Ballari
lekhaka-Muruli Kanth Rao
ಬಳ್ಳಾರಿ, ಜೂನ್ 24: ನಾವು ಸೋತಿಲ್ಲ ಕಾಂಗ್ರೆಸ್ ಗ್ಯಾರಂಟಿ ಗೆದ್ದಿದೆ. ಇವತ್ತು ಫ್ರೀ ಆಗಿ ಹೋದ ಬಸ್ಸಿನಲ್ಲಿ ಮುಂದೆ ನಾಲ್ಕು ಪಟ್ಟು ಹಣ ಕೊಡಬೇಕಾಗುತ್ತದೆ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಎಂ.ಪಿ. ಚುನಾವಣೆಯಲ್ಲಿ ಈ ತಪ್ಪು ಮಾಡಿದರೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರನ್ನು ಕಳೆದು ಕೊಳ್ಳುಬೇಕಾಗುತ್ತದೆ. ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮನಮೋಹನ್ ಸಿಂಗ್ ಹೇಗಿರುತ್ತಿದ್ದರು. ಈಗ ನರೇಂದ್ರ ಮೋದಿ ಹೇಗಿದ್ದಾರೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಗಿ ನಟನೆ ಮಾಡಿ ತೋರಿಸಿದ್ದಾರೆ.
ವೆನಿಜುಲ ದೇಶದ ಸ್ಥಿತಿ ಇದೀಗ ದಯನೀಯವಾಗಿದೆ. ಆ ಪರಿಸ್ಥಿತಿ ಭಾರತಕ್ಕೆ ಬರೋದು ಬೇಡ. ಫ್ರೀ ಫ್ರೀ ಎಂದು ಡಿ.ಕೆ ಶಿವಕುಮಾರ್ ಅವರು ಇದೀಗ ಬಸ್‌ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ. ಎಂಪಿ ಚುನಾವಣೆಯಲ್ಲಿ ಎಡವಿದರೆ ದೇಶದ ಪರಿಸ್ಥಿತಿ ಕೆಟ್ಟು ಹೋಗುತ್ತದೆ ಎಂದು ಕಾಂಗ್ರೆಸ್ ಗ್ಯಾರಂಟಿಯನ್ನು ಸೋಮಶೇಖರ್ ರೆಡ್ಡಿ ವೆನಿಜುಲ ದೇಶಕ್ಕೆ ಹೊಲಿಸಿದ್ದಾರೆ.
ಪಟ್ನಾದಲ್ಲಿ ಸೇರಿದ ವಿರೋಧ ಪಕ್ಷಗಳ ಸಭೆಯಲ್ಲಿ ಮೊನ್ನೆ ಲಾಲು ಪ್ರಸಾದ್ ಅವರು ರಾಹುಲ್‌ಗೆ ಮದುವೆಯಾಗಿ ಎಂದಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಈಗಾಗಲೇ ಮದುವೆಯಾಗಿದೆ. ನಮ್ಮ ದೇಶದಲ್ಲಿ ಅಲ್ಲ ಬೇರೆ ದೇಶದಲ್ಲಿ ರಾಹುಲ್ ಗಾಂಧಿ ಮದುವೆಯಾಗಿ, ಮಕ್ಕಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಮ್ಮ ದೇಶದಲ್ಲಿ ಸನ್ಯಾಸಿಯಾಗಿ ಒಡಾಡಿದ್ದಾರೆ.ಜೋಡೋ ಜೋಡೋ ಎಂದು ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗೆ ಓಡಾಡ್ತಿದ್ದಾರೆ. ಆದರೆ ಏನು ಜೋಡಿದ್ರೋ ಗೊತ್ತಾಗ್ತಿಲ್ಲ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
English summary
Rahul Gandi Married: Former MLA Somashekar Reddy Sarcasm Against Rahul Gandi. Know more.
Story first published: Saturday, June 24, 2023, 14:18 [IST]