ವಿರೋಫ ಪಕ್ಷಗಳ ಸಭೆ; ಪ್ರಧಾನಿ ಹುದ್ದೆ ಬಗ್ಗೆ ಕಾಂಗ್ರೆಸ್‌ ನಿಲುವು ಬಹಿರಂಗ! | Opposition Party Congress Not Interested In PM Post Says Mallikarjun Kharge

Karnataka

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 18; ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರಚನೆ ಮಾಡಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ.

ಮಂಗಳವಾರ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ, ಮೈತ್ರಿಕೂಟದ ಹೆಸರು, ಸೀಟು ಹಂಚಿಕೆ ಹೀಗೆ ಆರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಸಭೆಯ ಬಳಿಕ ಸಂಜೆ 4 ಗಂಟೆಗೆ ವಿರೋಧ ಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಮಾಹಿತಿ ನೀಡಲಿದ್ದಾರೆ.

Opposition Party Congress Not Interested In PM Post Says Mallikarjun Kharge

ವಿರೋಧ ಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. “ಕಾಂಗ್ರೆಸ್ ಪಕ್ಷ ಅಧಿಕಾರವಾಗಲಿ, ಪ್ರಧಾನ ಮಂತ್ರಿ ಹುದ್ದೆಯ ಬಗ್ಗೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ” ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್‌ನಿಂದ ಯಾರೂ ಪ್ರಧಾನಿ ಅಭ್ಯರ್ಥಿ ಆಗಲ್ಲ ಎಂಬ ಸಂದೇಶ ನೀಡಿದರು.

ಬಿಜೆಪಿ ವಿರುದ್ಧ ಟೀಕೆ; ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯನ್ನು ಟೀಕಿಸಿದರು. “ಆಡಳಿತ ಪಕ್ಷದ ನಾಯಕರು, ಅಧ್ಯಕ್ಷರು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ. ಹಳೆಯ ದೋಸ್ತಿಗಳನ್ನು ಮತ್ತೆ ಒಂದು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ” ಎಂದರು.

“ನಾವು 26 ಪಕ್ಷಗಳಿದ್ದು, 11 ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಬಿಜೆಪಿ ಸ್ವತಂತ್ರವಾಗಿ 303 ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ಮಿತ್ರರನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ” ಎಂದು ಖರ್ಗೆ ದೂರಿದರು.

  • Karnataka: ಅಲೆಮಾರಿ ಲಂಬಾಣಿ 450 ಮಹಿಳಾ ಕುಶಲಕರ್ಮಿಗಳಿಂದ ಗಿನ್ನಿಸ್ ರೆಕಾರ್ಡ್: ಖರ್ಗೆ ಶ್ಲಾಘನೆ,
  • ಸಿಎಂ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಜಗಳದ ನಡುವೆ ರಾಜಸ್ಥಾನವನ್ನು ಗೆಲ್ಲಲು ಕಾಂಗ್ರೆಸ್ ಪಣ
  • ಮಣಿಪುರ ಭೇಟಿ ವೇಳೆ ‘ರಾಗಾ’ಗೆ ತಡೆ: ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ವಾಗ್ದಾಳಿ
  • ತೆಲಂಗಾಣ: ಚುನಾವಣೆಗು ಮುನ್ನ ಸಿಎಂ ಕೆಸಿಆರ್‌ಗೆ ಆಘಾತ, ಕಾಂಗ್ರೆಸ್ ಸೇರಿದ ಪ್ರಮುಖ 35 ನಾಯಕರು!
  • ತೆಲಂಗಾಣ ರಾಜಕೀಯದಲ್ಲಿ ಕಲ್ಲೋಲ: ಬಿಆರ್‌ಎಸ್ ಪಕ್ಷದ 12ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ
  • ಸಿಎಂ,ಡಿಸಿಎಂ ನಡುವೆ ಮುಂದುವರೆದ ಕೋಲ್ಡ್ ವಾರ್? ಸಿದ್ದು ವಿರುದ್ದ ಖರ್ಗೆಗೆ ದೂರು ಕೊಟ್ರಾ ಡಿಕೆಶಿ!? ಕಾರಣವೇನು?
  • ಬಿಹಾರವನ್ನು ಗೆದ್ದರೆ ದೇಶವನ್ನೇ ಗೆಲ್ಲಬಹುದು: ಮಲ್ಲಿಕಾರ್ಜುನ ಖರ್ಗೆ
  • ಬಿಜೆಪಿ ವಿರುದ್ಧ ವಿಪಕ್ಷಗಳ ರಣಕಹಳೆ: ಬಿಹಾರ ರಾಜಧಾನಿ ತಲುಪಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ!
  • ಲೋಕ ಸಮರಕ್ಕೆ ಕಮಲ-ದಳ ದೋಸ್ತಿ!?: ಸಂಪುಟದ ಎಲ್ಲಾ ಸಚಿವರೊಂದಿಗೆ ಖರ್ಗೆ ಮೀಟಿಂಗ್! ಇಲ್ಲಿದೆ ಕೈ ಪಾಳಯದ ಲೆಕ್ಕಾಚಾರ!?
  • ಜೂನ್‌ 21ಕ್ಕೆ ಕರ್ನಾಟಕದ ಎಲ್ಲ ಮಂತ್ರಿಗಳ ಸಭೆ ಕರೆದ ಮಲ್ಲಿಕಾರ್ಜುನ ಖರ್ಗೆ
  • ಲೋಕಸಭಾ ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿಗೆ ಅತಿ ಪ್ರಮುಖ ಹುದ್ದೆ- ಕಾಂಗ್ರೆಸ್‌ನಲ್ಲಿ ಸ್ಫೋಟಕ ಬೆಳವಣಿಗೆಗಳ ನಿರೀಕ್ಷೆ
  • ಜೂನ್ 23 ರಂದು ಪಾಟ್ನಾದಲ್ಲಿ ವಿಪಕ್ಷಗಳ ಸಭೆ: ರಾಹುಲ್, ಖರ್ಗೆ, ಮಮತಾ, ಸ್ಟಾಲಿನ್, ಎಡಪಕ್ಷಗಳು ಭಾಗಿ

English summary

Opposition party meeting in Bengaluru; Congress president Mallikarjun Kharge said that his party wasn’t interested in power or the prime minister post.

Story first published: Tuesday, July 18, 2023, 13:35 [IST]

Source link