Karnataka: ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ಅನುದಾನ ನೀಡಲು ಆಗ್ರಹ | Karnataka Govt Should Announced Drought and Will Provide 1 crore fund every Constituency

Agriculture

oi-Shankrappa Parangi

|

Google Oneindia Kannada News

ಬೆಂಗಳೂರು, ಜುಲೈ 18: ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿ ರೈತರು ಬಿತ್ತಿದ ಬೀಜ ಮೊಳಕೆಯಿಡೆದಿಲ್ಲ. ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂ.ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ಪ್ರಾಸ್ತಾವಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಹಲವೆಡೆ ಮಳೆಯ ಅಭಾವ ಉಂಟಾಗಿದೆ ನಿಗದಿತ ಸಮಯಕ್ಕೂ ಮಳೆ ಬಂದಿಲ್ಲ. ಮಳೆ ಬಾರದ ಕಾರಣ ರೈತರು ಭಿತ್ತನೆ ಬೀಜಗಳನ್ನು ಹಾಕಿಲ್ಲ. ಜುಲೈ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿದೆ. ಆದರೆ, ಎಲ್ಲ ಕಡೆಯೂ ಮಳೆಯಾಗಿಲ್ಲ. ರೈತರು ಬರಗಾಲ ವಾತಾವರಣ ಎದುರಿಸಿದ್ದಾರೆ ಎಂದು ವಿವರಿಸಿದರು.

Karnataka Govt Should Announced Drought and Will Provide 1 crore fund every Constituency

ಬಹಳಷ್ಟು ಜನರು ಮೊದಲ ಸಾರಿ ಬಿತ್ತನೆ ಮಾಡಿದ್ದಾರೆ. ನಂತರ ಎರಡನೇ ಬಾರಿಗೂ ಬಿತ್ತನೆ ಮಾಡಿದ್ದಾರೆ. ಮಳೆ ಆಗದಿದ್ದಕ್ಕೆ ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು ಆದರೆ ಮಳೆ ಇಲ್ಲದೇ ಬರೀ 1 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಸರ್ಕಾರ ಇದನ್ನು ಬರಗಾಲ ಎಂದು ಪರಿಗಣಿಸಬೇಕು ಎಂದರು.

ರೈತರ ಆತ್ಮಹತ್ಯೆ ಬಗ್ಗೆ ಲಘು ಹೇಳಿಕೆ ಸರಿಯಲ್ಲ

ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಿಇಒ ಗಳಿಗೆ ಕೊಟ್ಟ ಹಣ ಸಾಲುವುದಿಲ್ಲ. ಪ್ರತಿ ಕ್ಷೇತ್ರ ಒಂದು ಕೋಟಿ ರೂಪಾಯಿ ಒದಗಿಸಬೇಕು ಎಂದರು.

ರೈತರ ಆತ್ಮಹತ್ಯೆ ಬಗ್ಗೆ ಕೃಷಿ ಸಚಿವರು ಲಘುವಾಗಿ ಮಾತನಾಡಿದ್ದಾರೆ. ಹಿಂದಿನ ವರ್ಷ ರೈತರ ಸಾವು ಇಷ್ಟಾಗಿತ್ತು, ಅಷ್ಟಾಗಿತ್ತು ಎಂದು ಹೇಳುವುದು ಸರಿಯಲ್ಲ. ಅಂಕಿ ಅಂಶಗಳ ಮೂಲಕ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವುದು ಸರೀನಾ..? ಎಂದು ಬೊಮ್ಮಾಯಿ ಪ್ರಶ್ನಿಸಿದರು.

Karnataka Govt Should Announced Drought and Will Provide 1 crore fund every Constituency

ಬರಗಾಲ ಮತ್ತು ಸಚಿವರು ರೈತರು ಕುರಿತು ನಿರ್ಲಕ್ಷ್ಯೆಯಿಂದ, ಬೇಜವಬ್ದಾರಿಯ ಹೇಳಿಕೆ ಸರಿಯಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಅವರು ಒತ್ತಾಯಿಸಿದರು.

ಸರ್ಕಾರಕ್ಕೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ

ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸಚಿವ ಸಂಪುಟ ವಿರೋಧ ಪಕ್ಷಗಳ ಸಭೆ ನಡೆಸುವಲ್ಲಿ ಮುಳುಗಿದ್ದಾರೆ. ಈ ಕಾರಂಗ್ರೆಸ್ ಸರ್ಕಾರಕ್ಕೆ ರೈತಪರ ಚಿಂತನೆ, ಕಾಳಜಿ ಹೊಂದಿಲ್ಲ. ಇವರಿಗೆಲ್ಲ ರಾಜಕೀಯವೇ ಮುಖ್ಯ ಎಂದು ವಾಗ್ದಾಳಿ ನಡೆಸಿದರು.

ಸೋಮವಾರ ಸರಣಿ ಟ್ವೀಟ್ ಮೂಲಕ ಹರಿಹಾಯ್ದ ಅವರು, ಮುಂಗಾರು ವಿಫಲವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹಲವಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಈ ಹಿಂದೆಯು ರೈತರ ಆತ್ಮಹತ್ಯೆಗಳು ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚಾಗಿದ್ದವು ಎಂಬುದನ್ನು ತಿಳಿಸಿದರು. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ರೈತ ಪರ ಸೂಕ್ತ ಕ್ರವಹಿಸಬೇಕು ಎಂದು ಹೇಳಿದರು.

English summary

Karnataka govt should announced drought and will provide 1 crore fund every constituency, urge Basavaraj bommai.

Story first published: Tuesday, July 18, 2023, 13:54 [IST]

Source link