Dhoomam Review: ‘ಧೂಮಂ’ ಎಂಬ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಕಿಡಿ ಕಡಿಮೆ, ಹೊಗೆಯೇ ಜಾಸ್ತಿ! | Dhoomam Review In Kannada: Fahadh Fassil, Achyuth Kumar, Aparna Balamurali Starrer Dhoomam Review And Rating

bredcrumb

News

oi-Srinivasa A

|

ಚಿತ್ರ:
ಧೂಮಂ
(
ಮಲಯಾಳಂ
ಹಾಗೂ
ಕನ್ನಡ
)

ನಿರ್ದೇಶನ:
ಪವನ್
ಕುಮಾರ್,
ಅಪರ್ಣ
ಬಾಲಮುರಳಿ,
ರೋಷನ್
ಮ್ಯಾಥ್ಯೂ
ಹಾಗೂ
ಅಚ್ಯುತ್
ಕುಮಾರ್

ನಿರ್ಮಾಣ:
ಹೊಂಬಾಳೆ
ಫಿಲ್ಮ್ಸ್

ರನ್‌ಟೈಮ್:
2
ಗಂಟೆ
24
ನಿಮಿಷ

ಧೂಮಂ..
ಹೊಂಬಾಳೆ
ಫಿಲ್ಮ್ಸ್
ಬ್ಯಾನರ್
ಅಡಿಯಲ್ಲಿ
ನಿರ್ಮಾಣವಾದ
ಮೊದಲ
ಮಲಯಾಳಂ
ಚಿತ್ರ.

ಚಿತ್ರ
ಇಂದು
(
ಜೂನ್
23
)
ಮಲಯಾಳಂ
ಹಾಗೂ
ಕನ್ನಡ
ಭಾಷೆಗಳಲ್ಲಿ
ಬಿಡುಗಡೆಯಾಗಿದೆ.
ಚಿತ್ರಕ್ಕೆ
ಕನ್ನಡದ
ನಿರ್ದೇಶಕ
ಪವನ್
ಕುಮಾರ್
ಆಕ್ಷನ್
ಕಟ್
ಹೇಳಿದ್ದು,
ನಾಯಕನಾಗಿ
ಮಲಯಾಳಂನ
ಫಹಾದ್
ಫಾಸಿಲ್
ಹಾಗೂ
ನಾಯಕಿಯಾಗಿ
ಮಲಯಾಳಂನ
ಅಪರ್ಣ
ಬಾಲಮುರಳಿ
ನಟಿಸಿದ್ದಾರೆ.

Dhoomam Review In Kannada:


ಚಿತ್ರದ
ಮೂಲಕ
ಪವನ್
ಕುಮಾರ್
ಯೂ
ಟರ್ನ್
ಬಳಿಕ
ನಿರ್ದೇಶಕನ
ಕ್ಯಾಪ್
ತೊಟ್ಟಿದ್ದು
ತಾವು
ನಿರ್ದೇಶಕನಾಗುವ
ಮುನ್ನ
ಹೆಣೆದಿದ್ದ
ಕಥೆಯನ್ನು
ಈಗ
ತೆರೆ
ಮೇಲೆ
ತಂದಿದ್ದಾರೆ.
ಹೀಗೆ
ವರ್ಷಗಳ
ಹಿಂದೆ
ತಯಾರಿಸಿದ್ದ

ಕಥೆಗೆ
ಯಾರೂ
ಹಣ
ಹೂಡಲು
ಮುಂದಾಗದೇ
ಇದ್ದದ್ದರಿಂದ
ಹಾಗೂ
ಯಾವ
ನಟ
ಸಹ

ಕಥೆಯನ್ನು
ಒಪ್ಪದೇ
ಇದ್ದದ್ದರಿಂದ
ಚಿತ್ರ
ಇಷ್ಟು
ವರ್ಷಗಳ
ಬಳಿಕ
ತೆರೆ
ಮೇಲೆ
ಸಿನಿಮಾ
ರೂಪ
ಪಡೆದುಕೊಂಡಿದೆ.

ಇನ್ನು
ಚಿತ್ರದಲ್ಲಿ
ನಾಯಕ
ಅವಿನಾಶ್
(
ಫಹಾದ್
ಫಾಸಿಲ್
)
ಮಂಗಳೂರಿನಿಂದ
ಬೆಂಗಳೂರಿಗೆ
ಕೆಲಸ
ಹರಸಿ
ಬಂದು
ಬಳಿಕ
ಇಲ್ಲಿ
ತನ್ನ
ಜಾಣ್ಮೆಯಿಂದ
ಪುಟ್ಟ
ಚಾಟ್
ಸೆಂಟರ್‌ವೊಂದನ್ನು
ಫೇಮಸ್
ಮಾಡ್ತಾನೆ.

ಫುಡ್
ಸ್ಟಾಲ್‌ನಿಂದ
ನಾಯಕನಿಗೆ
ನಾಯಕಿ
ದಿಯಾಳ
(
ಅಪರ್ಣ
ಬಾಲಮುರಳಿ
)
ಹಾಗೂ
ಸಿದ್
(
ರೋಷನ್
ಮ್ಯಾಥ್ಯೂ
)
ಎಂಬ
ಪ್ರಮುಖ
ಪಾತ್ರದ
ಪರಿಚಯವಾಗುತ್ತೆ.


ಪರಿಚಯ
ಒಂದೆಡೆ
ಪ್ರೇಮವನ್ನು
ಬೆಳೆಸಿದ್ರೆ,
ಮತ್ತೊಂದು
ಕೆಲಸ
ಕೊಡಿಸುತ್ತೆ.
ಸಿದ್
ಒಡೆತನದ
ಸಿಗರೇಟ್
ಕಂಪನಿಯಲ್ಲಿ
ನಾಯಕ
ಮುಖ್ಯ
ನೌಕರಿಯನ್ನು
ಪಡೆದುಕೊಂಡ
ಬಳಿಕ
ಸಿಗರೇಟ್
ಮಾರಾಟವನ್ನು
ಹೆಚ್ಚಳ
ಮಾಡಿ
ಕಂಪನಿಗೆ
ಲಾಭ
ತಂದುಕೊಡ್ತಾನೆ.
ಇದರಿಂದ
ತನ್ನ
ತಂದೆಯ
ಬಳಿಕ
ಎಂಡಿ
ಆಗಿದ್ದ
ಸಿದ್
ಯಶಸ್ಸು
ಸಾಧಿಸಿದರೆ,
ತನಗೆ
ಬರಬೇಕಿದ್ದ
ಎಂಡಿ
ಸ್ಥಾನ
ತನ್ನ
ಅಣ್ಣನ
ಮಗ
ಸಿದ್
ಪಾಲಾಯಿತಲ್ಲ
ಎಂದು
ಸಿದ್
ಚಿಕ್ಕಪ್ಪ
ಸಂಚು
ರೂಪಿಸಲಾರಂಭಿಸುತ್ತಾನೆ.

ಹೀಗೆ
ಪುಟ್ಟದಾಗಿ
ತನಗೇ
ತಿಳಿಯದ
ಹಾಗೆ
ನಾಯಕ
ಅವಿನಾಶ್
ಸಿದ್
ಚಿಕ್ಕಪ್ಪನ
ಕಣ್ಣಿಗೆ
ವಿಲನ್
ಆಗಿರುತ್ತಾನೆ.

ವೈರತ್ವ
ಸಿದ್
ಚಿಕ್ಕಪ್ಪ
ಅವಿನಾಶ್
ವಿರುದ್ಧ
ಕೊಲೆ
ಮಾಡಿಸಲು
ಸುಪಾರಿ
ನೀಡುವ
ಹಂತಕ್ಕೂ
ಸಹ
ತಲುಪುತ್ತೆ.
ಬೆನ್ನಲ್ಲೇ
ಕೊಲೆ
ಯತ್ನವೂ
ನಡೆಯುತ್ತೆ.
ಆದರೆ

ಕೊಲೆಗೂ
ಸಿದ್‌ನ
ಚಿಕ್ಕಪ್ಪ
ನೀಡಿದ್ದ
ಸುಪಾರಿಗೂ
ಯಾವುದೇ
ಲಿಂಕ್
ಇರುವುದಿಲ್ಲ.
ಹಾಗಾದ್ರೆ
ನಾಯಕನನ್ನು
ಕೊಲ್ಲಲು
ಸಂಚು
ರೂಪಿಸಿದ್ದು
ಯಾರು,
ಕೋಟಿ
ರೂಪಾಯಿಗೆ
ಬೇಡಿಕೆ
ಇಟ್ಟದ್ದು
ಯಾರು
ಎಂಬ
ಪ್ರಶ್ನೆಗಳು
ಹುಟ್ಟಿಕೊಳ್ಳುತ್ತವೆ.

ಎಲ್ಲಾ
ಪ್ರಶ್ನೆಗಳಿಗೆ
ಉತ್ತರ
ನೀಡಬೇಕಂದ್ರೆ
ನೀವು
ಚಿತ್ರವನ್ನು
ನೋಡಲೇಬೇಕು.

ಧೂಮಂ
ಒಂದು
ಸಸ್ಪೆನ್ಸ್
ಥ್ರಿಲ್ಲರ್
ವಿಭಾಗದ
ಚಿತ್ರವಾಗಿದ್ದು,
ಚಿತ್ರ

ಕೌತುಕವನ್ನು
ಹುಟ್ಟುಹಾಕುವಲ್ಲಿ
ಯಶಸ್ವಿಯಾಗಿಲ್ಲ.
ಇಷ್ಟೆಲ್ಲದ್ದರ
ಹಿಂದೆ
ಯಾರ
ಕೈವಾಡವಿದೆ
ಎಂದು
ಕೊನೆ
ಹಂತದಲ್ಲಿ
ಸೀಟಿನ
ತುದಿಗೆ
ತಂದು
ಕೂರಿಸುವಂತಹ
ಕುತೂಹಲವನ್ನು
ಚಿತ್ರ
ನಿರ್ಮಿಸುವಲ್ಲಿ
ವಿಫಲವಾಗಿದೆ.
ಕಥೆ
ಚೆನ್ನಾಗಿದ್ದೂ,
ಒಳ್ಳೆಯ
ಸಂದೇಶವಿದ್ದರೂ
ಸಹ
ಸರಿಯಾದ
ಥ್ರಿಲ್ಲಿಂಗ್
ಚಿತ್ರಕಥೆ
ಇಲ್ಲದ
ಕಾರಣ
ಚಿತ್ರ
ತುಸು
ಬೋರಿಂಗ್
ಎಂದು
ಕೆಲವೆಡೆ
ಎನಿಸಬಹುದು.
ಒಟ್ಟಿನಲ್ಲಿ
ಧೂಮಮ್
ಎಂಬ
ಸಸ್ಪೆನ್ಸ್
ಥ್ರಿಲ್ಲರ್‌ನಲ್ಲಿ
ಥ್ರಿಲ್
ಎಂಬ
ಕಿಡಿಗಿಂತ
ಬೋರ್
ಎಂಬ
ಹೊಗೆಯೇ
ತುಸು
ಹೆಚ್ಚಿದೆ.

ಚಿತ್ರದ
ಪ್ಲಸ್
ಪಾಯಿಂಟ್:
ಚಿತ್ರದ
ದೊಡ್ಡ
ಪ್ಲಸ್
ಪಾಯಿಂಟ್
ಫಹಾದ್
ಫಾಸಿಲ್
ನಟನೆ.
ಇಂತಹ
ಕಥೆಗಳಿಗೆ
ಬೇಕಿರುವ
ಅತ್ಯುನ್ನತ
ನಟನೆಯನ್ನು
ಸಂಪೂರ್ಣವಾಗಿ
ಒದಗಿಸಿದ್ದಾರೆ
ಫಹಾದ್.
ಉಳಿದಂತೆ
ರೋಷನ್
ಮ್ಯಾಥ್ಯೂ
ನಟನೆ
ಸಹ
ತುಂಬಾ
ಚೆನ್ನಾಗಿದ್ದು,
ಅಚ್ಯುತ್
ಕುಮಾರ್
ಸೇರಿದಂತೆ
ಉಳಿದವರೂ
ಸಹ
ತಮ್ಮ
ಪಾತ್ರಗಳಿಗೆ
ಜೀವ
ತುಂಬಿದ್ದಾರೆ.
ಇನ್ನು
ಮಲಯಾಳಂ
ಭಾಷೆಯಲ್ಲಿ
ತಯಾರಾಗಿರುವ

ಚಿತ್ರದ
ಕನ್ನಡ
ಡಬಿಂಗ್
ವರ್ಷನ್
ಅಚ್ಚುಕಟ್ಟಾಗಿ
ಇದ್ದು,
ಮೂಲ
ಕನ್ನಡ
ಚಿತ್ರ
ನೋಡಿದ
ಅನುಭವವಾಗಲಿದೆ.
ಹೊಂಬಾಳೆ
ಫಿಲ್ಮ್ಸ್
ನಿರ್ಮಾಣದ
ಚಿತ್ರವಾದ್ದರಿಂದ
ಚಿತ್ರದ
ಛಾಯಾಗ್ರಹಣ
ಹಾಗೂ
ಎಡಿಟಿಂಗ್
ನಿರೀಕ್ಷಿಸಿದಂತೆ
ಚೆನ್ನಾಗಿದೆ.

ಮೈನಸ್
ಪಾಯಿಂಟ್:
ಚಿತ್ರದ
ಮೈನಸ್
ಪಾಯಿಂಟ್
ಎಂದರೆ
ನಟಿ
ಅಪರ್ಣ
ಬಾಲಮುರಳಿ.
ತನ್ನ
ಇತರೆ
ಚಿತ್ರಗಳಲ್ಲಿ
ಅತ್ಯದ್ಭುತವಾಗಿ
ನಟಿಸಿರುವ
ಇವರು

ಚಿತ್ರದಲ್ಲಿ
ತಮಗೆ
ಸಿಕ್ಕಿರುವ
ಬಹುಮುಖ್ಯವಾದ
ಪಾತ್ರವನ್ನು
ಸರಿಯಾಗಿ
ನಿಭಾಯಿಸುವಲ್ಲಿ
ವಿಫಲರಾಗಿದ್ದಾರೆ.
ಚಿತ್ರಕ್ಕೆ
ಸರಿಯಾದ
ಕ್ಲೈಮ್ಯಾಕ್ಸ್
ನೀಡದೇ
ಇರುವುದು
ಹಾಗೂ
ಚಿತ್ರಕಥೆ
ಹೆಚ್ಚೇನೂ
ಕುತೂಹಲಕಾರಿಯಾಗಿ
ಇಲ್ಲದೇ
ಇರುವುದೂ
ಸಹ
ಚಿತ್ರಕ್ಕೆ
ಒಂದು
ರೀತಿಯ
ಮೈನಸ್
ಎನ್ನಬಹುದು.
ಒಟ್ಟಿನಲ್ಲಿ
ಸಸ್ಪೆನ್ಸ್
ಥ್ರಿಲ್ಲರ್
ಸಿನಿಮಾವನ್ನು
ನೋಡಲು
ಸಿದ್ಧರಿರುವವರು

ಚಿತ್ರವನ್ನು
ನೋಡಬಹುದಾಗಿದ್ದು,
ಫ್ಯಾಮಿಲಿ
ಆಡಿಯನ್ಸ್
ಸಹ
ಚಿತ್ರವನ್ನು
ಹೆಚ್ಚೇನೂ
ನಿರೀಕ್ಷೆ
ಇಲ್ಲದೇ
ಒಮ್ಮೆ
ನೋಡಬಹುದಾಗಿದೆ.

English summary

Dhoomam Review in Kannada: Check Out the Fahadh Fassil, Achyuth Kumar, Aparna Balamurali Starrer Dhoomam Movie Review and Rating. Movie directed by Lucia, U-Turn Fame Pawan Kumar.

Friday, June 23, 2023, 14:46

Source link