Karnataka
oi-Reshma P
ಬೆಂಗಳೂರು, ಜೂನ್ 24: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಿಜೆಪಿಗೆ ಈಗ ತುರ್ತಾಗಿ ಬೇಕಿರುವುದು ಮತ್ತೆ ಪಕ್ಷವನ್ನು ಮೆಲೆತ್ತಬಲ್ಲ ಸಮರ್ಥ ಸಾರಥಿ.
ಹೌದು, ಕಳೆದ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಅತಿಯಾದ ಆತ್ಮವಿಶ್ವಾಸವನ್ನ ಹೊಂದಿದ್ದ ರಾಜ್ಯ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಇದೀಗ ಸೋತ ಬಿಜೆಪಿ ಈಗ ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಸುಧಾರಿಸಿಕೊಳ್ಳಬೇಕಿದೆ. ಪಕ್ಷವನ್ನು ಮತ್ತೆ ಮೊದಲಿನ ಹಳಿಗೆ ತರಬೇಕಿದೆ. ಸದ್ಯಕ್ಕೆ ರಾಜ್ಯಾಧ್ಯಕ್ಷ ರಾಗಿರುವ ನಳಿನ್ಕುಮಾರ್ ಕಟೀಲು ಅವರ ಅವಧಿ ಮುಗಿದಿದ್ದು, ಮತ್ತೆ ಅವರನ್ನೇ ಮುಂದುವರೆಸುವ ಉದ್ದೇಶ ಬಿಜೆಪಿಯ ರಾಜ್ಯ ನಾಯಕರಿಗೂ ಸೇರಿದಂತೆ ಅವರ ಹೈಕಮಾಂಡ್ ಗೂ ಇದ್ದಂತಿಲ್ಲ.
ಅರವತ್ತೈದು ಸ್ಥಾನಕ್ಕೆ ಕುಸಿದಿರುವ ಬಿಜೆಪಿ ಪಕ್ಷ ಚುನಾವಣೆ ಮುಗಿದು ಎರಡು ತಿಂಗಳಾಗುತ್ತಾ ಬಂದಿದ್ರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಕೂಡಾ ಮಾಡಿಲ್ಲ,ಎಲ್ಲ ಕಡೆಯಿಂದ ಚಿಂತಿಸಿ ನೋಡಿದರೂ ಬಸವರಾಜ್ ಬೊಮ್ಮಾಯಿ ಬಿಟ್ಟು ಬೇರೆ ಹೆಸರುಗಳು ಸದ್ಯಕ್ಕಂತೂ ಕಾಣಿಸ್ತಿಲ್ಲ. ಇತ್ತ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಹರಿಡಾಡಿದ್ರೂ , ಈ ಸುದ್ದಿ ಸುಳ್ಳು ಎಂದು ಬಿಜೆಪಿ ಮೂಲಗಳು ಸ್ಪಷ್ಟ ಪಡಿಸಿವೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿಯನ್ನ ಮತ್ತೆ ಮೊದಲಿನಂತೆ ಕಟ್ಟಿ ಬೆಳೆಸಲು ಉತ್ತಮ ಸಾರಥಿಯ ಅನಿವಾರ್ಯತೆ ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿದೆ.
ಇತ್ತ ಬಿಜೆಪಿ ಪಕ್ಷದ ಪರಿಸ್ಥಿತಿ ಹೀಗಿರಬೇಕಾದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಜನ ಆಕಾಂಕ್ಷಿ ಗಳು ಹುಟ್ಟಿ ಕೊಂಡಿದ್ದಾರೆ. ಆರ್ ಅಶೋಕ್, ಸಿಟಿ ರವಿ, ಶೋಭಾ ಕರಂದ್ಲಾಜೆ, ಬಿ ವೈ ವಿಜಯೇಂದ್ರ, ಸೋಮಣ್ಣ, ಶ್ರೀ ರಾಮುಲು ಹಾಗೂ ಕಾರ್ಕಳದ ಸುನಿಲ್ ಕುಮಾರ್ ಹೆಸರು ಗಳು ಸದ್ಯಕ್ಕೆ ಪ್ರಬಲವಾಗಿ ಕೇಳಿ ಬರುತ್ತಿವೇ.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಿದ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂಬ ಕಾರಣಕ್ಕಾಗಿ ಈಗ ಅವರ ಪುತ್ರ ವಿಜಯೇಂದ್ರ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂಬ ಪ್ರಬಲ ವಾದ ಒಂದು ಕಡೆ ಕೇಳಿ ಬರ್ತಿದೆ. ಆದರೆ, ಪಕ್ಷದಲ್ಲಿ ಬಹಳ ಹಿರಿಯರಾಗಿರುವ ಹಾಗೂ ಒಕ್ಕಲಿಗ ನಾಯಕರಾದ ಸಿಟಿ ರವಿ, ಆರ್ ಅಶೋಕ್, ಶೋಭಾ ಕರಂದ್ಲಾಜೆ ಅವರಿಗೆ ಜವಾಬ್ದಾರಿ ನೀಡಿದ್ರೆ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂಬ ವಾದ ಮತ್ತೊಂದು ಕಡೆ ಕೇಳಿ ಬರ್ತಿದೆ.
ಹಿಂದುಳಿದ ಸಮುದಾಯದ ಶ್ರೀ ರಾಮುಲು,ಅಥವಾ ಸುನಿಲ್ ಕುಮಾರ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು ಎಂಬ ವಾದ ಮತ್ತೊಂದ ಕಡೆ. ಇವೆಲ್ಲದರ ನಡುವೆ ವಿ ಸೋಮಣ್ಣ ಹೈ ಕಮಾಂಡ್ ಆದೇಶದ ಪ್ರಕಾರ ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಸವಾಲಿಗೆಒಡ್ಡಿದ್ದರು .ಹಾಗಾಗಿ ಸೋಮಣ್ಣ ಹೆಸರು ಕೂಡ ಪ್ರಬಲವಾಗಿ ಕೇಳಿ ಬರ್ತಿದೆ. ಒಂದು ಅವಕಾಶವನ್ನ ಕೊಟ್ಟು ನೋಡಿ ಪಕ್ಷವನ್ನ ಕಟ್ಟುತ್ತೇನೆ ಎಂದು ವಿ ಸೋಮಣ್ಣ ಹೈಕಮಾಂಡ್ ನಾಯಕರ ಮುಂದೆ ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕನ ಸ್ಥಾನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇನಾದ್ರೂ ಕೊಟ್ಟಿದ್ದೇ ಆದ್ರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ರನ್ನು ಬಿಟ್ಟು ಇತರರನ್ನು ಪರಿಗಣಿಸುವ ಸಾದ್ಯತೆ ಹೆಚ್ಚು, ಆಗ ಸೋಮಣ್ಣ ರಾಜ್ಯಾಧ್ಯಕ್ಷ ರಾಗುವ ಆಸೆ ಕೈ ಬಿಡಬೇಕಾಗುತ್ತದೆ. ಕರ್ನಾಟಕದಲ್ಲಿ ಅತೀ ಪ್ರಬಲ ಜಾತಿಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಇರುವ ಕಾರಣ, ಬಿಜೆಪಿ ಈ ಎರಡು ಸ್ಥಾನಗಳಲ್ಲಿ ಒಬ್ಬರಿಗೆ ವಿರೋಧ ಪಕ್ಷದ ಸ್ಥಾನ ಇನ್ನೊಂದು ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿದ್ದಾರೆ ಎಂದು ಮೂಲಗಳು ಹೇಳುತ್ತೇವೆ. ಬೊಮ್ಮಾಯಿ ಅವರಿಗೆ ವಿಪಕ್ಷ ಸ್ಥಾನ ನೀಡಿದ್ರೆ, ಒಕ್ಕಲಿಗರಲ್ಲಿ ಅಥವಾ ಹಿಂದುಳಿದ ವರ್ಗದ ಯಾರಾದರೊಬ್ಬರು ರಾಜ್ಯಾಧ್ಯಕ್ಷ ರಾಗಬಹುದು ಎಂದು ಹೇಳಲಾಗಿದೆ.
English summary
Karnataka BJP State President: 7 BJP Leaders Lobby for 1 Presidency Seat: Know Who are All in the Race.