India
oi-Mamatha M
ನವದೆಹಲಿ, ಜೂನ್. 23: ಲೋಕಸಭಾ ಚುನಾವಣೆಗಾಗಿ ಪ್ರತಿಪಕ್ಷಗಳ ಸಭೆಯ ಬಗ್ಗೆ ಬಿಜೆಪಿ ಟೀಕೆ ಮಾಡಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್ ಅಸಮರ್ಥ’ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಇತರರ ಬೆಂಬಲವನ್ನು ಬಯಸುತ್ತಿದೆ ಎಂದು ಬಿಜೆಪಿ ಶುಕ್ರವಾರ ಅಪಹಾಸ್ಯ ಮಾಡಿದೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ವಿರೋಧಿ ರಂಗ ರಚನೆಗೆ ಮಾರ್ಗಸೂಚಿ ರೂಪಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಶುಕ್ರವಾರ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಸಿದ್ದಾರೆ. ಜನತಾದಳ (ಯುನೈಟೆಡ್) ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಸಭೆಯನ್ನು ಆಯೋಜಿಸಿದ್ದರು.
ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಜೆಡಿಯು ಮತ್ತು ಇತರ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ “ಪ್ರಜಾಪ್ರಭುತ್ವದ ಕೊಲೆ” ಯನ್ನು ಕಂಡ ಕೆಲವು ನಾಯಕರು ಪಾಟ್ನಾದಲ್ಲಿ ಕಾಂಗ್ರೆಸ್‌ನ ಪರಾಕಾಷ್ಠೆಯ ಅಡಿಯಲ್ಲಿ ಜಮಾಯಿಸಿರುವುದು ವ್ಯಂಗ್ಯ ಎಂದು ಲೇವಡಿ ಮಾಡಿದ್ದಾರೆ.
ಯುಪಿಎ ಸರ್ಕಾರ 12 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿದೆ: ಅಮಿತ್ ಶಾ ಗಂಭೀರ ಆರೋಪ
ಅವರು ಪ್ರಧಾನಿ ಮೋದಿಯನ್ನು ತಾವಾಗಿಯೇ ಎದುರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. “ಪ್ರಧಾನಿ ಮೋದಿಯವರನ್ನು ಸೋಲಿಸಲು ಕಾಂಗ್ರೆಸ್ ಅಸಮರ್ಥ ಎಂದು ಬಹಿರಂಗವಾಗಿ ಘೋಷಿಸಿದ್ದಕ್ಕಾಗಿ ನಾನು ವಿಶೇಷವಾಗಿ ಕಾಂಗ್ರೆಸ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಮೋದಿಯನ್ನು ಸೋಲಿಸಲು ಅದಕ್ಕೆ ಬೇರೆ ಪಕ್ಷಗಳ ಬೆಂಬಲದ ಅಗತ್ಯವಿದೆ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
“ಅಧಿಕಾರವು ಅರಮನೆಯಿಂದ ಜನರತ್ತ ಸಾಗಿದೆ. ಅದಕ್ಕಾಗಿಯೇ ತಮ್ಮ ರಾಜಕೀಯ ಪರಂಪರೆಯ ಬಗ್ಗೆ ಹೆಮ್ಮೆಪಡುವ ಜನರು ಈಗ ತುರ್ತು ಪರಿಸ್ಥಿತಿಯಲ್ಲಿ ಯಾರನ್ನು ಕಂಬಿ ಹಿಂದೆ ಹಾಕಿದ್ದರೋ ಅವರ ಬಳಿಗೆ ಹೋಗಬೇಕಾಗಿದೆ” ಎಂದು ಕಿಡಿ ಕಾರಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಮುಸುಕಿನ ದಾಳಿ ನಡೆಸಿದ ಸ್ಮೃತಿ ಇರಾನಿ, ರಾಜ್ಯದ ಭಾಗಲ್ಪುರ್ ಜಿಲ್ಲೆಯಲ್ಲಿ ಇತ್ತೀಚೆಗೆ ಗಂಗಾನದಿಯ ಮೇಲಿನ ಸೇತುವೆ ಕುಸಿತವನ್ನು ಉಲ್ಲೇಖಿಸಿದ್ದಾರೆ. “ಅವರು ಯಾವ ರೀತಿಯ ಪ್ರಜಾಪ್ರಭುತ್ವ ಸೇತುವೆಯನ್ನು ಕಟ್ಟುತ್ತಾರೆ, ಅವರು ಸೇತುವೆಯನ್ನು ನಿರ್ಮಿಸಲು ಸಾಧ್ಯವಿಲ್ಲ”. ಅಭಿವೃದ್ಧಿ ವಿಷಯಗಳಲ್ಲಿ ಒಂದಾಗಲು ಸಾಧ್ಯವಾಗದ ಜನರು ಈಗ ಬ್ಲ್ಯಾಕ್‌ಮೇಲ್ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಕೆಣಕಿದ್ದಾರೆ.
English summary
Lok Sabha elections 2024: Congress is seeking the support of others because it is incapable of defeating Prime Minister Narendra Modi alone says Minister Smriti Irani . know more.
Story first published: Friday, June 23, 2023, 16:48 [IST]