ನಾಗಚೈತನ್ಯಾ ಬಗ್ಗೆ ಪ್ರೀತಿ ಸ್ಪುರಿಸುವಂತಹ ಮಾತನಾಡಿದ ಶೋಭಿತಾ, ಸ್ಯಾಮ್ ಬಗ್ಗೆ ಏನಂದ್ರು? | Sobhita Dhulipala Talks About Samantha Ruth Prabhu and Naga Chaitanya

bredcrumb

Telugu

oi-Narayana M

|

ಕಳೆದ
ಕೆಲ
ದಿನಗಳಿಂದ
ನಟಿ
ಶೋಭಿತಾ
ಧುಲಿಪಾಲ
ಭಾರೀ
ಸುದ್ದಿಯಲ್ಲಿದ್ದಾರೆ.
ಅದಕ್ಕೆ
ಕಾರಣ
ತೆಲುಗು
ನಟ
ನಾಗಚೈತನ್ಯಾ
ಜೊತೆ
ಡೇಟಿಂಗ್
ಮಾಡ್ತಿದ್ದಾರೆ
ಎನ್ನುವ
ವದಂತಿ.
ಆಂಧ್ರದ
ತೆನಾಲಿಯಲ್ಲಿ
ಹುಟ್ಟಿ
ವಿಶಾಖಪಟ್ಟಣಂನಲ್ಲಿ
ಬೆಳೆದ
ಚೆಲುವೆ
ಮಾಡೆಲಿಂಗ್
ಕ್ಷೇತ್ರದಿಂದ
ಚಿತ್ರರಂಗಕ್ಕೆ
ಬಂದವರು.
ತೆಲುಗು,
ತಮಿಳು,
ಹಿಂದಿ,
ಇಂಗ್ಲೀಷ್
ಸಿನಿಮಾಗಳಲ್ಲಿ
ಈಗಾಗಲೇ
ಶೋಭಿತಾ
ಧುಲಿಪಾಲ
ಬಣ್ಣ
ಹಚ್ಚಿದ್ದಾರೆ.

ನಾಗಚೈತನ್ಯಾ
ಹಾಗೂ
ಶೋಭಿತಾ
ಲವ್ವಿ
ಡವ್ವಿ
ನಡೆಸ್ತಿದ್ದಾರೆ
ಎನ್ನುವ
ಬಗ್ಗೆ
ಸೋಶಿಯಲ್
ಮೀಡಿಯಾದಲ್ಲಿ
ಭಾರೀ
ಚರ್ಚೆ
ನಡೆದಿತ್ತು.
ಬಾಲಿವುಡ್
ಮಾಧ್ಯಮಗಳಲ್ಲೂ

ವಿಚಾರ
ಚಕ್ಕರ್
ಹೊಡೆದಿತ್ತು.
ಅದರಲ್ಲೂ
ವಿದೇಶದಲ್ಲಿ
ಇಬ್ಬರೂ
ರೆಸ್ಟೋರೆಂಟ್‌ವೊಂದರಲ್ಲಿ
ಒಟ್ಟಿಗೆ
ಕಾಣಿಸಿಕೊಂಡ
ಮೇಲೆ
ಗುಸುಗುಸು
ಹೆಚ್ಚಾಯಿತು.
ಚೈಸ್ಯಾಮ್
ಡಿವೋರ್ಸ್
ತೆಗೆದುಕೊಂಡು
ದೂರವಾದ
ಸಮಯದಲ್ಲೇ
ಚೈತನ್ಯಾ
ಜೊತೆ
ಶೋಭಿತಾ
ಹೆಸರು
ತಳುಕು
ಹಾಕಿಕೊಂಡು
ಭಾರೀ
ಗುಲ್ಲಾಗಿತ್ತು.
ಇಬ್ಬರು
ಪ್ರತಿಕ್ರಿಯಿಸದೇ
ಇದ್ದಿದ್ದು
ಚರ್ಚೆ
ತಾರಕ್ಕೇರುವಂತಾಯಿತು.

Sobhita Dhulipala Talks About Samantha Ruth Prabhu and Naga Chaitanya

ಒಂದ್ಕಡೆ
ವೈಯಕ್ತಿಕ
ಜೀವನದಲ್ಲಿ
ಕುಗ್ಗಿದ್ದ
ನಾಗ
ಚೈತನ್ಯಾ
ಮತ್ತೊಂದು
ಕಡೆ
ಸಾಲು
ಸಾಲು
ಸಿನಿಮಾ
ಸೋಲಿನಿಂದ
ಕಂಗೆಟ್ಟಿದ್ದರು.
ಇಂತಹ
ಸಮಯದಲ್ಲೇ
ಶೋಭಿತಾ
ಜೊತೆಗಿನ
ಡೇಟಿಂಗ್
ವದಂತಿ
ಮತ್ತಷ್ಟು
ಮಾನಸಿಕವಾಗಿ
ನೋವು
ಅನುಭವಿಸುವಂತಾಯಿತು.
ಲಂಡನ್‌ನಲ್ಲಿ
ಇಬ್ಬರೂ
ಒಟ್ಟಿಗೆ
ಕಾಣಿಸಿಕೊಂಡಿದ್ದ
ಫೋಟೊಗಳಿಂದ
ಇಷ್ಟೆಲ್ಲಾ
ರಾದ್ಧಾಂತವಾಗಿತ್ತು.

ಚೈತನ್ಯಾ
ಬಗ್ಗೆ
ಶೋಭಿತಾ
ಮನದಾಳ

ಶೋಭಿತಾ
ಧೂಲಿಪಾಲ
ಮತ್ತೊಮ್ಮೆ
ನಾಗ
ಚೈತನ್ಯ
ಮೇಲೆ
ಪ್ರೀತಿ
ಸ್ಪುರಿಸುವಂತ
ಕಾಮೆಂಟ್
ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ
ಆಕೆ
ಚೈತು
ಬಗ್ಗೆ
ಮನದಾಳದ
ಮಾತುಗಳನ್ನು
ಹಂಚಿಕೊಂಡಿದ್ದಾರೆ.
ನಾಗ
ಚೈತನ್ಯ
ಬಗ್ಗೆ
ಪ್ರಶ್ನೆಗೆ
ನಾಗ
ಚೈತನ್ಯ
ತುಂಬಾ
ವಿನಯವಂತ,
ಸಂಭಾವಿತ
ಎಂದಿದ್ದಾರೆ.
ಆತ
ಬಹಳ
ಸಮಚಿತ್ತ
ವ್ಯಕ್ತಿ
ಎಂದು
ಹೊಗಳಿದ್ದಾರೆ.
ಚೈತು
ಬಹಳ
ಕೂಲ್
ವ್ಯಕ್ತಿತ್ವದ
ವ್ಯಕ್ತಿ.
ಆತನ

ಗುಣ
ನನಗೆ
ಬಹಳ
ಇಷ್ಟ
ಎಂದಿದ್ದಾರೆ.

Sobhita Dhulipala Talks About Samantha Ruth Prabhu and Naga Chaitanya

ಸ್ಯಾಮ್
ಬಗ್ಗೆ
ಶೋಭಿತಾ
ಮಾತು

ಬರೀ
ಚೈತನ್ಯಾ
ಬಗ್ಗೆ
ಮಾತ್ರವಲ್ಲ
ಸಮಂತಾ
ಕುರಿತು
ಕೂಡ
ಶೋಭಿತಾ
ಮಾತನಾಡಿದ್ದಾರೆ.
“ಫ್ಯಾಮಿಲಿ
ಮ್ಯಾನ್-
2′
ವೆಬ್‌
ಸೀರಿಸ್‌ಗೆ
ಸಮಂತಾ
ಉತ್ತಮ
ಆಯ್ಕೆ.
ಪ್ರತಿ
ಪ್ರಾಜೆಕ್ಟ್
ಅನ್ನು
ಆಕೆ
ಆಯ್ಕೆ
ಮಾಡಿಕೊಳ್ಳುವ
ರೀತಿ
ಅದ್ಭುತವಾಗಿದೆ
ಎಂದು
ಶೋಭಿತಾ
ಮೆಚ್ಚುಗೆ
ಸೂಚಿಸಿದ್ದಾರೆ.
ಸ್ಯಾಮ್
ಕರಿಯರ್
ಬಹಳ
ಚೆನ್ನಾಗಿ
ಸಾಗುತ್ತಿದೆ”
ಎಂದು
ಆಕೆ
ಹೇಳಿದ್ದಾರೆ.

ವದಂತಿಗೆ
ತಿರುಗೇಟು

ಇನ್ನು
ನಾಗಚೈತನ್ಯಾ
ಜೊತೆಗಿನ
ಡೇಟಿಂಗ್
ವದಂತಿ
ಬಗ್ಗೆ
ಪ್ರತಿಕ್ರಿಯಿಸಿರುವ
ಶೋಭಿತಾ
“ಸರಿಯಾದ
ಮಾಹಿತಿ
ಇಲ್ಲದೇ
ಮಾತನಾಡುವವರಿಗೆ
ನಾನು
ಉತ್ತರಿಸಬೇಕಾಗಿಲ್ಲ.
ನಾನು
ಯಾವುದೇ
ತಪ್ಪು
ಮಾಡದಿರುವಾಗ
ಮತ್ತು
ಅದು
ನನಗೆ
ಸಂಬಂಧಿಸದ
ವಿಷಯವಾಗಿದ್ದಾಗ
ನಾನು
ಸ್ಪಷ್ಟನೆ
ನೀಡಬೇಕು
ಎಂದು
ಅಂದುಕೊಳ್ಳುವುದಿಲ್ಲ.
ಅರ್ಧಂಬರ್ದ
ತಿಳ್ಕೊಂಡು
ಬರೆಯುವವರ
ಬಗ್ಗೆ
ಮಾತನಾಡುವುದಕ್ಕಿಂತ
ನನ್ನ
ಕೆಲಸ
ನಾನು
ಮಾಡಿಕೊಂಡು
ಹೋಗುವುದು
ಒಳಿತು”
ಎಂದು
ಶೋಭಿತಾ
ಹೇಳಿದ್ದಾರೆ.

'ಫ್ಯಾಮಿಲಿ ಮ್ಯಾನ್'ನಿಂದಲೇ ಸಮಂತಾ-ನಾಗಚೈತನ್ಯ ಡಿವೋರ್ಸ್? ಕ್ಲಾರಿಟಿ ಕೊಟ್ಟ ಚೈತು‘ಫ್ಯಾಮಿಲಿ
ಮ್ಯಾನ್’ನಿಂದಲೇ
ಸಮಂತಾ-ನಾಗಚೈತನ್ಯ
ಡಿವೋರ್ಸ್?
ಕ್ಲಾರಿಟಿ
ಕೊಟ್ಟ
ಚೈತು

2
ಸಿನಿಮಾಗಳಲ್ಲಿ
ಶೋಭಿತಾ

ಇತ್ತೀಚೆಗೆ
ಮಣಿರತ್ನಂ
ನಿರ್ದೇಶನದ
‘ಪೊನ್ನಿಯಿನ್
ಸೆಲ್ವನ್’
ಸರಣಿ
ಸಿನಿಮಾದಲ್ಲಿ
ಶೋಭಿತಾ
ನಟಿಸಿದ್ದರು.
ವಾನತಿ
ಎನ್ನುವ
ಪಾತ್ರದಲ್ಲಿ
ಗಮನ
ಸೆಳೆದಿದ್ದರು.
ಸದ್ಯ
‘ಸಿತಾರ’
ಎನ್ನುವ
ಬಾಲಿವುಡ್
ಸಿನಿಮಾ
ಮುಗಿಸಿದ್ದಾರೆ.
‘ಮಂಕಿಮ್ಯಾನ್’
ಎನ್ನುವ
ಅಮೆರಿಕನ್
ಚಿತ್ರದಲ್ಲೂ
ನಟಿಸಿದ್ದಾರೆ.

ಸಿನಿಮಾ
ಚಿತ್ರೀಕರಣ
ಮುಕ್ತಾಯವಾಗಿದೆ.

English summary

Sobhita Dhulipala Talks About Samantha Ruth Prabhu and Naga Chaitanya. Sobhita Dhulipala admires Samantha Ruth Prabhu’s film career. know more.

Saturday, June 24, 2023, 15:11

Source link