ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಆರ್‌ಸಿಬಿ ಆಟಗಾರ: ಒಂದೇ ಓವರ್‌ನಲ್ಲಿ 5 ಸಿಕ್ಸ್ | RCB Batter Will Jacks shines with five consecutive sixes T20 Blast Match

Sports

oi-Naveen Kumar N

|

Google Oneindia Kannada News

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ನಲ್ಲಿ ಆರ್ ಸಿಬಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅಬ್ಬರಿಸಿದ್ದಾರೆ. ಒಂದೇ ಓವರ್ ನಲ್ಲಿ 5 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದರು. ಗುರುವಾರ ನಡೆದ ಸರ್‍ರೆ ಮತ್ತು ಮಿಡಲ್‌ಸೆಕ್ಸ್ ನಡುವಿನ ಪಂದ್ಯದಲ್ಲಿ, ಸರ್‍ರೆ ತಂಡದ ಪರವಾಗಿ ಆಡುವ ಜ್ಯಾಕ್ಸ್ ಅಬ್ಬರಿಸಿದರು.

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಿಡಲ್‌ಸಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಿಲ್‌ ಜ್ಯಾಕ್ಸ್ ಮತ್ತು ಲೂರಿ ಇವಾನ್ಸ್ ಬಿರುಸಿನ ಬ್ಯಾಟಿಂಗ್ ಮಾಡಿದರು. 12.4 ಓವರ್ ಗಳಲ್ಲಿ 177 ರನ್‌ಗಳನ್ನು ಕಲೆ ಹಾಕಿದರು.

Will Jacks shines with five consecutive sixes

ಲೂರಿ ಇವಾನ್ಸ್ 37 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಿತ 85 ರನ್ ಗಳಿಸಿದರೆ. ವಿಲ್ ಜ್ಯಾಕ್ಸ್ 45 ಎಸೆತಗಳಲ್ಲಿ 8 ಬೌಂಡರಿ, 7 ಭರ್ಜರಿ ಸಿಕ್ಸರ್ ಸಹಿತ 213 ಸ್ಟ್ರೈಕ್‌ರೇಟ್‌ನಲ್ಲಿ 96 ರನ್ ಗಳಿಸಿ ಔಟಾಗುವ ಮೂಲಕ, ಶತಕದಿಂದ ವಂಚಿತರಾದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸರ್‍ರೆ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 252 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

11ನೇ ಓವರ್ ನಲ್ಲಿ ಅಬ್ಬರಿಸಿದ ವಿಲ್ ಜ್ಯಾಕ್ಸ್

11ನೇ ಓವರ್ ನಲ್ಲಿ ವಿಲ್‌ ಜ್ಯಾಕ್ಸ್ ಅಕ್ಷರಶಃ ಅಬ್ಬರಿಸಿದರು. ಹೊಲ್‌ಮಾನ್‌ ಬೌಲಿಂಗ್‌ನಲ್ಲಿ ಸತತವಾಗಿ 5 ಸಿಕ್ಸರ್ ಸಿಡಿಸಿ ಮಿಂಚಿದರು. 11ನೇ ಓವರ್ ನ ಮೊದಲ ಐದು ಎಸೆತಗಳಲ್ಲಿ ಅವರು ಸಿಕ್ಸರ್ ಸಿಡಿಸಿದರು, ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಲು ವಿಫಲಾದರು, ಇದರಿಂದ ಮತ್ತೊಂದು ದಾಖಲೆ ಬರೆಯುವ ಅವಕಾಶ ತಪ್ಪಿಸಿಕೊಂಡರು.

ಟಿ20 ಬ್ಲಾಸ್ಟ್ ಪಂದ್ಯಾವಳಿಯಲ್ಲಿ ಈ ಬಾರಿ 12 ಪಂದ್ಯಗಳನ್ನು ಆಡಿರುವ ವಿಲ್‌ಜ್ಯಾಕ್ಸ್ 42.55 ಸರಾಸರಿ, 160.27 ಸ್ಟ್ರೈಕ್‌ರೇಟ್‌ನಲ್ಲಿ 468 ರನ್ ಕಲೆಹಾಕಿದ್ದಾರೆ. ಮಾತ್ರವಲ್ಲದೆ 10 ವಿಕೆಟ್‌ ಪಡೆದು ಮಿಂಚಿದ್ದಾರೆ.

ಕೊಹ್ಲಿ vs ಧೋನಿ vs ರೋಹಿತ್ ಶರ್ಮಾ: ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಆಟಗಾರ ಯಾರು?ಕೊಹ್ಲಿ vs ಧೋನಿ vs ರೋಹಿತ್ ಶರ್ಮಾ: ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಆಟಗಾರ ಯಾರು?

ಗಾಯದ ಸಮಸ್ಯೆಯ ಕಾರಣ ಅವರು 2023ರ ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಆಡಲು ಸಾಧ್ಯವಾಗಲಿಲ್ಲ. 3.2 ಕೋಟಿ ರುಪಾಯಿ ನೀಡಿ ಅವರನ್ನು ಆರ್ ಸಿಬಿ ಮಿನಿ ಹರಾಜಿನಲ್ಲಿ ಖರೀದಿ ಮಾಡಿತ್ತು. ಮುಂದಿನ ಐಪಿಎಲ್‌ ಸೀಸನ್‌ನಲ್ಲಿ ಅವರು ಆರ್ ಸಿಬಿ ಪರವಾಗಿ ಕಣಕ್ಕಿಳಿಯಲಿದ್ದು, ಅಭಿಮಾನಿಗಳು ಅವರ ಆಟ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

252 ರನ್ ಗಳಿಸಿದರೂ ಸೋತ ಸರ್‍ರೆ

ಇನ್ನು 252 ರನ್‌ ಗಳಿಸಿದರೂ ಸರ್‍ರೆ ತಂಡ ಸೋಲು ಕಂಡಿದೆ. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮಿಡಲ್‌ಸೆಕ್ಸ್ ಕೇವಲ 19.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 254 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮಿಡಲ್‌ಸೆಕ್ಸ್ ಪರವಾಗಿ ಸ್ಟೀಫನ್ ಎಸ್ಕಿನಾಜಿ 39 ಎಸೆತಗಳಲ್ಲಿ 73 ರನ್ ಗಳಿಸಿದರೆ, ಜೋ ಕ್ರಾಕ್‌ನೆಲ್ 16 ಎಸೆತಗಳಲ್ಲಿ 36 ರನ್, ಮ್ಯಾಕ್ಸ್ ಹೋಲ್ಡನ್ 35 ಎಸೆತಗಳಲ್ಲಿ 68 ರನ್, ರಿಯಾನ್ ಹಿಗ್ಗಿನ್ಸ್ 24 ಎಸೆತಗಳಲ್ಲಿ 48 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾದರು.

English summary

Will Jacks, England and RCB all-rounder, displays power-hitting prowess with five consecutive sixes in Surrey’s T20 Blast match after recovering from IPL injury.

Story first published: Friday, June 23, 2023, 15:00 [IST]

Source link