ಜೆಪಿ ನಡ್ಡಾ ಮತ್ತು ಅಮಿತ್ ಶಾ ಭೇಟಿ; ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ?: ವಿಜಯೇಂದ್ರ ಹೇಳಿದ್ದೇನು? | MLA BY Vijayendra Fierce Attack Against Congress Government

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 21: ರಾಜ್ಯ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅವರು ರಾಷ್ಟ್ರೀಯ ನಾಯಕ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯಡಿಯೂರಪ್ಪ ಅವರ ಮೂಲಕ ಮತಬ್ಯಾಂಕ್ ಮರಳಿ ಪಡೆಯಲು ಕರ್ನಾಟಕದಲ್ಲಿ ವಿಜಯೇಂದ್ರ ನಾಯಕತ್ವದಲ್ಲಿ ಎದುರಿಸಲು ಬಿಜೆಪಿ ರಣತಂತ್ರ ಹಣೆಯುತ್ತಿದೆ ಎಂಬ ಚರ್ಚೆಗೆ ಇದೀಗ ಬಿ ವೈ ವಿಜಯೇಂದ್ರ ಸ್ಪಷ್ಟನೇ ನೀಡಿದ್ದಾರೆ.

MLA BY Vijayendra

ಹೌದು, ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನ ವಿಚಾರವಾಗಿ ಮತ್ತು ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ರಾಷ್ಟ್ರೀಯ ನಾಯಕರು ಕೂಡ ಈ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.

ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ಮೇಲೆ ರಾಷ್ಟ್ರೀಯ ಅಧ್ಯಕ್ಷ ಗೃಹಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಮುಂದಿನ ದಿಗಳಲ್ಲಿ ಪಕ್ಷದ ಉಪಾಧ್ಯಕ್ಷನಾಗಿ,ಶಾಸಕನಾಗಿ ಮುಂದಿನ ದಿನಗಳಲ್ಲಿ ನಮ್ಮನ್ನು ನಾವು ಯಾವ ರೀತಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಯಾವ ರೀತಿ ಚುನಾವಣೆ ಎದುರಿಸಬೇಕು ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ರಾಜ್ಯದ ರಾಜಕಾರಣ ಯಾವುದು ಇಲ್ಲಿ ಚರ್ಚೆಯಾಗಿಲ್ಲ, ಲೋಕಸಭೆ ಚುನಾವಣೆಯಲ್ಲಿ ಹೊಸಬರು ಹೇಗೆ ಕೆಲಸ ನಿರ್ವಹಿಸಬೇಕು ಅಂತ ಚರ್ಚಿಸಲಾಗಿದೆ ಎಂದು ಹೇಳಿದರು.

 ಅಮಿತ್ ಶಾ, ಜೆಪಿ ನಡ್ಡಾರನ್ನು ಭೇಟಿ ಮಾಡಿದ ಬಿವೈ ವಿಜಯೇಂದ್ರ: ರಾಜ್ಯಾಧ್ಯಕ್ಷ? ವಿಪಕ್ಷ ನಾಯಕ? ದಟ್ಟಗೊಂಡ ಕುತೂಹಲ ಅಮಿತ್ ಶಾ, ಜೆಪಿ ನಡ್ಡಾರನ್ನು ಭೇಟಿ ಮಾಡಿದ ಬಿವೈ ವಿಜಯೇಂದ್ರ: ರಾಜ್ಯಾಧ್ಯಕ್ಷ? ವಿಪಕ್ಷ ನಾಯಕ? ದಟ್ಟಗೊಂಡ ಕುತೂಹಲ

ಸ್ವತಂತ್ರವಾಗಿಯೇ ಚುನಾವಣೆ ಎದುರಿಸುತ್ತೇವೆ ಎಂಬ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಹೇಳಿಕ ವಿಚಾರವಾಗಿ ಮಾತನಾಡಿ, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಅವರ ಮುಂದಿನ ರಾಜಕೀಯ ಹೆಜ್ಜೆ ಹೇಗಿರಬೇಕು..? ಯಾವ ದಿಕ್ಕಿನಲ್ಲಿ ಸಾಗಬೇಕು ಅದು ಅವರ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ಹೆಚ್ಚು ಹೇಳಲ್ಲ ಎಂದರು.

ಅಧಿವೇಶನದಲ್ಲಿ 10 ಜನ ಬಿಜೆಪಿ ಶಾಸಕರ ಅಮಾನತು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಇವತ್ತು ಅಧಿವೇಶನಕ್ಕೆ ಹೋಗದೇ ಧರಣಿ ಮುಂದುವರೆಸುತ್ತೇವೆ. ಗೌರವ ಸ್ಥಾನದಲ್ಲಿ ಕುಳಿತಿರುವ ಸಭಾಧ್ಯಕ್ಷರು ಸರ್ಕಾರದ ಕೈ ಜೋಡಿಸಿರೋದು ವಿಷಾದನಿಯ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ವಿಚಾರವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಬಹಳ ಗಂಭೀರವಾಗಿ ತೆಗೆದುಕೊಂಡು ರಾಜ್ಯಪಾಲರಿಗೆ ದೂರು ಸಹ ನೀಡಿದ್ದೇವೆ.

ವಿರೋಧ ಪಕ್ಷಗಳ ಧ್ವನಿಯನ್ನ ಅಡಗಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಇದೆ. ಅದನ್ನು ರಾಜ್ಯಪಾಲರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ, ಇವತ್ತು ಕೂಡ ನಮ್ಮ ಧರಣಿಯನ್ನ ಮುಂದುವರೆಸುತ್ತೇವೆ. ಇದು ಬಹಳ ದುರದೃಷ್ಟಕರ ಮಾನ್ಯ ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸದನದ ಒಳಗಡೆ ಆಗಿರುವ ಘಟನೆ ಪರಿಗಣಿಸಿ ಸಮಾಧಾನ ಪಡಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಆದರೆ, ದುರದೃಷ್ಟ ಸಿಎಂ ಜೊತೆ ಸಭಾಧ್ಯಕ್ಷರು ಕೂಡ ಈ ಒಂದು ಕೆಲಸಕ್ಕೆ ಕೈ ಹಾಕದ್ಧಾರೆ ಎಂದರು.

ಇನ್ನೂ ವಿರೋಧ ಪಕ್ಷಗಳು ಏನು ಬೇಕಿದ್ರು ಮಾಡಿಕೊಳ್ಳಲಿ. ಆನೆ ನಡೆದಿದ್ದೆ ದಾರಿ ಅನ್ನೋ ರೀತಿಯಲ್ಲಿ ಸರ್ಕಾರ ಹೊರಟಿರೋದು ಖಂಡನೀಯ. ಇವತ್ತು ಸಹಜವಾಗಿ ವಿರೋಧ ಪಕ್ಷಕ್ಕೆ ಶಾಸಕರು ಸದನದಲ್ಲಿ ಭಾಗಿಯಾಗಲ್ಲ. ನಮ್ಮ ಧರಣಿಯನ್ನ ಮುಂದುವರೆಸುತ್ತೇವೆ ಎಂದು ಹೇಳಿದರು.

English summary

MLA B Y Vijayendra Said That There is no discussion about the change of state president

Story first published: Friday, July 21, 2023, 15:44 [IST]

Source link