2 ಸ್ಟಾರ್ಸ್ ಸಿನಿಮಾ ಅವಕಾಶ ಮಿಸ್ ಮಾಡಿಕೊಂಡಿದ್ದ ರಶ್ಮಿಕಾ: ಒಂದರಲ್ಲಿ ನಟಿಸ್ದೇ ಇದ್ದಿದ್ದೇ ಒಳ್ಳೆದಾಯ್ತು! | Rashmika Mandanna reveals she misses Master and Acharya movie chance

bredcrumb

Telugu

oi-Narayana M

|

ಕೊಡಗಿನ
ಕುವರಿ
ರಶ್ಮಿಕಾ
ಮಂದಣ್ಣ
ಸದ್ಯ
ಬಾಲಿವುಡ್‌ನಲ್ಲೂ
ಮಿಂಚು
ಹರಿಸ್ತಿದ್ದಾರೆ.
ದೊಡ್ಡ
ದೊಡ್ಡ
ಸಿನಿಮಾಗಳಲ್ಲಿ
ನಟಿಸುತ್ತಿದ್ದಾರೆ.
ದಿನದಿಂದ
ದಿನಕ್ಕೆ
ಗ್ಲಾಮರ್
ಡೋಸ್
ಹೆಚ್ಚಿಸುತ್ತಾ
ಬಿಟೌನ್
ಬೆಡಗಿಯರಿಗೆ
ಪೈಪೋಟಿ
ಕೊಡುತ್ತಿದ್ದಾರೆ.
ಸದ್ಯ
ಸೌತ್‌ನಲ್ಲಿ
ಮಾತ್ರವಲ್ಲ
ಬಾಲಿವುಡ್‌ನಲ್ಲೂ
ರಶ್ಮಿಕಾ,
ಪೂಜಾ
ಹೆಗ್ಡೆ
ಹೆಸರು
ಹೆಚ್ಚು
ಚಾಲ್ತಿಯಲ್ಲಿದೆ.
ಆದರೆ
ನಿಧಾನವಾಗಿ
ಇವರಿಬ್ಬರಿಗೂ
ಶ್ರೀಲೀಲಾ
ಟಕ್ಕರ್
ಕೊಡುತ್ತಿದ್ದಾರೆ.

ಸದ್ಯ
ರಶ್ಮಿಕಾ
ಮಂದಣ್ಣ
ತೆಲುಗಿನ
‘ಪುಷ್ಪ-2’
ಹಾಗೂ
ಬಾಲಿವುಡ್‌ನ
‘ಅನಿಮಲ್’
ಸಿನಿಮಾಗಳಲ್ಲಿ
ನಟಿಸ್ತಿದ್ದಾರೆ.
‘ರೈನ್‌ಬೋ’
ಎನ್ನುವ
ಮಹಿಳಾ
ಪ್ರಧಾನ
ಚಿತ್ರದಲ್ಲೂ
ರೋಶ್
ಬಣ್ಣ
ಹಚ್ಚಿದ್ದಾರೆ.

ಸಿನಿಮಾ
ತೆಲುಗು
ಹಾಗೂ
ತಮಿಳಿನಲ್ಲಿ
ಏಕಕಾಲಕ್ಕೆ
ತೆರೆಗೆ
ಬರ್ತಿದೆ.
ಇನ್ನು
ಇತ್ತೀಚೆಗೆ
ನಿತಿನ್
ಸಿನಿಮಾದಿಂದ
ರಶ್ಮಿಕಾ
ಹೊರ
ಬಂದಿದ್ದಾರೆ
ಎನ್ನಲಾಗ್ತಿದೆ.
ಇವರಿಬ್ಬರು
‘ಭೀಷ್ಮ’
ಚಿತ್ರದಲ್ಲಿ
ಒಟ್ಟಿಗೆ
ನಟಿಸಿದ್ದರು.
ಅದೇ
ಕಾಂಬಿನೇಷನ್‌ನಲ್ಲಿ
ಹೊಸ
ಸಿನಿಮಾ
ಘೋಷಣೆಯಾಗಿತ್ತು.
ಚಿತ್ರದ
ಮುಹೂರ್ತ
ಸಮಾರಂಭದಲ್ಲಿ
ರಶ್ಮಿಕಾ
ಹಾಜರ್
ಆಗಿದ್ದರು.

Rashmika Mandanna reveals she misses Master and Acharya movie chance

ಇತ್ತೀಚೆಗೆ
ತಮ್ಮ
ಮ್ಯಾನೇಜರ್‌ನಲ್ಲಿ
ರಶ್ಮಿಕಾ
ಕೆಲಸದಿಂದ
ತೆಗೆದು
ಹಾಕಿದ್ದರು.
ಅದರ
ಬೆನ್ನಲ್ಲೇ
ನಿತಿನ್
ಸಿನಿಮಾದಿಂದ
ಆಕೆ
ಹೊರ
ಬಂದಿರುವುದಾಗಿ
ಗುಸುಗುಸು
ಕೇಳಿಬಂದಿತ್ತು.
ಅದಕ್ಕೆ
ಆಕೆಯ
ಮ್ಯಾನೇಜರ್
ಕಾರಣ
ಎನ್ನುವ
ಚರ್ಚೆ
ಕೂಡ
ನಡೆದಿತ್ತು.
ಇನ್ನು
ರಶ್ಮಿಕಾ
ಬದಲಿಗೆ

ಚಿತ್ರದಲ್ಲಿ
ಶ್ರೀಲೀಲಾ
ನಟಿಸ್ತಾರೆ
ಎನ್ನಲಾಗ್ತಿದೆ.
ಇನ್ನು
ಇತ್ತೀಚೆಗೆ
ಕಾರ್ಯಕ್ರಮದಲ್ಲಿ
ಮಾತನಾಡಿರುವ
ಕಿರಿಕ್
ಬೆಡಗಿ
ತಮ್ಮ
ಕರಿಯರ್
ಬಗ್ಗೆ
ಮಾತನಾಡಿದ್ದಾರೆ.

“ಕಠಿಣ
ಪರಿಶ್ರಮ
ಇದ್ದರೆ
ಚಿತ್ರರಂಗದಲ್ಲಿ
ಏನಾದರೂ
ಸಾಧಿಸಬಹುದು.
ನಾನು
ಪ್ರಾರಂಭದಲ್ಲಿ
ಮಾಡೆಲಿಂಗ್
ಆರಂಭಿಸಿದೆ.
ನಂತರ
ಚಿತ್ರರಂಗಕ್ಕೆ
ಬಂದೆ.
ಬಣ್ಣದಲೋಕದಲ್ಲಿ
ಅದೃಷ್ಟ
ಬಹಳ
ಮುಖ್ಯ.
ನಾನು
ತೆಲುಗಿನಲ್ಲಿ
ಚಿರಂಜೀವಿ,
ರಾಮ್‌ಚರಣ್
ನಟನೆಯ
‘ಆಚಾರ್ಯ’
ಹಾಗೂ
ತಮಿಳಿನ
ದಳಪತಿ
ವಿಜಯ್
ಅಭಿನಯದ
‘ಮಾಸ್ಟರ್’
ಸಿನಿಮಾಗಳಲ್ಲಿ
ನಟಿಸಬೇಕಾಗಿತ್ತು.
ಆದರೆ
ಕಾರಣಾಂತರಗಳಿಂದ

ಅವಕಾಶಗಳು
ಕೈ
ಜಾರಿತು”
ಎಂದಿದ್ದಾರೆ.

“ಅಂತಹ
ಸ್ಟಾರ್
ನಟರ
ಜೊತೆ
ನಟಿಸೋ
ಅವಕಾಶ
ನಿಜಕ್ಕೂ
ಅದೃಷ್ಟವೇ
ಸರಿ.
ಅಂತಹ
ಅವಕಾಶ
ಕಳೆದುಕೊಂಡಿದ್ದು
ಬೇಸರ
ತಂದಿದೆ.
ಚಿತ್ರರಂಗದಲ್ಲಿ
ಯಾವಾಗ
ಏನಾಗುತ್ತದೆ?
ಹೇಳುವುದಕ್ಕೆ
ಕಷ್ಟ.
ಪ್ರೀತಿ,
ಮದುವೆ
ಕೆಲವೊಮ್ಮೆ
ಬಿಡಿಸಲಾಗದ
ಬಂಧವಾಗುತ್ತದೆ.
ಮತ್ತೆ
ಕೆಲವೊಮ್ಮೆ
ಅದೇ
ನಮ್ಮ
ಬಲಹೀನತೆ
ಆಗಿಬಿಡುತ್ತದೆ”
ಎಂದು
ರಶ್ಮಿಕಾ
ಮಂದಣ್ಣ
ಹೇಳಿರುವುದಾಗಿ
ವರದಿಯಾಗಿದೆ.

ರಶ್ಮಿಕಾ
‘ಆಚಾರ್ಯ’
ಚಿತ್ರದಲ್ಲಿ
ತಾನು
ನಟಿಸಬೇಕಾಗಿತ್ತು
ಎಂದಿದ್ದು
ಕೇಳಿ
ಅಭಿಮಾನಿಗಳು
ಒಳ್ಳೆ
ಕೆಲಸವೇ
ಆಯಿತು
ಎನ್ನುತ್ತಿದ್ದಾರೆ.
ಕೊರಟಾಲ
ಶಿವ
ನಿರ್ದೇಶನದ
‘ಆಚಾರ್ಯ’
ಸಿನಿಮಾ
ಕಳೆದ
ವರ್ಷ
ರಿಲೀಸ್
ಆಗಿತ್ತು.
ಆದರೆ
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
ಮುಗ್ಗರಿಸಿತ್ತು.
ಭಾರೀ
ನಿರೀಕ್ಷೆ
ಹುಟ್ಟಾಕ್ಕಿದ್ದ
ಸಿನಿಮಾ
ಭಾರೀ
ನಷ್ಟ
ತಂದೊಡ್ಡಿತ್ತು.
ಚಿತ್ರದಲ್ಲಿ
ಚಿರು
ಜೊತೆ
ರಾಮ್‌ಚರಣ್
ನಟಿಸಿದ್ದಾರೆ.
ಚರಣ್
ಜೋಡಿಯಾಗಿ
ಪೂಜಾ
ಹೆಗ್ಡೆ
ಮಿಂಚಿದ್ದರು.
ಇದೇ
ಪಾತ್ರದಲ್ಲಿ
ರಶ್ಮಿಕಾ
ನಟಿಸಬೇಕಿತ್ತು
ಎನಿಸುತ್ತದೆ.

Rashmika Mandanna reveals she misses Master and Acharya movie chance

ಇನ್ನು
ದಳಪತಿ
ವಿಜಯ್
ಜೊತೆ
‘ಮಾಸ್ಟರ್’
ಚಿತ್ರದಲ್ಲಿ
ನಟಿಸದೇ
ಇದ್ದರೂ
‘ವಾರಿಸು’
ಚಿತ್ರದಲ್ಲಿ

ಅವಕಾಶ
ಅರಸಿ
ಬಂದಿತ್ತು.
ಲೋಕೇಶ್
ಕನಕರಾಜ್
ನಿರ್ದೇಶನದ
‘ಮಾಸ್ಟರ್’
ಸಿನಿಮಾ
ಬಾಕ್ಸಾಫೀಸ್
ಶೇಕ್
ಮಾಡಿತ್ತು.
ಕೊರೊನಾ
ಹಾವಳಿ
ನಡುವೆಯೂ
ಥಿಯೇಟರ್‌ಗಳಲ್ಲಿ
50:50
ನಿಮಯ
ಜಾರಿ
ಇದ್ದಾಗ
ಸಿನಿಮಾ
ರಿಲೀಸ್
ಆಗಿತ್ತು.
ಚಿತ್ರದಲ್ಲಿ
ವಿಜಯ್
ಸೇತುಪತಿ
ಕೂಡ
ನಟಿಸಿದ್ದರು.

ಸಿನಿಮಾ
ಸೂಪರ್
ಹಿಟ್
ಆಗಿತ್ತು.

English summary

Rashmika Mandanna reveals she misses working chance with chiranjeevi, Vijay.

Saturday, July 22, 2023, 6:30

Story first published: Saturday, July 22, 2023, 6:30 [IST]

Source link