Tv
oi-Muralidhar S
By ಎಸ್ ಸುಮಂತ್
|
ವೇದಾಳ
ಬಾಳಲ್ಲಿ
ಈಗ
ಸಂಭ್ರಮದ
ದಿನಗಳು
ಶುರುವಾಗಿದೆ.
ವೇದಾಳನ್ನು
ಕಂಡರೆ
ಆಗಲ್ಲ
ಎನ್ನುತ್ತಿದ್ದ
ವಿಕ್ರಂ
ಇದೀಗ
ಸ್ವಲ್ಪ
ಸ್ವಲ್ಪ
ಬದಲಾವಣೆಯಾಗುತ್ತಿದ್ದಾನೆ.
ವೇದಾಳ
ತುಂಟುತನದಿಂದ
ಕೋಪ
ಬಂದರೂ,
ಅದನ್ನು
ಸಹಿಸಿಕೊಳ್ಳುವಷ್ಟು
ಸಲಿಗೆ
ಬೆಳೆದಿದೆ.
ಆದರೆ
ಈಗ
ವೇದ
ಮನಸ್ಸಲ್ಲಿ
ದಿಗಿಲು
ಬಡಿಯುವಂತೆ
ಮಾಡಿದ್ದಾನೆ.
ವೇದಾ
ಶ್ರೀಮಂತಿಕೆಯ
ಜೀವನ
ಕಳೆದವಳು.
ಫಾರಿನ್ನಲ್ಲಿ
ಓದಿ
ಬಂದವಳು.
ಆದರೆ
ಸಂಪ್ರದಾಯಕ್ಕೆ
ಕಟ್ಟು
ಬಿದ್ದು,
ಗಂಡ
ರೌಡಿ
ಆದರೂ,
ಅವನ
ಜೊತೆಗೆ
ಇದ್ದಾಳೆ.
ಅಪ್ಪ
ಅಮ್ಮನಿಗೆ
ಇದನ್ನು
ನೋಡುವುದಕ್ಕೂ
ಕಷ್ಟ.
ಆದರೆ
ವೇದಾ
ತವರಿನವರ
ಬಳಿಯೂ
ವಿಕ್ರಂ
ಪರ
ಬ್ಯಾಟ್
ಬೀಸಿದ್ದಾಳೆ.
ವಿಕ್ರಂ
ಒಳ್ಳೆಯವನು,
ನನ್ನ
ಜೊತೆಗೆ
ಚೆನ್ನಾಗಿಯೇ
ಇದ್ದಾನೆ
ಅಂತ
ಸುಳ್ಳು
ಹೇಳಿ
ನಂಬಿಸುವ
ಪ್ರಯತ್ನ
ಮಾಡಿದ್ದಾಳೆ.
ವಿಕ್ರಂ-ವೇದಾರದ್ದು
ಲವ್
ಮ್ಯಾರೇಜ್
?
ವಿಕ್ರಂನನ್ನು
ವೇದಾ
ಸಿಕ್ಕಾಪಟ್ಟೆ
ಕಾಡುತ್ತಿದ್ದಾಳೆ.
ಅದಕ್ಕೆ
ನಾಯಕರ
ಬರ್ತ್
ಡೇ
ಬ್ಯಾನರ್ನಲ್ಲೂ
ಕಿತಾಪತಿ
ಮಾಡಿದ್ದಳು.
ಅವಳ
ತುಂಟತನದಿಂದಾನೇ
ವಿಕ್ರಂನ
ಕೋಪ
ಮತ್ತಷ್ಟು
ಹೆಚ್ಚಾಗುತ್ತಿದೆ.
ನಾಯಕರ
ಹುಟ್ಟುಹಬ್ಬದ
ದಿನ
ಆದ
ಯಡವಟ್ಟಿನಿಂದಾಗಿ,
ವೇದಾ
ಮತ್ತು
ವಿಕ್ರಂ
ಗಂಡ-ಹೆಂಡತಿ
ಎಂದು
ಘೋಷಣೆಯಾಗಿದೆ.
ಅದರಲ್ಲೂ
ಇಬ್ಬರದ್ದು
ಲವ್
ಮ್ಯಾರೇಜ್
ಅಂತ
ಹೇಳಿ,
ಎಲ್ಲರ
ಸಮ್ಮುಖದಲ್ಲಿ
ನಾಯಕರೇ
ಹಾರವನ್ನು
ಬದಲಾಯಿಸಿದ್ದಾರೆ.
Akshatha
Deshpande:
ತಮಿಳು
ಕಿರುತೆರೆಯಲ್ಲಿ
‘ಅನಾಮಿಕ’ಳಾದ
ಕನ್ನಡ
ನಟಿ..
ಅಕ್ಷತಾ
ಹೊಸ
ಕಥೆ
ಶುರು
ವಿಕ್ರಂ
ಮೇಲೆ
ನಂಬಿಕೆಯಿಟ್ಟ
ವೇದಾ
ಊರೊಳಗೆ
ವಿಕ್ರಂ
ರೌಡಿಯಾದರೂ
ಮನೆಯಲ್ಲಿ
ಕಳ್ಳತನ
ಮಾಡಲ್ಲ.
ಮನೆಯವರಿಗೆ
ಕೆಟ್ಟದ್ದನ್ನು
ಮಾಡಲ್ಲ.
ಆದರೆ
ವೇದಾಳ
ಚಿನ್ನದ
ಬಳೆ
ಕಳೆದು
ಹೋಗಿತ್ತು.
ಮನೆಯವರೆಲ್ಲರೂ
ಸೇರಿ
ಹುಡುಕಾಟ
ನಡೆಸಿದರು.
ಬಳಿಕ
ಮಾವನವರು
ಮನೆಯವರೆಲ್ಲರನ್ನು
ಕರೆದು
ದೇವರ
ಮೇಲ
ಪ್ರಮಾಣ
ಮಾಡಿಸಿದರು.
ಎಲ್ಲರೂ
ಪ್ರಮಾಣ
ಮಾಡಿದರು.
ಆದರೆ,
ವಿಕ್ರಂ
ಮಾತ್ರ
ಪ್ರಮಾಣ
ಮಾಡಲಿಲ್ಲ.
ಇದು
ಮನೆಯವರಿಗೆ
ಆಘಾತ
ತಂದಿದೆ.
ವಿಕ್ರಂ
ಮೇಲೆ
ಅನುಮಾನ
ಮೂಡಿದೆ.
ಮನೆಯವರೆಲ್ಲಾ
ಅನುಮಾನ
ಪಟ್ಟಾಗಲೂ
ವೇದಾ,
ವಿಕ್ರಂ
ಪರ
ನಿಂತಿದ್ದಾಳೆ.
ವೇದಾಳ
ಒಳ್ಳೆಯತನಕ್ಕೆ
ವಿಕ್ರಂ
ಫಿದಾ
ವೇದಾಳನ್ನು
ಕಂಡರೆ
ವಿಕ್ರಂ
ಯಾವಾಗಲೂ
ಬೇತಾಳ
ಅಂತಾನೆ
ರೇಗಿಸುತ್ತಾನೆ.
ಜೊತೆಯಲ್ಲಿರುವುದಕ್ಕೆ
ಬಿಡುವುದೇ
ಇಲ್ಲ.
ಇನ್ನು
ತನ್ನ
ರೂಮಿಗಂತು
ಕರೆಯುವುದೇ
ಇಲ್ಲ.
ಆದರೆ
ವೇದಾ
ತನ್ನನ್ನು
ಸಪೋರ್ಟ್
ಮಾಡಿದ್ದಕ್ಕೆ
ಸಾಫ್ಟ್
ಆಗಿದ್ದಾನೆ.
ವೇದಾಳನ್ನು
ಅವನೇ
ಕರೆದಿದ್ದಾನೆ.
ವೇದಾ
ಭಯಪಟ್ಟುಕೊಂಡೆ
ರೂಮಿಗೆ
ಬಂದಿದ್ದಾಳೆ.
ಆಗ
ವಿಕ್ರಂ
ಪ್ರೀತಿಯಿಂದಾನೇ
ಮಾತನಾಡಿಸಿದ್ದಾನೆ.
ಇದನ್ನು
ಕಂಡು
ವೇದಾಗೆ
ಖುಷಿಯಾಗಿದ್ದಾಳೆ.
ವಿಕ್ರಂ
ಹೇಳಿದ
ಮಾತಿಗೆ
ವೇದಾ
ಶಾಕ್
ವೇದಾಳನ್ನು
ಕರೆದು
ಮಂಚದ
ಮೇಲೆ
ಕೂರಿಸಿದ್ದಾನೆ.
ವಿಕ್ರಂ
ಕೆಳಗೆ
ಕೂತಿದ್ದಾನೆ.
ವೇದಾ
ಇಟ್ಟ
ನಂಬಿಕೆ
ಬಗ್ಗೆ
ಖುಷಿಯ
ಮಾತುಗಳನ್ನಾಡಿದ್ದಾನೆ.
ಅದೇ
ಸಮಯಕ್ಕೆ
ವೇದಾಳಿಗೆ
ಗಾಬರಿ
ಕೂಡ
ಮಾಡಿದ್ದಾನೆ.
ಏನು
ಗೊತ್ತಾ
ಬೇತಾಳ.
ನಾನು
ಓದುವಾಗ
ಹುಡುಗಿಯರು
ಫ್ರೆಂಡ್ಸ್
ಇದ್ರು
ನಿನ್
ಥರಾನೇ
ಸಪೋರ್ಟ್
ಮಾಡ್ತಾ
ಇದ್ರು.
ಹೈಸ್ಕೂಲ್ನಲ್ಲಿ
ಒಬ್ಬಳು
ಇದ್ದಳು
ನಿನ್
ಥರನೇ
ಸಪೋರ್ಟ್
ಮಾಡ್ತಾ
ಇದ್ಲು.
ಆದರೆ,
ಅವಳು
ಕಾರು
ಆಕ್ಸಿಡೆಂಟ್ನಲ್ಲಿ
ಸತ್ತು
ಹೋದ್ಲು.
ಇನ್ನೊಬ್ಬಳು
ಫ್ರೆಂಡ್ಸ್
ಹೀಗೆ
ಸಪೋರ್ಟ್
ಮಾಡಿ,
ಅವಳು
ಸತ್ತು
ಹೋದ್ಲು
ಅಂತ
ಮೂರು
ಜನ
ಹುಡುಗಿಯರು
ಸತ್ತಿದ್ದನ್ನು
ಹೇಳಿದನು.
ಇದನ್ನು
ವೇದಾಗೆ
ದಿಗಿಲು
ಬಡಿದಂತಾಗಿದೆ.
English summary
star Suvarna serial Neenadhe Naa Written Update on June 23rd episode. Here is the details on Vedha’s happy story.
Friday, June 23, 2023, 22:20
Story first published: Friday, June 23, 2023, 22:20 [IST]