Jobs
oi-Gururaj S
ಕೊಪ್ಪಳ, ಜೂನ್ 23: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ತಳಕಲ್ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗಾಗಿ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನ.
ಕೊಪ್ಪಳ; ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಅತಿಥಿ ಶಿಕ್ಷಕರ ನೇಮಕ
ವಸತಿ ಶಾಲೆಯಲ್ಲಿ ಖಾಲಿ ಇರುವ ಸಮಾಜ ವಿಜ್ಞಾನ ವಿಷಯದ ಒಂದು ಹುದ್ದೆಗೆ ಎಂಎ ಬಿಎಡ್ ವಿದ್ಯಾರ್ಹತೆ ಹೊಂದಿರುವವರು. ಒಂದು ಗಣಕಯಂತ್ರ ವಿಜ್ಞಾನ ಶಿಕ್ಷರ ಹುದ್ದೆಗೆ ಬಿಎಸ್ಸಿ ಇನ್-ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರುವವರು ಹಾಗೂ ಒಂದು ಆರ್ಟ್ & ಕ್ರಾಫ್ಟ್ ಶಿಕ್ಷಕರ ಹುದ್ದೆಗೆ ಡಿಪ್ಲೋಮಾ ಇನ್-ಆರ್ಟ್ & ಕ್ರಾಫ್ಟ್ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕೊಪ್ಪಳ; ಅತಿಥಿ ಶಿಕ್ಷಕರ ನೇಮಕ, ಜೂ. 26ರೊಳಗೆ ಅರ್ಜಿ ಹಾಕಿ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ತಳಕಲ್ ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಪಿಡಿಒ ನೇಮಕಾತಿ; ಶೀಘ್ರವೇ ಅಧಿಸೂಚನೆ ಪ್ರಕಟ
ಅತಿಥಿ ಶಿಕ್ಷಕರ ಹುದ್ದೆಗಳು; ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿಯೂ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಜೂನ್ 26 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.
ಆಂಗ್ಲ ಮತ್ತು ಸಮಾಜ ವಿಜ್ಞಾನ ವಿಷಯಗಳ ತಲಾ 1 ಹುದ್ದೆಗೆ ಬಿಎ ಬಿಎಡ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ನೇಮಕ ಮಾಡಲಾಗುತ್ತಿದೆ. ಒಂದು ಗಣಕಯಂತ್ರ ಶಿಕ್ಷರ ಹುದ್ದೆಗೆ ಬಿಎಸ್ಸಿ ಇನ್-ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಂದು ಆರ್ಟ್ & ಕ್ರಾಫ್ಟ್ ಶಿಕ್ಷಕರ ಹುದ್ದೆಗೆ ಡಿಪ್ಲೋಮಾ ಇನ್-ಆರ್ಟ್ & ಕ್ರಾಫ್ಟ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಅರ್ಜಿಗಳನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕುದರಿಮೋತಿ ಶಾಲೆಯಲ್ಲಿ ಅಥವಾ ಹೊಸಪೇಟೆ ರಸ್ತೆ ಮೌಲಾನಾ ಆಜಾದ್ ಭವನದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದು.
ವಸತಿ ಶಾಲೆ ಅತಿಥಿ ಶಿಕ್ಷಕರು; ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿರುವ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿಯೂ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆಯಲಾಗಿದೆ. ಜೂನ್ 26 ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ.
ಜೀವಶಾಸ್ತ್ರ ವಿಷಯದ ಎರಡು ಹುದ್ದೆ, ರಸಾಯನಶಾಸ್ತ್ರ ಒಂದು, ಭೌತಶಾಸ್ತ್ರ ಎರಡು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಂ.ಎಸ್ಸಿ, ಬಿಎಡ್ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬೇಕು.
ಗಣಕ ಯಂತ್ರ ವಿಜ್ಞಾನ ವಿಷಯದ ಒಂದು ಹುದ್ದೆಗೆ ಎಂ-ಟೆಕ್ & ಎಂ.ಸಿ.ಎ ವಿದ್ಯಾರ್ಹತೆ ಹೊಂದಿರುವವರು, ಸಮಾಜ ವಿಜ್ಞಾನ ವಿಷಯದ ಎರಡು ಹುದ್ದೆಗಳಿಗೆ ಎಂಎ, ಬಿಎಡ್, ಒಂದು ಪ್ರಯೋಗಾಲಯ ಸಹಾಯ ಹುದ್ದೆಗೆ ಬಿಎಸ್ಸಿ (ಪಿಸಿಎಂಬಿ) ವಿದ್ಯಾರ್ಹತೆ, ಒಂದು ಆರ್ಟ್ & ಕ್ರಾಫ್ಟ್ ಹುದ್ದೆಗೆ ಡಿಪ್ಲೋಮಾ ಇನ್-ಆರ್ಟ್ & ಕ್ರಾಫ್ಟ್ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಹಿರೇಸಿಂದೋಗಿ ಅಥವಾ ಹೊಸಪೇಟೆ ರಸ್ತೆ ಮೌಲಾನಾ ಆಜಾದ್ ಭವನದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
English summary
Apply for guest teacher post at Koppal district Kukanur taluk Talakal Morarji Desai residential school. Candidates can apply till June 30.