ಮೈಸೂರು ಪಾಕ್‌ಗೆ ಜಾಗತಿಕ ಮನ್ನಣೆ: ಈ ಸಿಹಿ ತಿಂಡಿಯ ಇತಿಹಾಸ ನಿಮಗೆಷ್ಟು ಗೊತ್ತು? | Mysore Pak Is 14th Best Street Food Sweet In The World

Mysuru

oi-Mallika P

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜುಲೈ 22: ದಕ್ಷಿಣ ಭಾರತದ ಜನಪ್ರಿಯ ಸಿಹಿ ತಿನಿಸು ಮೈಸೂರು ಪಾಕ್‌ಗೆ ಇದೀಗ ಜಾಗತಿಕ ಮನ್ನಣೆ ದೊರೆತಿದೆ.

ಟೇಸ್ಟ್ ಅಟ್ಲಾಸ್ ಪ್ರಕಟಿಸಿರುವ ವಿಶ್ವದ ಟಾಪ್ 50 ಬೀದಿಬದಿ ಸಿಹಿ ತಿನಿಸುಗಳ ಪೈಕಿ ಮೈಸೂರ್ ಪಾಕ್‌ಗೆ 14ನೇ ಸ್ಥಾನ ಪಡೆದುಕೊಂಡಿದೆ.

ವಿಶ್ವದಾದ್ಯಂತ ಸಿಹಿ ತಿನಿಸು ತಿನ್ನುವ ಜನರಿಂದ ಪಡೆದ ಆನ್‌ಲೈನ್ ಅಭಿಪ್ರಾಯದಲ್ಲಿ ಈ ಅಂಶ ಹೊರಬಿದ್ದಿದೆ. ಇದು ಕರುನಾಡಿಗೆ ಗರಿಮೆ ಹಾಗೂ ಹೆಮ್ಮೆ ಮೂಡಿಸಿದೆ. 4.4 ರೇಟಿಂಗ್‌ನೊಂದಿಗೆ ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರ್ ಪಾಕ್‌ಗೆ 14ನೇ ಸ್ಥಾನ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್‌ನೊಂದಿಗೆ 18ನೇ ಸ್ಥಾನ ಹಾಗೂ ಕುಲ್ಫಿ ಲೂದಾಗೆ 4.1 ರೇಟಿಂಗ್‌ನೊಂದಿಗೆ 32ನೇ ಸ್ಥಾನ ದೊರೆತಿದೆ.

Mysore Pak Is 14th Best Street Food Sweet In The World

ಮೈಸೂರು ಪಾಕ್‌ಗೆ ಜಾಗತಿಕ ಮನ್ನಣೆ ಸಿಕ್ಕಿರುವುದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ತಂದೆಯವರು ಹಾಗೂ ಮನೆಗೆ ಬರುತ್ತಿದ್ದ ಸಂಬಂಧಿಕರು ಆಗಾಗ್ಗೆ ಮೈಸೂರು ಪಾಕ್ ತಂದಾಗ ಹಂಚಿ ತಿನ್ನುತ್ತಿದ್ದ ಬಾಲ್ಯದ ನೆನಪುಗಳು ಇನ್ನೂ ಇವೆ. ಮೈಸೂರು ಅರಮನೆಯಲ್ಲಿ ಜನ್ಮತಾಳಿದ ಮೈಸೂರ್ ಪಾಕ್ ಇಂದು ಮನೆಮನೆಗಳಿಗೂ ತಲುಪುವುದರ ಹಿಂದೆ ಲಕ್ಷಾಂತರ ಬಾಣಸಿಗರ ಶ್ರಮ, ಕೌಶಲ್ಯ ಅಡಗಿದೆ. ಅವೆಲ್ಲರಿಗೂ ಇದರ ಶ್ರೇಯಸ್ಸು ಸಲ್ಲಬೇಕು,’ ಎಂದು ಖುಷಿ ಹಂಚಿಕೊಂಡಿದ್ದಾರೆ.

90 ವರ್ಷಗಳ ಹಿಂದೆ ಮೈಸೂರು ಅರಸರ ಕಾಲದಲ್ಲಿ ಕಾಕಾಸುರ ಮಾದಪ್ಪ ಎಂಬುವವರು ಅರಮನೆಯ ಮುಖ್ಯ ಬಾಣಸಿಗರಾಗಿದ್ದರು. ಆಗ ಅಂದಿನ ರಾಜ ಕೃಷ್ಣರಾಜ ಒಡೆಯರ್ ಅತಿಥಿಗಳು ಬರುತ್ತಿದ್ದಾರೆ ಏನಾದರೂ ಸಿಹಿ ಖಾದ್ಯ ಮಾಡುವಂತೆ ತಿಳಿಸಿದ್ದಾರೆ. ನಂತರ ಮಾದಪ್ಪ ಅವರು ಅವಸರಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟಿನ ಮಿಶ್ರಣ ತಯಾರಿಸಿ ಹೊಸ ರೀತಿಯ ಸಿಹಿಯನ್ನು ಬಡಿಸಿದ್ದಾರೆ. ಇದು ಅರಸರಿಗೆ ಬಹಳ ಇಷ್ಟವಾಗಿ ಪ್ರಶಂಸೆ ವ್ಯಕ್ತಪಡಿದ್ದಾರೆ. ಜೊತೆಗೆ ಆ ತಿಂಡಿಗೆ ‘ಮೈಸೂರ್ ಪಾಕ್’ ಎಂಬ ಹೆಸರೂ ಇಟ್ಟರು.

‘ಜಾಗತಿಕ ಮಟ್ಟದಲ್ಲಿ 50 ಸಿಹಿ ತಿನಿಸಿನಲ್ಲಿ ಮೈಸೂರ್ ಪಾಕ್‌ಗೆ 14ನೇ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರ. ಕಾಕಾಸುರ ಮಾದಪ್ಪ ಅವರು ಮೈಸೂರು ಅರಸರ ಬಾಣಸಿಗರಾಗಿದ್ದಾಗ ಮೈಸೂರು ಪಾಕ್ ಸೃಷ್ಟಿ ಮಾಡಿದರು. ಜಗತ್ತಿನ ಎಲ್ಲೆಡೆ ಕರುನಾಡ ಈ ಸಿಹಿ ತಿಂಡಿ ಹೆಸರುವಾಸಿಯಾಗಿದೆ. ಈ ತಿಂಡಿ ನಮ್ಮ ವಂಶಸ್ಥರಿಂದ ಬಂದಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ,’ ಎಂದು ಗುರು ಸ್ವೀಟ್ಸ್ ಮಾಲೀಕ ಶಿವಾನಂದ ಖುಷಿ ಹಂಚಿಕೊಂಡಿದ್ದಾರೆ.

English summary

Taste Atlas declared it one of the Best Street Food Sweets in the World, by giving it the 14th rank to Mysore pak. Know more.

Source link