Namma Metro; ಮತ್ತೊಂದು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ | KR Pura And Baiyappanahalli Namma Metro Train Run Begins

Bengaluru

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 26; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಸಿಹಿಸುದ್ದಿ. ನಗರದ ನೇರಳೆ ಮಾರ್ಗದವೊಂದರಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಬುಧವಾರ ಸಂಜೆ ಚಾಲನೆ ಸಿಕ್ಕಿದೆ. ಇದರಿಂದಾಗಿ ವೈಟ್‌ಫೀಲ್ಡ್‌-ಕೆ. ಆರ್. ಪುರ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬುಧವಾರ ಸಂಜೆ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಟ್‌ಫೀಲ್ಡ್‌ ನಮ್ಮ ಮೆಟ್ರೋ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. .

namma-metro-train-run-begins

ನಮ್ಮ ಮೆಟ್ರೋ ಟ್ವೀಟ್‌ ಮೂಲಕ ಈ ಕುರಿತು ಮಾಹಿತಿ ನೀಡಿದೆ. ರೈಲಿನ ಪ್ರಾಯೋಗಿಕ ಸಂಚಾರದ ವಿಡಿಯೋ ಕೂಡಾ ಪೋಸ್ಟ್ ಮಾಡಿದೆ. ‘ಇಂದು ಮೊದಲನೇ ರೈಲು ಪ್ರಾಯೋಗಿಕ ಸಂಚಾರವು ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ಸಂಜೆ 6.04 ಗಂಟೆಗೆ ಪ್ರಾರಂಭವಾಗಿ ಮತ್ತೆ ಮರಳಿ ಕೆ. ಆರ್. ಪುರ ನಿಲ್ದಾಣಕ್ಕೆ ತಲುಪಿತು’ ಎಂದು ಟ್ವೀಟ್ ಮಾಡಿದೆ.

ವೈಟ್‌ಫೀಲ್ಡ್‌ ಮಾರ್ಗ ಉದ್ಘಾಟನೆಗೊಂಡು ರೈಲು ಸಂಚಾರ ಆರಂಭವಾದರೂ ಸಹ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿರಲಿಲ್ಲ. ಸುಮಾರು 2 ಕಿ. ಮೀ. ಮಾರ್ಗದ ಕಾಮಗಾರಿ ಈಗ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಆರಂಭವಾಗಿದೆ.

English summary

Good news for Bengaluru city. Trial run between KR Pura and Baiyappanahalli Namma Metro stations began on July 26th evening.

Story first published: Wednesday, July 26, 2023, 19:50 [IST]

Source link