮಧುರೈನಲ್ಲಿ ತಿಳಿಸಿದ್ದಾರೆ.

lok-sabha-election-2024

“ಎಲ್ಲಾ 39 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಂತೆ ಐದು ಹಂತಗಳಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲಾಗುವುದು ಮತ್ತು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಜನವರಿ 11, 2024 ರಂದು ಅದನ್ನು ಮುಕ್ತಾಯಗೊಳಿಸಲು ನಾವು ಯೋಜಿಸಿದ್ದೇವೆ. ಅಮಿತ್ ಶಾಜಿ ಪಾದಯಾತ್ರೆಗೆ ಚಾಲನೆ ನೀಡಿದ ನಂತರ ಜುಲೈ 29 ರಂದು ರಾಮೇಶ್ವರಂನಿಂದ ಪ್ರಚಾರ ಪ್ರಾರಂಭವಾಗಲಿದೆ ಎಂದು ಅಣ್ಣಾಮಲೈ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಎನ್ ಮನ್, ಎನ್ ಮಕ್ಕಳ್’ ಪಾದಯಾತ್ರೆಯನ್ನು 1,770 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಮತ್ತು ಉಳಿದ ದೂರವನ್ನು ವಾಹನದ ಮೂಲಕ ಗ್ರಾಮಾಂತರದಲ್ಲಿ ಕ್ರಮಿಸಲಿರುವ ಅಣ್ಣಾಮಲೈ, ಯಾತ್ರೆಯ ಸಮಯದಲ್ಲಿ ಯೋಜಿಸಲಾದ 10 ಪ್ರಮುಖ ರ‍್ಯಾಲಿಗಳಲ್ಲಿ ಕನಿಷ್ಠ ಒಬ್ಬ ಕೇಂದ್ರ ಸಚಿವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಗೃಹಸಚಿವ ಅಮಿತ್ ಶಾ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ!ಗೃಹಸಚಿವ ಅಮಿತ್ ಶಾ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ!

“ನಾವು ಪ್ರಧಾನಿಯವರ ಸಾಧನೆಗಳನ್ನು ಎತ್ತಿ ತೋರಿಸುತ್ತೇವೆ ಮತ್ತು ಸತತ ಮೂರನೇ ಅವಧಿಗೆ ಮೋದಿಜಿಯವರನ್ನು ಪ್ರಧಾನಿಯನ್ನಾಗಿಸಲು ಜನರ ಬೆಂಬಲವನ್ನು ಕೋರುತ್ತೇವೆ. ಕ್ಷೇತ್ರವಾರು ಜನರ ಅಭ್ಯುದಯಕ್ಕೆ ಬಿಜೆಪಿ ಏನು ಮಾಡಿದೆ ಎಂಬುದನ್ನೂ ಮತದಾರರಿಗೆ ವಿವರಿಸುತ್ತೇವೆ. ಈ ವೇಳೆ ‘ಮೋದಿ ಏನು ಮಾಡಿದರು’ (‘What Did Modi Do’) ಪುಸ್ತಕದ ಸುಮಾರು ಒಂದು ಲಕ್ಷ ಪ್ರತಿಗಳನ್ನು ಜನರಿಗೆ ವಿತರಿಸಲಾಗುವುದು” ಎಂದು ಬಿಜೆಪಿ ರಾಜ್ಯಾದ್ಯಕ್ಷ ಅಣ್ಣಾಮಲೈ ತಿಳಿಸಿದ್ದಾರೆ.

ಪಕ್ಷದ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್, ಪಕ್ಷವು ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರನ್ನು ಡಿಎಂಕೆ ಪ್ರಭಾವದಿಂದ ದೂರವಿಟ್ಟು ಅವರನ್ನು ಬಿಜೆಪಿಗೆ ಹತ್ತಿರ ತರುವ ಭರವಸೆ ಹೊಂದಿದೆ ಎಂದಿದ್ದಾರೆ.

English summary

Lok Sabha election 2024: Union Home Minister Amit Shah to launch En Mann, En Makkal Padayatra on July 28 ahead of the 2024 Lok Sabha election. know more.

Source link