TG T20: 14 ಬೌಂಡರಿ ಮತ್ತು 7 ಸಿಕ್ಸರ್‌, ಅಜೇಯ 136 ರನ್! ಸಿಡಿಲಬ್ಬರದ ಶತಕ ಸಿಡಿಸಿದ ತಿಲಕ್ ವರ್ಮಾ | ಕ್ರೀಡಾ ಸುದ್ದಿ | ACTPnews

ತಿಲಕ್ ವರ್ಮಾ


Last Updated:

ತ್ರಿಕೋನ್ ಸರಣಿ ಮುಗಿಯುತ್ತಿದ್ದಂತೆ ತಿಲಕ್ ವರ್ಮಾ ಟಿಜಿ ಟಿ20 ಲೀಗ್ ಆಡಿದ್ದು, ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಫೋಟಕ ಇನ್ನಿಂಗ್ಸ್‌ ನೆರವಿನಿಂದ ಮೇದಕ್ ತಂಡವು 19.4 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 259 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು

ತಿಲಕ್ ವರ್ಮಾ
ತಿಲಕ್ ವರ್ಮಾ

ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತವನ್ನ (India A) ಚಾಂಪಿಯನ್ ಪಟ್ಟಕ್ಕೇರಿಸಿದ್ದ ಟೀಮ್ ಇಂಡಿಯಾ ಟಿ20 ಉಪನಾಯಕ ತಿಲಕ್ ವರ್ಮಾ (Tilak Varma) ಹೊಸದಾಗಿ ಶುರುವಾಗಿರುವ ತೆಲಂಗಾಣ ಟಿ20 (TG T20) ಟೂರ್ನಿಯಲ್ಲಿ ಸ್ಫೋಟಕ ಶತಕ ಸಿಡಿಸಿದ್ದಾರೆ. 2026ರ ಟಿಜಿ20 ಋತುವಿನಲ್ಲಿ ಮೇಡಕ್ ಫಾಲ್ಕನ್ಸ್ ತಂಡದ ನಾಯಕತ್ವ ವಹಿಸಿದ್ದ ತಿಲಕ್ ವರ್ಮಾ, ಸೋಮವಾರದ ವಾರಂಗಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 136 ರನ್​ಗಳ ಬೃಹತ್ ಶತಕ ಸಿಡಿಸಿ ಅಬ್ವರಿಸಿದರು. ಸೋಮವಾರ ಬೆಳಿಗ್ಗೆ ಶ್ರೀಲಂಕಾ ಪ್ರವಾಸದಿಂದ ಹೈದರಾಬಾದ್‌ಗೆ ಆಗಮಿಸಿದ ತಿಲಕ್ ವರ್ಮಾ, ತಮ್ಮ ಮೊದಲ ಪಂದ್ಯವನ್ನು ಆಡಲು ನೇರವಾಗಿ ಉಪ್ಪಲ್ ಕ್ರೀಡಾಂಗಣಕ್ಕೆ ತೆರಳಿದರು. ಅವರು 52 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ ಅಜೇಯ 136 ರನ್ ಗಳಿಸಿ ಮೇಡಕ್ ಫಾಲ್ಕನ್ಸ್‌ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

259 ರನ್ ಚೇಸ್  ಮಾಡಿ ಗೆಲುವು

ತಿಲಕ್ ವರ್ಮಾ ಅವರ ಸ್ಫೋಟಕ ಇನ್ನಿಂಗ್ಸ್‌ ನೆರವಿನಿಂದ ಮೇದಕ್ ತಂಡವು 19.4 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 259 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು. ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ತಿಲಕ್ ವರ್ಮಾ ಅವರೊಂದಿಗೆ ವಿಕ್ರಮ್ ನಾಯಕ್ ಗಗುಲೋತ್ (25) ಮತ್ತು ಸೃಜಿತ್ ರೆಡ್ಡಿ (25) ಕೂಡ ಉತ್ತಮ ಪ್ರದರ್ಶನ ನೀಡಿದರು. ವಾರಂಗಲ್ ಬೌಲರ್‌ಗಳಲ್ಲಿ ಕುರಕರ್ಣಿ ಮತ್ತು ಮನ್ಸೂರಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಅಮನ್ ರಾವ್ ಅವರ ಶತಕ ವ್ಯರ್ಥ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಾರಂಗಲ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 258 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ವಾರಂಗಲ್ ತಂಡದ ನಾಯಕ ಅಮನ್ ರಾವ್ 48 ಎಸೆತಗಳಲ್ಲಿ 12 ಬೌಂಡರಿ ಮತ್ತು 13 ಸಿಕ್ಸರ್‌ಗಳೊಂದಿಗೆ 142 ರನ್ ಗಳ ಬೃಹತ್ ಶತಕ ಸಿಡಿಸಿದ್ದರು. ಮೇದಕ್ ಬೌಲರ್‌ಗಳಲ್ಲಿ ತಿಲಕ್ ವರ್ಮಾ ಮತ್ತು ಮಧುಕರ್ ತಲಾ ಎರಡು ವಿಕೆಟ್ ಪಡೆದರೆ, ಸೂರ್ಯತೇಜ, ರವಿತೇಜ ಮತ್ತು ರಾಹುಲ್ ತಲಾ ಒಂದು ವಿಕೆಟ್ ಪಡೆದರು.

ರಂಗರೆಡ್ಡಿಗೆ ಉತ್ತಮ ಆರಂಭ

ರಂಗರೆಡ್ಡಿ ರೈಸರ್ಸ್ ತಂಡವು ಟಿಜಿ20 ಲೀಗ್‌ನಲ್ಲಿ ಗೆಲುವಿನ ಆರಂಭವನ್ನು ನೀಡಿತು. ಸೋಮವಾರ ನಡೆದ ಆರಂಭಿಕ ಪಂದ್ಯದಲ್ಲಿ ತಂಡವು ನಲ್ಗೊಂಡ ನೈಟ್ಸ್ ಅನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ತನಯ್ ತ್ಯಾಗರಾಜನ್ ಅಜೇಯ ಅರ್ಧಶತಕ (30 ಎಸೆತಗಳಲ್ಲಿ 71, 7 ಬೌಂಡರಿ ಮತ್ತು 5 ಸಿಕ್ಸರ್‌) ಗಳಿಸುವ ಮೂಲಕ ರಂಗರೆಡ್ಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ನಲ್ಗೊಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 189 ರನ್ ಗಳಿಸಿತು.

ನಂತರ, ರಂಗ ರೆಡ್ಡಿ 16.3 ಓವರ್‌ಗಳಲ್ಲಿ 5 ವಿಕೆಟ್‌ಗೆ 190 ರನ್ ಗಳಿಸಿ ಗುರಿಯನ್ನು ತಲುಪಿದರು. ತನಯ್ ತ್ಯಾಗರಾಜನ್ ಜೊತೆಗೆ ಆದಿತ್ಯ (41) ಮತ್ತು ನಿತಿನ್ ಸಾಯಿ (ಔಟಾಗದೆ 26) ಕೂಡ ಗಮನಾರ್ಹ ಕೊಡುಗೆ ನೀಡಿದರು. ಅನಿಕೇತ್ ಮತ್ತು ವರುಣ್ ಗೌಡ್ ತಲಾ ಎರಡು ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed