Features
oi-Sunitha B
ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಹುಲಿ ಒಂದು. ಹುಲಿಯನ್ನು ಬೋನಿನಲ್ಲಿ ಬಂಧಿಸಿದಾಗಲೂ ಅದರ ಬಳಿ ಹೋಗಲು ಹೆದರಿಕೆಯಾಗುತ್ತದೆ. ಇದಕ್ಕೆ ಕಾರಣ ಅವಕಾಶ ಸಿಕ್ಕ ತಕ್ಷಣ ಹುಲಿ ಮನುಷ್ಯರನ್ನು ತುಂದು ಹಾಕುತ್ತದೆ. ಹೀಗಾಗಿ ಯಾರೂ ಕೂಡ ಹುಲಿಯೊಂದಿಗೆ ತಮಾಷೆಗೂ ಸಹವಾಸಕ್ಕೆ ಹೋಗುವುದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಹುಲಿಯೊಂದಿಗೆ ವ್ಯಕ್ತಿಯೊಬ್ಬ ಸಲಿಗೆಯಿಂದ ವರ್ತಿಸಿದ್ದಾನೆ.
ಮನುಷ್ಯರಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ಹುಲಿ ಯಾವಾಗಲೂ ದಾಳಿ ಮಾಡಲು ಪ್ರಯತ್ನಿಸುತ್ತದೆ. ಹುಲಿ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಹುಲಿಗಳು ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರಿಲ್ಲಿ ಮನುಷ್ಯನ ಹುಲಿ ದಾಳಿ ಮಾಡುವುದಿರಲಿ ಕೋಪ ಕೂಡ ಮಾಡಿಕೊಳ್ಳುವುದಿಲ್ಲ, ಸಾಕು ಪ್ರಾಣಿಯಂತೆ ಆತ್ಮೀಯವಾಗಿ ವರ್ತಿಸುತ್ತದೆ.
ಹೌದು.. ವ್ಯಕ್ತಿಯೋರ್ವ ಹುಲಿಯೊಂದಿಗೆ ನಿರ್ಭಯವಾಗಿರುವುದರ ಜೊತೆಗೆ ಮುತ್ತು ಕೊಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವೂ ಕೂಡ ಗಾಬರಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಈ ವೀಡಿಯೊವನ್ನು Instagram ನ @gulyaet_tigr ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬ ಹುಲಿಯನ್ನು ಪ್ರೀತಿಯಿಂದ ಮುದ್ದಿಸುತ್ತಿರುವುದನ್ನು ಕಾಣಬಹುದು. ಅದು ಹುಲಿಯಲ್ಲ ತನ್ನ ಮಗುವೇನೋ ಎಂಬಂತೆ ವ್ಯಕ್ತಿ ಎದುರಿನಿಂದ ಹುಲಿಯ ಬಾಯಿಗೆ ಮುತ್ತಿಡುತ್ತಿದ್ದಾನೆ.
ಈ ವಿಡಿಯೋ ಕಂಡ ವ್ಯಕ್ತಿ ಭಯವಿಲ್ಲದೆ ಹುಲಿಯೊಂದಿಗೆ ತೊಡಗಿರುವ ರೀತಿ ನೋಡಿದರೆ ಈತ ಮೃಗಾಲಯದ ಉದ್ಯೋಗಿಯಾಗಿರಬಹುದು ಅಥವಾ ಆ ಹುಲಿಯೊಂದಿಗೆ ಬಹಳ ಸಮಯದಿಂದ ಸಮಯ ಕಳೆಯುತ್ತಿರಬಹುದು ಎನ್ನಲಾಗುತ್ತಿದೆ. ಆದರೆ ಈ ವಿಡಿಯೋ ನೋಡಿದ ಜನರು ಹುಲಿಯನ್ನು ನಿರ್ಭಯವಾಗಿ ಪ್ರೀತಿಸುವುದು ಹೇಗೆ ಎಂದು ಗೊಂದಲದಲ್ಲಿದ್ದಾರೆ.
ಹುಲಿಗೆ ಮುತ್ತಿಟ್ಟ ವ್ಯಕ್ತಿ
ಆ ವ್ಯಕ್ತಿ ಹುಲಿಯನ್ನು ಮುಂದೆ ಮಲಗಿಸಿ ಬಾಯಿ ಹಿಡಿದು ಅದು ಹುಲಿ ಅಲ್ಲ ತನ್ನ ಮುದ್ದಿನ ನಾಯಿ ಅಥವಾ ಬೆಕ್ಕು ಎನ್ನುವಂತೆ ಮುತ್ತಿಡಲು ಆರಂಭಿಸುತ್ತಾನೆ. ಇದರಿಂದಾಗಿ ಎಲ್ಲರೂ ಈ ವ್ಯಕ್ತಿಯ ಧೈರ್ಯವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲ ಹುಲಿಗೆ ಜೋರಾಗಿ ಮುತ್ತಿಟ್ಟರೂ ಹುಲಿ ಸುಮ್ಮನಿರುತ್ತದೆ. ಬಳಿಕ ಅದನ್ನು ಅಲುಗಾಡಿಸುತ್ತಾ ಪ್ರೀತಿ ಮಾಡಿ ಅದರ ಕೊರಳಿಗೆ ಕಚಗುಳಿ ಇಡುತ್ತಾನೆ.
https://www.instagram.com/reel/Ctl1WFyObCp/?utm_source=ig_web_copy_link
ಹುಲಿ ಬೆಕ್ಕಿನಂತೆ ಮಲಗಿದ್ದು ಕಂಡು ನೆಟ್ಟಿಗರು ಶಾಕ್
ಹುಲಿ ಸಿಂಹವಲ್ಲ ಬೆಕ್ಕು ಎಂಬಂತೆ ನೆಲದ ಮೇಲೆ ಮಲಗಿ ಪ್ರೀತಿ ಸ್ವೀಕರಿಸುತ್ತಿದೆ. ವ್ಯಕ್ತಿಯ ನಿರ್ಭೀತಿಯಿಂದ ಹುಲಿಗೆ ಮುತ್ತಿಟ್ಟರೂ ಹುಲಿ ಏಕೆ ಏನೂ ಮಾಡಲಿಲ್ಲ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಹುಲಿ ಮಲಗಿರುವ ಸ್ಥಳ ಮತ್ತು ವ್ಯಕ್ತಿಯನ್ನು ಕಂಡರೆ ದೃಶ್ಯವನ್ನು ಉದ್ಯಾನವನದಲ್ಲಿ ಸೆರೆ ಹಿಡಿಯಲಾಗಿದೆ ಎಂದು ತೋರುತ್ತದೆ. ಸುತ್ತಲು ಹಸಿರು ಮರಗಳು ಮತ್ತು ಸಸ್ಯಗಳು ಗೋಚರಿಸುತ್ತವೆ. ಬ್ಯಾಂಕಾಕ್ ಸೇರಿದಂತೆ ಹಲವು ಕಡೆ ಉದ್ಯಾನವನಗಳಿದ್ದರೂ ಅಲ್ಲಿ ಬೆಳೆದ ಹುಲಿಗಳು ಈ ರೀತಿ ವರ್ತಿಸುತ್ತವೆ ಎಂದು ಹೇಳಲಾಗುತ್ತದೆ.
English summary
Man suddenly started kissing the tiger’s lips. Watch the video to see what happened next.