KGF craze in Japan: ಟ್ರೆಂಡ್‌ ಆಯ್ತು ರಾಕಿ ಸುತ್ತಿಗೆ, ಮಾಸ್ಕ್.. ಸಲಾಂ ರಾಕಿಭಾಯ್‌ ಎಂದ ಜಪಾನಿಯರು | Japanese say Salaam Rocky Bhai, Yash’s KGF fever peaks in Japan

bredcrumb

News

oi-Narayana M

|

ಕನ್ನಡದ
ಸೂಪರ್
ಹಿಟ್
KGF
ಸರಣಿ
ಈಗ
ಜಪಾನ್‌
ದೇಶದಲ್ಲಿ
ಭಾರೀ
ಸದ್ದು
ಮಾಡ್ತಿದೆ.
ಇದು
ನಮ್ಮದೇ
ಸಿನಿಮಾ
ಎನ್ನುವಂತೆ
ಅಲ್ಲಿನ
ಪ್ರೇಕ್ಷಕರು
ಚಿತ್ರವನ್ನು
ಅಪ್ಪಿಕೊಂಡಿದ್ದಾರೆ.
ಅದು
ಕರ್ನಾಟಕನಾ,
ಜಪಾನಾ?
ಎನ್ನುವಮಟ್ಟಿಗೆ
ಅಲ್ಲಿ
ರಾಕಿಭಾಯ್
ಅಲೆ
ಎದ್ದಿದೆ.
ಈಗಾಗಲೇ
ಒಂದು
ಕೋಟಿ
ರೂ.ಗೂ
ಅಧಿಕ
ಕಲೆಕ್ಷನ್
ಮಾಡಿ
KGF
ಸರಣಿ
ಸಿನಿಮಾಗಳು
ಮುನ್ನುಗ್ಗುತ್ತಿವೆ.

ಪ್ರಶಾಂತ್
ನೀಲ್
ನಿರ್ದೇಶನದ
KGF
ಸರಣಿ
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ಧೂಳೆಬ್ಬಿಸಿತ್ತು.
ಕರ್ನಾಟಕದ
ಮಾತ್ರವಲ್ಲ,
ಅಕ್ಕಪಕ್ಕದ
ರಾಜ್ಯಗಳಲ್ಲಿ
ಹಾಗೂ
ವಿದೇಶಗಳಲ್ಲಿ
ಸಿನಿಮಾ
ಧೂಳೆಬ್ಬಿಸಿತ್ತು.
ಎಲ್ಲರೂ
ರಾಕಿಭಾಯ್
ಆರ್ಭಟ
ನೋಡಿ
ಫಿದಾ
ಆಗಿದ್ದರು.
ಇದೀಗ
ಜಪಾನ್‌ನಲ್ಲೂ
KGF
ಮೇನಿಯಾ
ಶುರುವಾಗಿದೆ.
ಜುಲೈ
14ರಂದು
ತೆರೆಗಪ್ಪಳಿಸಿದ
ಸಿನಿಮಾ
ಅಲ್ಲಿನ
ಪ್ರೇಕ್ಷಕರ
ಮನಗೆದ್ದಿದೆ.
ಮೌತ್‌
ಟಾಕ್‌ನಿಂದ
ನಿಧಾನವಾಗಿ
ಸಿನಿಮಾ
ಹೆಚ್ಚು
ಹೆಚ್ಚು
ಹೆಚ್ಚು
ಜನರನ್ನು
ಸೆಳೀತಿದೆ.
ಸಲಾಂ
ರಾಕಿಭಾಯ್
ಎನ್ನುವ
ಹರ್ಷೋದ್ಘಾರ
ಶುರುವಾಗಿದೆ.

Japanese say Salaam Rocky Bhai, Yashs KGF fever peaks in Japan

ಸಿನಿಮಾ
ಚೆನ್ನಾಗಿದ್ದರೆ
ಭಾಷೆ
ಯಾವ್ದು?
ಯಾವ
ದೇಶದ
ಸಿನಿಮಾ?
ಕಲಾವಿದರು
ಯಾರು?
ಅನ್ನೋದು
ಲೆಕ್ಕಕ್ಕೆ
ಬರಲ್ಲ.
ಜಪಾನ್
ದೇಶದಲ್ಲಿ
KGF
ಸಿನಿಮಾ
ಸದ್ದು
ಮಾಡುತ್ತಿರುವುದೇ
ಅದಕ್ಕೆ
ಉತ್ತಮ
ಉದಾಹರಣೆ.
ಸದ್ಯ
2ನೇ
ವಾರ
ಸಿನಿಮಾ
ಜಪಾನ್‌
ದೇಶದ
ಹಲವು
ಥಿಯೇಟರ್‌ಗಳಲ್ಲಿ
ಭರ್ಜರಿ
ಪ್ರದರ್ಶನ
ಕಾಣುತ್ತಿದೆ.

KGF Japan Review: ರಾಕಿಭಾಯ್ ರಾಜ್ಯಭಾರ ನೋಡಿ ಜಪಾನ್ ಪ್ರೇಕ್ಷಕರು ಏನಂದ್ರು?KGF
Japan
Review:
ರಾಕಿಭಾಯ್
ರಾಜ್ಯಭಾರ
ನೋಡಿ
ಜಪಾನ್
ಪ್ರೇಕ್ಷಕರು
ಏನಂದ್ರು?

ಟ್ರೆಂಡ್
ಆಯ್ತು
ರಾಕಿ
ಲುಕ್

KGF
ಸಿನಿಮಾ
ಜಪಾನ್‌ನಲ್ಲಿ
ಎಷ್ಟರಮಟ್ಟಿಗೆ
ಹವಾ
ಸೃಷ್ಟಿಸಿದೆ
ಅಂದ್ರೆ
ಅಲ್ಲಿನ
ಪ್ರೇಕ್ಷಕರು
ರಾಕಿ
ಲುಕ್‌ಗೆ
ಮಾರುಹೋಗಿದ್ದಾರೆ.
ರಾಕಿಭಾಯ್
ರೀತಿ
ಸೂಟು
ಬೂಟು
ಧರಿಸಿ
ಥಿಯೇಟರ್‌ಗೆ
ಬಂದು
ಸಿನಿಮಾ
ನೋಡ್ತಿದ್ದಾರೆ.
ಒಬ್ಬರಲ್ಲ
ಇಬ್ಬರಲ್ಲ
ಹಲವರು
ಹೀಗೆ
ಚಿತ್ರದಲ್ಲಿನ
ಯಶ್
ಲುಕ್
ಟ್ರೈ
ಮಾಡಿ
ಪೋಸ್
ಕೊಟ್ಟಿದ್ದಾರೆ.
ಇನ್ನು
ಚಿತ್ರದಲ್ಲಿ
ರಾಕಿಯ
ಆಯುಧ
ಸುತ್ತಿಗೆ
ಹಿಡಿದು
ಕಾಣಿಸಿಕೊಂಡಿದ್ದಾರೆ.
ಗನ್,
ರೋಸ್
ಬೊಕ್ಕೆ
ಹಿಡಿದು
ದರ್ಶನ
ಕೊಟ್ಟಿದ್ದಾರೆ.

ಫೋಟೊಗಳು
ಸೋಶಿಯಲ್
ಮೀಡಿಯಾದಲ್ಲಿ
ವೈರಲ್
ಆಗ್ತಿದೆ.

ರಾಕಿ,
ಅಧೀರ,
ವಾನರಂ
ಫೇಸ್‌
ಮಾಸ್ಕ್

ಪ್ರಶಾಂತ್
ನೀಲ್
ಚಿತ್ರದಲ್ಲಿ
ಒಂದಕ್ಕಿಂತ
ಒಂದು
ಪಾತ್ರವನ್ನು
ಸೊಗಸಾಗಿ
ತೋರಿಸಿದ್ದಾರೆ.
ಒಬ್ಬೊಬ್ಬರ
ಗೆಟಪ್‌
ಕೂಡ
ಬಹಳ
ವಿಭಿನ್ನವಾಗಿದೆ.
ಸದ್ಯ
ಜಪಾನೀಯರು
ರಾಕಿ,
ಅಧೀರ,
ವಾನರಂ
ಲುಕ್
ಫೇಸ್‌ಮಾಸ್ಕ್‌ಗಳನ್ನು
ಧರಿಸಿ
ಬಂದು
ಸಿನಿಮಾ
ನೋಡುತ್ತಿದ್ದಾರೆ.
ಜಪಾನ್
ಮಲ್ಟಿಪ್ಲೆಕ್ಸ್‌ಗಳಲ್ಲಿ
ಕನ್ನಡ
ಸಿನಿಮಾ
ಆರ್ಭಟ
ಜೋರಾಗಿದೆ.
ಇನ್ನು
ಸಲಾಂ
ರಾಕಿಭಾಯ್
ಸಾಂಗ್
ಕೂಡ
ಈಗ
ಜಪಾನಿಯರ
ಹಾಟ್‌
ಫೇವರಿಟ್
ಆಗಿಬಿಟ್ಟಿದೆ.

Japanese say Salaam Rocky Bhai, Yashs KGF fever peaks in Japan

ರಾಕಿಭಾಯ್‌ಗೆ
ಜೈಕಾರ

ಅಂದಹಾಗೆ
ಹೊಂಬಾಳೆ
ಸಂಸ್ಥೆ
ಜಪಾನ್‌
ದೇಶದಲ್ಲಿ
KGF
ಸರಣಿ
ಸಿನಿಮಾಗಳನ್ನು
ರಿಲೀಸ್
ಮಾಡಿಲ್ಲ.
ಅಲ್ಲಿನ
ವಿತರಕರೇ
ಸಿನಿಮಾ
ಪ್ರದರ್ಶನ
ಮಾಡುತ್ತಿದ್ದಾರೆ.
ಸದ್ಯ
ಥಿಯೇಟರ್‌ವೊಂದಲ್ಲಿ
ರಾಕಿ
ಫೇಸ್‌ಮಾಸ್ಕ್
ಧರಿಸಿದ
ಪ್ರೇಕ್ಷಕರು
ಸಲಾಂ
ರಾಕಿಭಾಯ್‌
ಎನ್ನು
ಜೈಕಾರ
ಹಾಕುತ್ತಿರುವ
ವಿಡಿಯೋವೊಂದು
ವೈರಲ್
ಆಗುತ್ತಿದೆ.
ಅಚ್ಚರಿ
ಅಂದರೆ
ಅಯ್ಯಪ್ಪ
ಮಾಡಿದ್ದ
ವಾನರಂ
ಪಾತ್ರವನ್ನು
ಜಪಾನೀಯರು
ಮೆಚ್ಚಿಕೊಂಡಿದ್ದಾರೆ.
ವಾನರಂ
ಮಾಸ್ಕ್‌ಗಳು
ಸಖತ್
ವೈರಲ್
ಆಗುತ್ತಿದೆ.

ಭರ್ಜರಿ
ಕಲೆಕ್ಷನ್
ನಿರೀಕ್ಷೆ

10
ದಿನಕ್ಕೆ
1
ಕೋಟಿ
ರೂ.
ಕಲೆಕ್ಷನ್
ಎನ್ನುವುದು
ನಮಗೆ
ಕಡಿಮೆ
ಇರಬಹುದು.
ಆದರೆ
ಕನ್ನಡ
ಸಿನಿಮಾ
ಬಗ್ಗೆ
ಗಂಧಗಾಳಿ
ಇಲ್ಲದ
ದೇಶದಲ್ಲಿ
KGF
ಸರಣಿ
ಚಿತ್ರಗಳಿಗೆ
ಈಮಟ್ಟಿಗೆ
ರೆಸ್ಪಾನ್ಸ್
ಸಿಗುತ್ತಿರುವುದು
ಅಚ್ಚರಿ
ಮೂಡಿಸುತ್ತದೆ.
ಅಲ್ಲಿ
ಸಿನಿಮಾ
ನೋಡುವವರ
ಸಂಖ್ಯೆ
ಕೂಡ
ಕಮ್ಮಿ
ಇದೆ.
ಆದರೂ
ಸಿನಿಮಾ
ನೋಡಿದವರೆಲ್ಲಾ
ಸಖತ್
ಎಂಜಾಯ್
ಮಾಡುತ್ತಿದ್ದಾರೆ.
ಮುಂದಿನ
ದಿನಗಳಲ್ಲಿ
ಸಿನಿಮಾ
ಮತ್ತಷ್ಟು
ಕಲೆಕ್ಷನ್
ಮಾಡುವ
ಸುಳಿವು
ಸಿಕ್ತಿದೆ.

English summary

Salaam Rocky Bhai: Yash’s KGF craze hits Japan. know more.

Thursday, July 27, 2023, 11:21

Story first published: Thursday, July 27, 2023, 11:21 [IST]

Source link