ಅಪರಿಚಿತ ಮಹಿಳೆಯಿಂದ ಸಂಸದ ಸಿದ್ದೇಶ್ವರರಿಗೆ ಹನಿಟ್ರ್ಯಾಪ್ ಯತ್ನ? ದೂರು ದಾಖಲು | Honeytrap Attempt On MP Siddeshwar By Unknown Woman

Davanagere

lekhaka-Yogaraja G H

By ದಾವಣಗೆರೆ ಪ್ರತಿನಿಧಿ

|

Google Oneindia Kannada News

ದಾವಣಗೆರೆ, ಜುಲೈ 26: ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಮೊಬೈಲ್‌ನಲ್ಲಿ ವ್ಯಾಟ್ಸಪ್ ಕಾಲ್ ಮಾಡಿ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿ, ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿದ್ದೇಶ್ವರ ಅವರು ಬೆಂಗಳೂರಿನ ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜುಲೈ 20ನೇ ತಾರೀಖಿನ ರಾತ್ರಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಸಿದ್ದೇಶ್ವರ ಅವರ ಮೊಬೈಲ್ ನಂಬರ್‌ನ ವ್ಯಾಟ್ಸಪ್‌ಗೆ ರಾತ್ರಿ 10. 16ರ ಸುಮಾರಿಗೆ ಹಾಯ್ ಹೌ ಆರ್ ಯು ಅಂತಾ ಮೆಸೇಜ್ ಮಾಡಿದ್ದಾಳೆ. ಆದ್ರೆ, ಸಂಸದರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 10:24ಕ್ಕೆ ವ್ಯಾಟ್ಸಪ್ ಆಡಿಯೋ ಕಾಲ್ ಮಾಡಿರುವ ಅಪರಿಚಿತ ಮಹಿಳೆಯು ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದ್ದಾಳೆ. ಆಗ ಸಂಸದರು ಯಾರು ಎಂದು ಕೇಳಿದ್ದಾರೆ. ಮತ್ತೆ ಕಾಲ್ ಕಟ್ ಆಗಿದೆ.

honeytrap-attempt-on-mp-siddeshwar

ಆ ನಂತರ ಮತ್ತೆ ಕಾಲ್ ಮಾಡಿರುವ ಅಪರಿಚಿತ ಮಹಿಳೆಯು ಸಂಸದರಿಗೆ ಕಿರಿಕಿರಿ ಉಂಟು ಮಾಡಿದ್ದಾಳೆ. 10:27ರ ಸುಮಾರಿ ವ್ಯಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಬೆತ್ತಲೆಯಾಗಿದ್ದ ಮಹಿಳೆಯು ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ, ಅಸಭ್ಯವಾಗಿ ಮಾತನಾಡಲು ಶುರು ಮಾಡಿದ್ದಾಳೆ. ಕಾಲ್ ಕಟ್ ಮಾಡಿದರೂ ಪದೇ ಪದೇ ಕಾಲ್ ಮಾಡಿದ್ದಾಳೆ.

ಸಂಸದರ ಭಾವಚಿತ್ರ ಮತ್ತು ವಿಡಿಯೋ ರೆಕಾರ್ಡ್ ಮಾಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸಂಬಂಧ ಸಂಸದರು ಬೆಂಗಳೂರಿನಲ್ಲಿ ಇದ್ದ ಕಾರಣ ಬೆಂಗಳೂರಿನ ಕಮರ್ಷಿಯಲ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Honeytrap: ಬಿಜೆಪಿ ಶಾಸಕ ಹನಿಟ್ರ್ಯಾಪ್ ಮಾಡಲು ಸ್ಟುಡಿಯೋ ಇಟ್ಟುಕೊಂಡಿದ್ದಾರೆ: ವೇಲು ನಾಯ್ಕರ್ ಗಂಭೀರ ಆರೋಪHoneytrap: ಬಿಜೆಪಿ ಶಾಸಕ ಹನಿಟ್ರ್ಯಾಪ್ ಮಾಡಲು ಸ್ಟುಡಿಯೋ ಇಟ್ಟುಕೊಂಡಿದ್ದಾರೆ: ವೇಲು ನಾಯ್ಕರ್ ಗಂಭೀರ ಆರೋಪ

ಸಂಸದ ಸಿದ್ದೇಶ್ವರ್ ಕೊಟ್ಟ ಸ್ಪಷ್ಟನೆ ಏನು.?

ಜುಲೈ 20ರಂದು ನಾನು ಬೆಂಗಳೂರಿನಲ್ಲಿದ್ದೆ. ರಾತ್ರಿ 10:20ಕ್ಕೆ ಫೋನ್ ಬಂತು. ನನಗೆ 71 ವರ್ಷ ಆಗಿದೆ. ಏನು ಮಾತನಾಡುತ್ತೀಯಾ ಎಂದು ಕೇಳಿದೆ. ರೆಕಾರ್ಡ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿದಳು. ವ್ಯಾಟ್ಸಪ್, ಫೇಸ್ ಬುಕ್ ಸೇರಿದಂತೆ ಎಲ್ಲೆಡೆ ವಿಡಿಯೋ ಹಾಕುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದಳು. ನಾನು ಕೂಡಲೇ ಪೊಲೀಸರಿಗೆ ಈ ವಿಷಯ ತಿಳಿಸಿದೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನಗೆ ತುಮಕೂರಿನ ಡಿವೈಎಸ್ಪಿ ಒಬ್ಬರು ಪರಿಚಯ ಇದ್ದರು. ಅವರಿಗೆ ಈ ಮಾಹಿತಿ ನೀಡಿದೆ. ಕೂಡಲೇ ಬಂದ ಅವರು ವಿಡಿಯೋ ಕಾಲ್ ಬಂದ ನಂಬರ್‌ಗೆ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಈ ರೀತಿಯ ಕರೆಗಳು ಬರುತ್ತಲೇ ಇರುತ್ತವೆ. ದೂರು ಕೊಡಿ ಅಂದ್ರು, ಹಾಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ದುಡ್ಡಿನ ವಿಚಾರ ಬಂದಿಲ್ಲ. ಡಿವೈಎಸ್ಪಿಯವರು ಬಂದರು. ಅವರು ಬಂದಾಗ ಎಲ್ಲಾ ವಿಚಾರ ತಿಳಿಸಿದರು. ನನ್ನ ನಂಬರ್ ನಿಂದ ಕಾಲ್ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ ಎಂದು ಹೇಳಿದ್ದಾರೆ.

ರಾಜಸ್ತಾನದಿಂದ ಕರೆ ಬಂದಿದೆ. ಡೂಪ್ಲಿಕೇಟ್ ನಂಬರ್ ನಿಂದ ಮಾತನಾಡುತ್ತಾರೆ. ಹಾಗಾಗಿ ತಲೆಕೆಡಿಸಿಕೊಳ್ಳಬೇಡಿ. ಮತ್ತೆ ಕರೆ ಬಂದಿಲ್ಲ. ನಾನೇನೂ ಮಾತನಾಡಿಯೇ ಇಲ್ಲ. ವ್ಯಾಟ್ಸಪ್‌ನಲ್ಲಿನ ಮೆಸೇಜ್ ನೋಡುತ್ತೇನೆ ಅಷ್ಟೇ. ಅಂದಿನಿಂದ ಮತ್ತೆ ಯಾವುದೇ ಕರೆ, ವ್ಯಾಟ್ಸಪ್ ಕಾಲ್, ವ್ಯಾಟ್ಸಪ್ ವಿಡಿಯೋ ಕರೆ ಬಂದಿಲ್ಲ ಎಂದು ಸಿದ್ದೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.

English summary

Honeytrap attempt on BJP MP Siddeshwar by unknown woman. Complaint Filed. Know more

Story first published: Wednesday, July 26, 2023, 21:00 [IST]

Source link