ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿ ಹೆಮ್ಮೆಯ ಮಾತು: ಮೋದಿ ಮಾತಿಗೆ ಎಲ್ಲರೂ ಫಿದಾ! | PM Modi answer to Rahul Gandhi indirectly in America

International

oi-Malathesha M

|

Google Oneindia Kannada News

ವಾಷಿಂಗ್ಟನ್: ಪ್ರಧಾನಿ ಮೋದಿ ಕಾಂಗ್ರೆಸ್ ಸದಸ್ಯರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಾಷ್ಟ್ರದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕೆಂದು ಕರೆಕೊಟ್ಟಿದ್ದಾರೆ. ಆದ್ರೆ ಪಿಎಂ ಮೋದಿ ಮಾತನಾಡಿದ್ದು ಭಾರತದ ಕಾಂಗ್ರೆಸ್ ಬಗ್ಗೆ ಅಲ್ಲ, ಅಮೆರಿಕದ ಕಾಂಗ್ರೆಸ್ ಕುರಿತು! ಹೌದು ಅಮೆರಿಕನ್ ಕಾಂಗ್ರೆಸ್ ಸದಸ್ಯರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಪ್ರಧಾನಿ ಪರೋಕ್ಷವಾಗಿ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಜಗತ್ತಿನ ಕೇಂದ್ರ ಬಿಂದುವಾಗಿದೆ. ಹೀಗಾಗಿಯೇ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಪ್ರಧಾನಿ ಮೋದಿ ಅವರಿಗೆ ಭರ್ಜರಿ ವೆಲ್‌ಕಂ ಮಾಡಿದೆ. ಆದ್ರೆ ಇದೇ ವೇಳೆ ಪ್ರಧಾನಿ ಪರೋಕ್ಷವಾಗಿ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದು, ಆಂತರಿಕ ವಿಚಾರ ಬಂದಾಗ ನಮ್ಮ ಮನೆಯೊಳಗೆ ಸ್ಪರ್ಧೆ ಇರಬೇಕು. ಅದನ್ನು ಬಿಟ್ಟು ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದಿದ್ದಾರೆ. ಇತ್ತೀಚೆಗೆ ರಾಹುಲ್ ಅಮೆರಿಕ ಪ್ರವಾಸ ಕೈಗೊಂಡಿದ್ರು. ಆಗ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಆ ವಿಚಾರವನ್ನೇ ಪರೋಕ್ಷವಾಗಿ ಪ್ರಧಾನಿ ಮೋದಿ ಈಗ ಪ್ರಸ್ತಾಪ ಮಾಡಿದಂತೆ ಕಾಣುತ್ತಿದೆ.

PM Modi answer to Rahul Gandhi indirectly in America HJ

ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಈಗ 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದಾರೆ. ಈ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿ, ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ 2 ಬಾರಿ ಅಮೆರಿಕನ್ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದಾರೆ ಮೋದಿ. ಹೀಗೆ ಭಾರತದ ಪ್ರಧಾನಿ ಅಮೆರಿಕದಲ್ಲಿ ಭಾರತದ ಪವರ್ ತೋರಿಸುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು.

ಪ್ರಧಾನಿ ಮೋದಿ ಮಾತಿಗೆ ಚಪ್ಪಾಳೆ

ಆಲೋಚನೆ ಮತ್ತು ಸಿದ್ಧಾಂತದ ಚರ್ಚೆ ಅರ್ಥಮಾಡಿಕೊಳ್ಳಬಲ್ಲೆ. ನೀವು ಒಟ್ಟಿಗೆ ಸೇರಿದನ್ನು ನೋಡಲು ನನಗೆ ಸಂತೋಷವಾಗಿದೆ, ವಿಶ್ವದ 2 ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನ ಆಚರಿಸಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ. ನಮ್ಮ ಮನೆಯ ಒಳಗೆ ವೈಚಾರಿಕವಾದ ಭಿನ್ನಾಭಿಪ್ರಾಯ, ಸ್ಪರ್ಧೆ ಏನೇ ಇರಬಹುದು. ಆದರೆ ರಾಷ್ಟ್ರದ ವಿಚಾರ ಬಂದಾಗ ನಾವು ಒಟ್ಟಾಗಿ ಇರಬೇಕು ಎಂದಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಪರೋಕ್ಷವಾಗಿ ವಿಪಕ್ಷಗಳ ನಾಯಕರನ್ನ ಕುಟುಕಿದ್ದಾರೆ. ಪ್ರಧಾನಿ ಮೋದಿ ಮಾತಿಗೆ ಅಮೆರಿಕನ್ ಕಾಂಗ್ರೆಸ್ ಸದಸ್ಯರು ಚಪ್ಫಾಳೆ ತಟ್ಟಿ ಸ್ವಾಗತಿಸಿದರು.

PM Modi answer to Rahul Gandhi indirectly in America

30 ವರ್ಷದ ಹಿಂದಿನ ನೆನಪು ಮೆಲುಕು!

ಇನ್ನು ನಿನ್ನೆ ಅಮೆರಿಕದ ಶ್ವೇತಭವನದಲ್ಲಿ ಮಾತನಾಡಿದ್ದ ಮೋದಿ ಹಲವು ವಿಚಾರಗಳನ್ನ ಮೆಲುಕು ಹಾಕಿದ್ದರು. ಅದರಲ್ಲೂ ತಮ್ಮ 30 ವರ್ಷಗಳ ಹಿಂದಿನ ದಿನಗಳನ್ನ ಹೇಳಿದ್ದರು. 1993ರ ಘಟನೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡರು. 3 ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೆರಿಕ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್ ಹೌಸ್‌ನ ಹೊರಗಡೆಯಿಂದ ನೋಡಿದ್ದೆ. ಈಗ ಪ್ರಧಾನಿಯಾಗಿ ಇಲ್ಲಿ ಬಂದಿದ್ದೇನೆ ಎಂದರು. ಅಮೆರಿಕದ ಅಧ್ಯಕ್ಷ ಹಾಗೂ ನಾಯಕರು ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಗತ ಕೋರಿದ್ದರು.

ಹಾಗೇ ಶ್ವೇತಭವನ ಆವರಣಕ್ಕೆ ನಿನ್ನೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ಅಮೆರಿಕ ಸೇನಾ ಪಡೆಗಳು ಗೌರವ ಸಲ್ಲಿಸಿದ್ದವು. ಹಾಗೇ ಪಿಎಂ ಮೋದಿ ಅವರು ಸೇನಾಪಡೆಗಳ ಗೌರವ ವಂದನೆ ಸ್ವೀಕರಿಸಿದ್ದರು. ನಂತರ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ಅಮೆರಿಕನ್ ಕಾಂಗ್ರೆಸ್ ಸದಸ್ಯರ ಒಗ್ಗಟ್ಟಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಹೀಗೆ 2023ರ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಹಲವು ಮೊದಲುಗಳಿಗೆ ನಾಂದಿ ಹಾಡಿದೆ. ಜೊತೆಗೆ ಅನೇಕ ಪ್ರಮುಖ ಒಪ್ಪಂದಗಳಿಗೂ ಭಾರತ ಮತ್ತು ಅಮೆರಿಕ ಸಹಿ ಹಾಕಿವೆ. ಪ್ರಮುಖವಾಗಿ ರಕ್ಷಣಾ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ಸ್ನೇಹ ಮತ್ತಷ್ಟು ಬಲವಾಗುತ್ತಿದೆ.

English summary

PM Modi answer to Rahul Gandhi indirectly in America.

Story first published: Friday, June 23, 2023, 16:44 [IST]

Source link