ತಮಿಳುನಾಡು: ಮಗನ ಕಾಲೇಜು ಶುಲ್ಕ ಕಟ್ಟಲು, ಸರ್ಕಾರದಿಂದ ಪರಿಹಾರ ಪಡೆಯಲು ಪ್ರಾಣ ಬಿಟ್ಟ ತಾಯಿ | Tamil Nadu woman ends life in front of bus to get compensation to pay son’s college fees

India

oi-Mamatha M

|

Google Oneindia Kannada News

ಚೆನ್ನೈ, ಜುಲೈ. 18: ಮಕ್ಕಳಿಗಾಗಿ ತಾಯಿ ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಎಂಬ ಮಾತುಗಳನ್ನು ಕೇಳಿರುತ್ತೇವೆ. ಸಿನಿಮಾ, ಕಥೆ ಕಾದಂಬರಿಗಳಲ್ಲಿ ಓದಿರುತ್ತೇವೆ. ಆದರೆ, ತಮಿಳುನಾಡು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ತನ್ನ ಮಗನ ಭವಿಷ್ಯವನ್ನು ಉಜ್ವಲಗೊಳಿಸುವ ಬಯಕೆಯಿಂದ ತಾಯಿಯೊಬ್ಬರು ತಮ್ಮ ಪ್ರಾಣವನ್ನೇ ಬಲಿ ನೀಡಿರುವ ದಾರುಣ ಘಟನೆ ನಡೆದಿದೆ.

ತಮಿಳುನಾಡಿನಲ್ಲಿ ನಡೆದ ಈ ದಾರುಣ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ಸಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಪತಿ (45) ಎಂದು ಗುರುತಿಸಲಾಗಿರುವ ಮಹಿಳೆ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಆರ್ಥಿಕ ಅಡಚಣೆಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

Tamil Nadu woman ends life in front of bus to get compensation to pay sons college fees

45 ವರ್ಷದ ಪಾಪತಿ ಅವರು ಜೂನ್ 28 ರಂದು ವೇಗವಾಗಿ ಬಂದ ಬಸ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ನೀಡುತ್ತಾರೆ ಎಂದು ಯಾರೋ ತಪ್ಪು ಮಾಹಿತಿ ನೀಡಿದ ಕಾರಣ, ತನ್ನ ಮಗನ ಕಾಲೇಜು ಶುಲ್ಕ ಕಟ್ಟಲು ಹಣ ಮತ್ತು ಮಗನ ಭವಿಷ್ಯಕ್ಕೆ ಹಣ ಸಹಾಯವಾಗುತ್ತದೆ ಎಂದು ಇಂತಹ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.

ಪೊಲೀಸ್ ಮೂಲಗಳ ಪ್ರಕಾರ, ಜೂನ್ 28 ರಂದು ಪಾಪತಿ ಬಸ್ಸಿಗೆ ಅಡ್ಡ ಬರಲು ಯತ್ನಿಸಿದ್ದರು, ಆದರೆ, ಆಕೆಗೆ ಬೈಕ್ ಡಿಕ್ಕಿ ಹೊಡೆದಿದೆ. ಇದಾಗಿ ಸ್ವಲ್ಪ ಸಮಯದ ನಂತರ, ಆಕೆ ರಸ್ತೆ ದಾಟಲು ಪ್ರಯತ್ನಿಸುವಂತೆ ಇನ್ನೊಂದು ಬಸ್ಸಿನ ಮುಂದೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ.

ಅಪಘಾತವಾದ ಕಾರನ್ನು 1ಕಿ.ಮೀ ಎಳೆದೊಯ್ದ ಟಿಪ್ಪರ್: ಎದೆಝಲ್‌ ಎನಿಸುವ ದೃಶ್ಯಅಪಘಾತವಾದ ಕಾರನ್ನು 1ಕಿ.ಮೀ ಎಳೆದೊಯ್ದ ಟಿಪ್ಪರ್: ಎದೆಝಲ್‌ ಎನಿಸುವ ದೃಶ್ಯ

ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ಆಕೆಯ ಕುಟುಂಬಕ್ಕೆ 45,000 ರೂ.ಗಳನ್ನು ನೀಡುವುದಾಗಿ ಹೇಳಿ ಯಾರೋ ಮೃತ ಮಹಿಳೆಗೆ ತಪ್ಪಿ ಮಾಹಿತಿ ನೀಡಿದ್ದರು. ತನ್ನ ಮಗನ ಕಾಲೇಜು ಶುಲ್ಕಕ್ಕಾಗಿ ಹಣವನ್ನು ಹೊಂದಿಸಲು ಹೆಣಗಾಡುತ್ತಿದ್ದ ಅವರಿಗೆ ಇದು ದಾರಿಯಾಗಿ ಕಾಣಿಸಿದೆ. ಪತಿಯಿಂದ ಬೇರ್ಪಟ್ಟ ನಂತರ ಕಳೆದ 15 ವರ್ಷಗಳಿಂದ ಪಾಪತಿ ತನ್ನ ಮಕ್ಕಳನ್ನು ಒಂಟಿಯಾಗಿ ಬೆಳೆಸಿದರು.

Tamil Nadu woman ends life in front of bus to get compensation to pay sons college fees

ಅಪಘಾತದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಂತಾಪ ವ್ಯಕ್ತಪಡಿಸಿದ್ದಾರೆ. ತನ್ನ ಮಗನ ಶಿಕ್ಷಣಕ್ಕಾಗಿ ಶುಲ್ಕ ಪಾವತಿಸಲು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ತಾಯಿಯನ್ನು ಪ್ರೇರೇಪಿಸಿದ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದ್ದಾರೆ. ಇನ್ನು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇತರ ಕಾರಣಗಳೇನಾದರು ಇರಬಹುದೇ ಎಂದು ತನಿಖೆ ನಡೆಸುತ್ತಿದ್ದಾರೆ.

English summary

Tamil Nadu woman who working as a Sanitation worker at the Collector’s office in Salem jumped in front of a moving bus to get compensation to pay son’s college fees, dies. know more.

Source link