ಮಧ್ಯಪ್ರದೇಶ: ಬಾಕಿ ಶುಲ್ಕ ಕಟ್ಟುವಂತೆ ಕೇಳಿದ್ದ ಶಿಕ್ಷಕರ ಮೇಲೆ ಇಬ್ಬರು ವಿದ್ಯಾರ್ಥಿಗಳಿಂದ ಗುಂಡಿನ ದಾಳಿ | Students fired at their former teacher in Madhya Pradesh

India

oi-Mamatha M

|

Google Oneindia Kannada News

ಭೋಪಾಲ್, ಜೂನ್. 23: ಶಿಕ್ಷಕರನ್ನು ದೇವರಿಗೆ ಹೋಲಿಸಿ, ಗೌರವಿಸುವ ಭಾರತ ದೇಶದಲ್ಲಿ ಮೂರು ವರ್ಷಗಳಿಂದ ಬಾಕಿ ಇರುವ ಶುಲ್ಕವನ್ನು ಪಾವತಿಸುವಂತೆ ಕೇಳಿದ್ದಕ್ಕೆ ಕೋಪಗೊಂಡ ಇಬ್ಬರು ವಿದ್ಯಾರ್ಥಿಗಳು ತಮ್ಮ ಮಾಜಿ ಶಿಕ್ಷಕರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಜೌರಾ ರಸ್ತೆ ಪ್ರದೇಶದಲ್ಲಿ ಬುಧವಾರ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಇಬ್ಬರು ವಿದ್ಯಾರ್ಥಿಗಳು ಶಿಕ್ಷಕ ಗಿರ್ವಾರ್ ಸಿಂಗ್ ಅವರನ್ನು ತಾನು ನಡೆಸುತ್ತಿರುವ ಕೋಚಿಂಗ್ ಸೆಂಟರ್‌ನಿಂದ ಹೊರಗೆ ಕರೆದಿರುವುದನ್ನು ಕಾಣಬಹುದು.

Students fired at their former teacher in Madhya Pradesh

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಗಿರ್ವಾರ್ ಸಿಂಗ್ ಅವರ ಬಳಿ ಸೌಹಾರ್ದಯುತ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಇಬ್ಬರೊಂದಿಗೆ ಶಿಕ್ಷಕ ಮಾತನಾಡುತ್ತಲೇ ಇರುವಾಗಲೇ ಹಿಂಬದಿ ಕುಳಿತಿದ್ದ ವಿದ್ಯಾರ್ಥಿ ಲೋಕಲ್ ಪಿಸ್ತೂಲನ್ನು ಹೊರತೆಗೆದು ಗಿರ್ವಾರ್ ಸಿಂಗ್‌ನ ಹೊಟ್ಟೆಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ.

ಏಕಾಂಗಿಯಾಗಿ ಪ್ರಧಾನಿ ಮೋದಿಯನ್ನು ಸೋಲಿಸಲು ಕಾಂಗ್ರೆಸ್‌ ಅಸಮರ್ಥ: ಬಿಜೆಪಿಏಕಾಂಗಿಯಾಗಿ ಪ್ರಧಾನಿ ಮೋದಿಯನ್ನು ಸೋಲಿಸಲು ಕಾಂಗ್ರೆಸ್‌ ಅಸಮರ್ಥ: ಬಿಜೆಪಿ

ಗಿರ್ವಾರ್ ಸಿಂಗ್ ಅವರು ಜೌರಾ ರೋಡ್ ಪ್ರದೇಶದಲ್ಲಿ ಕುಲೇಂದ್ರ ಕೋಚಿಂಗ್ ಸೆಂಟರ್ ನಡೆಸುತ್ತಿದ್ದು, ಶಿಕ್ಷಕರಾಗಿ ಕೆಲಸ ಕೂಡ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರಿಬ್ಬರು ಮೂರು ವರ್ಷಗಳ ಹಿಂದೆ 12ನೇ ತರಗತಿ ಪರೀಕ್ಷೆ ಬರೆಯುವವರೆಗೂ ಇವರ ಕೋಚಿಂಗ್ ಸೆಂಟರ್‌ನಲ್ಲಿ ಓದಿದ್ದರು.

ವಿದ್ಯಾರ್ಥಿಗಳು ಗಿರ್ವಾರ್ ಸಿಂಗ್ ಅವರಿಗೆ ಬೋಧನಾ ಶುಲ್ಕದಲ್ಲಿ ಸ್ವಲ್ಪ ಹಣವನ್ನು ನೀಡಬೇಕಾಗಿತ್ತು . ಅದನ್ನು ಕೆಲವು ಸಂದರ್ಭಗಳಲ್ಲಿ ಇಬ್ಬರಿಗೂ ಹಣ ಪಾವತಿಸುವಂತೆ ಸಂತ್ರಸ್ತರು ಕೇಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಣ ಕೇಳಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ಹಲ್ಲೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Students fired at their former teacher in Madhya Pradesh

ಘಟನೆಯ ನಂತರ ದಾರಿಹೋಕರು ಗಾಯಾಳು ಶಿಕ್ಷಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ನಂತರ ಗ್ವಾಲಿಯರ್‌ನ ಆಸ್ಪತ್ರೆಗೆ ಸೇರಿಸಿದ್ದಾರೆ. ವಿದ್ಯಾರ್ಥಿಗಳು ತನ್ನ ಮೇಲೆ ಗುಂಡು ಹಾರಿಸುವ ಮೊದಲು ಮಾಮೂಲಿಯಾಗಿ ಸಾಮಾನ್ಯ ಸಂಭಾಷಣೆಯಲ್ಲಿ ತೊಡಗಿದ್ದರು, ಕೆಲಸ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ತನ್ನ ಮೇಲೆ ಏಕೆ ಗುಂಡು ಹಾರಿಸಿದ್ದಾರೆ ಎಂದು ತಿಳಿದಿಲ್ಲ ಎಂದು ಶಿಕ್ಷಕ ಗಿರ್ವಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಮೊರೆನಾ) ರಾಯ್ ಸಿಂಗ್ ನರ್ವಾರಿಯಾ ಅವರು, “ಶಿಕ್ಷಕನಿಗೆ ಗಾಯವಾಗಿದ್ದು, ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ . ನಾವು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ. ಘಟನೆಯ ಹಿಂದಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ” ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

English summary

Two students have fired at their former teacher in Madhya Pradesh over asked to pay fees that they had owed for three years. know more.

Story first published: Friday, June 23, 2023, 17:47 [IST]

Source link