India
oi-Mamatha M
ನವದೆಹಲಿ, ಜುಲೈ. 27: ವಿರೋಧ ಪಕ್ಷಗಳ ‘ಭಾರತ’ ಬಣದ ಸಂಸದರ ನಿಯೋಗವು ವಾರಾಂತ್ಯದಲ್ಲಿ ಕಲಹ ಪೀಡಿತ ಮಣಿಪುರಕ್ಕೆ 2 ದಿನಗಳ ಭೇಟಿ ನೀಡಲಿದೆ ಎಂದು ವಿರೋಧ ಪಕ್ಷದ ನಾಯಕರು ಗುರುವಾರ ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸಂಸದರು ಶನಿವಾರ ಮತ್ತು ಭಾನುವಾರ ಈಶಾನ್ಯ ರಾಜ್ಯದಲ್ಲಿ ಇರಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ಮೇ ಮೊದಲ ವಾರದಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಭಾರೀ ಟೀಕೆಗೆ ಗುರಿಯಾಗಿದೆ. ನಿರಂತರ ಹಿಂಸಾಚಾರ ಮತ್ತು ರಾಜ್ಯದ ಎನ್ ಬಿರೇನ್ ಸಿಂಗ್ ನೇತೃತ್ವದ ಆಡಳಿತದ ವಿರುದ್ಧ ಅದರ ನಿಷ್ಕ್ರಿಯತೆಯ ಬಗ್ಗೆ ಆಕ್ರೋಶ ಉಂಟಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ್ ವಿರುದ್ಧ ವಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ. ಇದೆ ಬೆನ್ನಲ್ಲೆ ಇಂಡಿಯಾದ ಸಂಸದರು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಇವರು ಮಣಿಪುರ ಭೇಟಿ ನೀಡುವ ಮೋದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡಿದ್ದರು. ಹಿಂಸಾಚಾರ ಪೀಡಿರ ರಾಜ್ಯದ ಸಂತ್ರಸ್ತರನ್ನು ಮತ್ತು ನಾಗರಿಕ ಸಮಾಜದ ಗುಂಪುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಗೃಹಸಚಿವ ಅಮಿತ್ ಶಾ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ!
ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ವಿಪಕ್ಷಗಳ ಸದಸ್ಯರು, ಆಯ್ದ ಮಂತ್ರಿಗಳ ಪ್ರತಿಕ್ರಿಯೆಗಳ ವಿರುದ್ಧ ಘೋಷಣೆಗಳನ್ನು ಮಾಡದಿರಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ವಿರೋಧ ಪಕ್ಷದ ಸಂಸದರು ನಿತಿನ್ ಗಡ್ಕರಿ ಸೇರಿದಂತೆ ಕೆಲವು ಮಂತ್ರಿಗಳಿಗೆ “ನಿರ್ದಿಷ್ಟ ವಿಷಯಗಳ” ಬಗ್ಗೆ ಅಡ್ಡಿಯಿಲ್ಲದೆ ಸದನಕ್ಕೆ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ.
ಆದರೂ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ತಮ್ಮ ದಾಳಿಯನ್ನು ತೀವ್ರಗೊಳಿಸಲು ತಯಾರಿ ನಡೆಸಿವೆ ಮತ್ತು ಈ ಪ್ರಶ್ನೆಗಳ ಸಮಯದಲ್ಲಿ ಮಣಿಪುರ ಸಮಸ್ಯೆಯನ್ನು ಎತ್ತುವ ಯೋಜನೆಯನ್ನು ಹೊಂದಿದೆ. ಮೇ 3 ರಂದು ಮಣಿಪುರದಲ್ಲಿ ನಡೆದ ಜನಾಂಗೀಯ ಘರ್ಷಣೆಯ ಬಗ್ಗೆ ಮಾತನಾಡಲು ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವುದು ಪ್ರತಿಪಕ್ಷಗಳ ಏಕೈಕ ಗುರಿಯಾಗಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯೊಂದಿಗೆ, ರಾಜ್ಯಸಭೆಯಲ್ಲೂ ಮಣಿಪುರ ವಿಷಯದ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಲು ಪ್ರತಿಪಕ್ಷಗಳು ವಿಧಾನಗಳನ್ನು ರೂಪಿಸುತ್ತಿವೆ. ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಬುಧವಾರ ನೋಟಿಸ್ಗಳನ್ನು ಸಲ್ಲಿಸಿದೆ. ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದು, ಸ್ಪೀಕರ್ ಈಗ ಚರ್ಚೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಂದು ಪ್ರಾರಂಭವಾಗಿದೆ. ಮೇ 4ರ ವಿಡಿಯೋ ಜುಲೈ 19 ರಂದು ಸಂಸತ್ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಮಣಿಪುರದಲ್ಲಿ ಜನಸಮೂಹದಿಂದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗಿದೆ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಮತ್ತು ಮಣಿಪುರದ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿವೆ.
English summary
Manipur violence: A delegation of MPs from the opposition parties will be on a 2-day visit to violence hit Manipur this weekend know more.