Hassan
lekhaka-Veeresha H G
ಹಾಸನ, ಜೂನ್, 23: ವಿದ್ಯುತ್ ದರ ಏರಿಕೆ ಖಂಡಿಸಿ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳು, ಹಾಗೂ ಸಂಘ ಸಂಸ್ಥೆಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಶುರು ಮಾಡಿವೆ. ಹಾಗೆಯೇ ಇಂದು ಹಾಸನದಲ್ಲಿ ಕೈಗಾರಿಕೋದ್ಯಮಿಗಳ ಪ್ರತಿಭಟನೆ ವೇಳೆ ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.
ಹಾನಸ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಕೈಗಾರಿಕೋದ್ಯಮಿಗಳನ್ನು ಸಚಿವ ರಾಜಣ್ಣ ಭೇಟಿ ಮಾಡಿದರು. ಈ ವೇಳೆ ಸಚಿವರ ಜೊತೆ ಬಂದಂತಹ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಹೋರಾಟಗಾರರ ಮೇಲೆ ಗರಂ ಆಗಿದ್ದಾರೆ. ರೀ ಬೆಲೆ ಏರಿಕೆ ಮಾಡಿರುವುದು ಯಾರು, ಆ ಸಭೆಯಲ್ಲಿ ನೀವು ಇರಲಿಲ್ವಾ?. ಇಲ್ಲ ಎಂದ ಮೇಲೆ ನಿಮ್ಮ ಸಂಘಟನೆಯವರು ಯಾಕೆ ಸಹಿ ಮಾಡಿದರು ಅಂತಾ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸುಮ್ಮನೇ ಏನೇನೂ ಮಾತಾನಾಡುವುದನ್ನು ಬಿಟ್ಟು ಚರ್ಚೆಗೆ ಬನ್ನಿ. ಯಾರೋ ಮಾಡಿರುವ ಬೆಲೆ ಏರಿಕೆಯನ್ನು ಸಿಎಂ ಇಳಿಸುವುದಕ್ಕೆ ಆಗುತ್ತದೆಯಾ? ಅದು ಕೇಂದ್ರದ ಅಧೀನ ಸಂಸ್ಥೆ ಎಂದ ಶಾಸಕರಿಗೆ ಹೋರಾಟ ನಿರತರು ತಿರುಗೇಟು ಕೊಟ್ಟಿದ್ದಾರೆ. ನಾವು ಅಂದೂ ಕೂಡ ಈ ತೀರ್ಮಾನವನ್ನು ಒಪ್ಪಿಲ್ಲ ಸರ್. ಈಗ ನಿಮ್ಮ ಸರ್ಕಾರ ಬಂದಿದೆ ಕಡಿಮೆ ಮಾಡಿಸಿ ಎಂದ ಹೋರಾಟಗಾರರು ಮನವಿ ಮಾಡಿದರು.
ವಿದ್ಯುತ್ ದರ ಏರಿಸಿದ್ದು ನಾವಲ್ಲ ಬಿಜೆಪಿಯವರು, ಸುಮ್ನೆ ಏನೇನೋ ಮಾತಾಡ್ಬೇಡಿ: DCM ಡಿಕೆಶಿ ಹೀಗೆ ಹೇಳಿದ್ದು ಯಾರಿಗೆ?
ಹಾಲಿನ ದರ ಏರಿಕೆ ಯಾಕೆ?
ಇನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹಾಲಿನ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಲಿನ ದರ ಏರಿಕೆ ಅದರೆ ಗ್ರಾಹಕರದ್ದೊಂದೇ ಪ್ರಶ್ನೆ ಅಲ್ಲ. ಹಾಲು ಉತ್ಪಾದಕರು ಹೇಳಬೇಕು. ಐದು ರೂಪಾಯಿ ಜಾಸ್ತಿ ಮಾಡಬೇಕು ಅಂತಾ ನನ್ನ ಅಭಿಪ್ರಾಯ ಇತ್ತು. ಅದು ಸರ್ಕಾರದ ಅಭಿಪ್ರಾಯ ಅಲ್ಲ, ರೈತನ ಪರವಾಗಿ ಒಬ್ಬ ಜನಪ್ರತಿನಿಧಿಯಾಗಿ ಹೇಳಿದ್ದೇನೆ ಎಂದರು.
ರೈತನಿಗೆ ಉತ್ಪದನಾ ವೆಚ್ವ ಜಾಸ್ತಿ ಇದೆ. ಆದರೆ ಎಷ್ಟೋ ಜನ ರೈತರು ಉಳಿತಾಯ ಆಗುವುದಿಲ್ಲ ಅಂತಾ ಹಾಲು ಉತ್ಪಾದನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಆದ್ದರಿಂದ ರೈತರಿಗೆ ಐದು ರೂಪಾಯಿ ದೊರಕಿಸಿಕೊಡಬೇಕು ಎನ್ನುವುದು ನಮ್ಮ ಅಭಿಪ್ರಾಯ ಆಗಿದೆ. ಮತ್ತೊಂದೆಡೆ ರೈತರಿಗೆ ಅನುಕೂಲ ಆಗುವುದನ್ನು ಮಾತ್ರ ಒಬ್ಬರೂ ಹೇಳುತ್ತಾ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬರೀ ಗ್ರಾಹಕರಿಗೆ ಹಾಲಿನ ದರ ಜಾಸ್ತಿ ಆಯ್ತು ಅನ್ನುವ ಮಾತುಗಳು ಕೇಳಿಬರುತ್ತಿವೆ. ನಾವು ಹಾಲು ಉತ್ಪಾದರು ಮತ್ತು ಗ್ರಾಹರ ಹಿತವನ್ನೂ ಕಾಪಾಡಬೇಕು. ಹಾಗೆಯೇ ನಂದಿನಿ ತುಪ್ಪ ಸಿಗುವುದಿಲ್ಲ. ಯಾಕೆ ಅಂದ್ರೆ ಹಾಲಿನ ಉತ್ಪಾದನೆನೇ ಕಡಿಮೆ ಆಗುತ್ತಾ ಇದೆ. ಫೀಡ್ಸ್, ಅನಿಮಲ್ ಏನ್ ಕೂಡ ರೇಟ್ ಆಗಿದೆ. ಗಂಟು ರೋಗ ಬಂದು ಅನಾನೂಕೂಲ ಆಗಿದೆ. ಆದ್ದರಿಂದ ದರ ಏರಿಕೆ ಮಾಡಿ ರೈತರಿಗೆ ಅನುಕೂಲ ಆಗುವಂತೆ ಮಾಡುವುದೇ ನಮ್ಮ ಉದ್ದೇಶ ಆಗಿದೆ ಎಂದರು.
ಹಾಗೆಯೇ ದರ ಏರಿಕೆ ಮಾಡಬೇಕು ಅಂದರೆ ಗ್ರಾಹಕರಿಗೆ ಹೊರೆ ಮಾಡಬೇಕು ಅಂತಾ ಅಲ್ಲ. ಹಾಲು ಉತ್ಪಾದಕರ ನೆರವಿಗೆ ಹೋಗಬೇಕು ಅನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.
ಒಟ್ಟಿನಲ್ಲಿ ರಾಜ್ಯದ ಹಲವೆಡೆ ಹಾಲು ಮತ್ತು ವಿದ್ಯತ್ ದರ ಏರಿಕೆ ವಿರೋಧಿಸಿ ಹಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕರು ಕೂಡ ದರ ಏರಿಕೆ ಯಾಕೆ ಆಗಿದೆ, ಇದರ ಹಿಂದಿರುವ ಉದ್ದೇಶ ಏನು ಅನ್ನುವ ಸ್ಪಷ್ಟನೆಯನ್ನು ನೀಡುತ್ತಲೇ ಇದ್ದಾರೆ.
English summary
KM Shivalinge Gowdasa reaction on electricity price increase in Hassan, Shivalinge Gowdasa outrage against Industrialists.