ಶಂಕಿತರ ಬಂಧನ; ರಾಜ್ಯದ ಗೃಹ ಸಚಿವರ ಹೇಳಿಕೆ ಆತಂಕಕಾರಿ : ಕೋಟ ಶ್ರೀನಿವಾಸ ಪೂಜಾರಿ | State Home Ministers G Parameshwar Statement Is Alarming Says Kota Srinivas Poojary

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 20: ಬೆಂಗಳೂರನಲ್ಲಿ ಶಂಕಿತ ಉಗ್ರರ ಬಂಧಿಸಲಾಗಿದ್ದು, ಬಂಧಿತರು ಭಯೋತ್ಪಾದಕರು ಎಂದು ಈಗಲೇ ಹೇಳಲಾಗದು ಎಂದು ಗೃಹ ಸಚಿವ ಪರಮೇಶ್ವರ್‌ ಅವರ ಹೇಳಿಕೆ ಅತ್ಯಂತ ಆಶ್ಚರ್ಯಕರ ಮತ್ತು ಆತಂಕಕಾರಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಂಧಿತರು ಭಯೋತ್ಪಾದಕರು ಎಂದು ಈಗಲೇ ಹೇಳಲಾಗದು ಎಂದಿದ್ದಾರೆ. ವಿದೇಶಗಳಲ್ಲಿ ಭಯೋತ್ಪಾದಕರ ನಂಟು ಇರುವ ಮಾಹಿತಿ ಪೆÇಲೀಸರಿಗೆ ಇದ್ದರೂ ಈ ಹೇಳಿಕೆ ನೀಡಿದ್ದಾಗಿ ತಿಳಿಸಿದರು.

Kota Srinivas Poojary

ರಾಜ್ಯ ಸರಕಾರವು ದಾಕ್ಷಿಣ್ಯ ಬಿಟ್ಟು ತಕ್ಷಣ ಉಗ್ರಗಾಮಿಗಳ ಬೇಟೆಯನ್ನು ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು. ಈ ಪ್ರಕರಣದ ಸ್ವತಂತ್ರ ತನಿಖೆಗೆ ಅವಕಾಶ ಕೊಡಿ. ಉಗ್ರರನ್ನು ಮಟ್ಟ ಹಾಕಬೇಕಿದೆ ಎಂದು ಒತ್ತಾಯಿಸಿದರು.

ಶಂಕಿತ ಉಗ್ರರ ಕುರಿತು ಪರಮೇಶ್ವರ್‌ ಹೇಳಿದ್ದೇನು?

ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರೆನ್ನಲಾದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿದ್ದು, ಅವರನ್ನು ಟೆರರಿಸ್ಟ್ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

 ತನಿಖೆ ನನ್ನಿಂದಲೇ ಶುರುವಾಗಲಿ; ಕಾಂಗ್ರೆಸ್ ಸರ್ಕಾರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದ್ದೇಕೆ? ತನಿಖೆ ನನ್ನಿಂದಲೇ ಶುರುವಾಗಲಿ; ಕಾಂಗ್ರೆಸ್ ಸರ್ಕಾರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದ್ದೇಕೆ?

ಬೆಂಗಳೂರಿನಲ್ಲಿ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ 5 ಜನ ಅಪರಾಧಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಳು ಕಂಟ್ರಿಮೇಡ್​ ಪಿಸ್ತೂಲ್, ವಾಕಿ-ಟಾಕಿ, ಆಯುಧಗಳು ಸಿಕ್ಕಿವೆ. ವಿಚಾರಣೆ ಮಾಡಿದಾಗ ಕೇಂದ್ರ ಕಾರಾಗೃಹದ ಜೊತೆ ಸಂಪರ್ಕ ಹೊಂದಿದ್ದೂ ಗೊತ್ತಾಗಿದೆ. ಬಂಧಿತರು ಕೆಲವು ಕೃತ್ಯ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ಬೆಂಗಳೂರು ಹಾಗೂ ಇತರೆಡೆಗೆ ಅಪಾಯಕಾರಿ ವಿಚಾರ. ಅವರನ್ನು ವಿಚಾರಣೆ ಮಾಡಿ ಟೆರರಿಸ್ಟ್ ಕನೆಕ್ಷನ್ ಇದೆಯಾ ಅಂತ ನೋಡುತ್ತಿದ್ದಾರೆ. ಅದನ್ನು ನೋಡಿ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ.

English summary

Kota Srinivas Poojary Said That State Home Ministers G Parameshwar Statement Is Alarming

Story first published: Thursday, July 20, 2023, 20:53 [IST]

Source link