RCB Team For IPL 2024: ಆರ್‌ಸಿಬಿ ತಂಡದಲ್ಲಿ ಆಗಲಿದೆ ಮಹತ್ವದ ಬದಲಾವಣೆ! ಯಾರೆಲ್ಲಾ ಆಚೆ ಹೋಗ್ತಾರೆ ನೋಡಿ | RCB Ends Association With Mike Hesson And Sanjay Bangar, Begins Search For New Coaches

Sports

oi-Naveen Kumar N

|

Google Oneindia Kannada News

ಮಹತ್ವದ ಬೆಳವಣಿಗೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹಲವು ಬದಲಾವಣೆಗಳಾಗುವ ಸುದ್ದಿ ಬಂದಿದೆ. ಆರ್ ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2024ರ ಐಪಿಎಲ್‌ಗೆ ಮುನ್ನವೇ ಹೊಸ ಕೋಚ್‌, ಕ್ರಿಕೆಟ್ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. 2023ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಪ್ರಮುಖ ಆಟಗಾರರನ್ನು ಒಳಗೊಂಡಿದ್ದರೂ ಪ್ಲೇ ಆಫ್‌ಗೆ ಪ್ರವೇಶಿಸದ್ದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

Mike Hesson And Sanjay Bangar

ಸಂಜಯ್ ಬಂಗಾರ್ ಮತ್ತ ಮೈಕ್ ಹೆಸ್ಸನ್ ತಂಡದಿಂದ ಹೊರಹೋಗುವುದು ಖಚಿತವಾಗಿದೆ ಎಂದು ಹೇಳಲಾಗಿದ್ದು ತಂಡದ ಬೌಲಿಂಗ್ ಕೋಚ್ ಆಗಿರುವ ಆಡಮ್ ಗ್ರಿಫಿತ್ ಮುಂದುವರೆಯುತ್ತಾರಾ ಅಥವಾ ಅವರನ್ನು ಬದಲಾವಣೆ ಮಾಡುತ್ತಾ ಎನ್ನುವ ಬಗ್ಗೆ ಯಾವ ಸ್ಪಷ್ಟನೆ ಸಿಕ್ಕಿಲ್ಲ.

ಐದು ವರ್ಷಗಳ ಕಾಲ ಆರ್ ಸಿಬಿ ತಂಡಕ್ಕೆ ಕೆಲಸ

ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಆರ್ ಸಿಬಿ ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಐದು ವರ್ಷಗಳ ಕಾಲ ಇವರಿಬ್ಬರೂ ತಂಡಕ್ಕಾಗಿ ಕೆಲಸ ಮಾಡಿದ್ದಾರೆ.

ಈವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿರುವುದು ಅಭಿಮಾನಿಗಳಿಗೆ, ಆಟಗಾರರಿಗೆ ಮಾತ್ರವಲ್ಲದೆ ಆಡಳಿತ ಮಂಡಳಿಗೂ ಭಾರಿ ನಿರಾಸೆ ಉಂಟು ಮಾಡಿದೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್, ನಿರ್ದೇಶಕರ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿತ್ತು.

ಯಾರಾಗ್ತಾರೆ ಮುಂದಿನ ಕೋಚ್?

ಈ ಇಬ್ಬರೂ ತಂಡದಿಂದ ಹೊರ ನಡೆದ ನಂತರ ಆರ್ ಸಿಬಿ ಯಾರನ್ನು ನೇಮಿಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಭಾರತೀಯ ಕೋಚ್ ಮೊರೆ ಹೋಗುತ್ತದಾ ಅಥವಾ ವಿದೇಶಿ ಕೋಚ್‌ ಅನ್ನು ಹುಡುಕುತ್ತದಾ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

2023ರ ಐಪಿಎಲ್‌ನಲ್ಲಿ ಉತ್ತಮ ತಂಡವನ್ನೇ ಹೊಂದಿದ್ದರೂ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪ್ರಮುಖ ಆಟಗಾರರ ಗಾಯದ ಸಮಸ್ಯೆ ಕೂಡ ತಂಡವನ್ನು ಕಾಡಿತು. ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದರೂ, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮುಂದಿನ ಐಪಿಎಲ್‌ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಕೆಲವು ಆಟಗಾರರನ್ನು ಕೈಬಿಟ್ಟು ಉತ್ತಮ ಬೌಲರ್ ಗಳನ್ನು ಮಿನಿ ಹರಾಜಿನಲ್ಲಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ಮುಂದಿನ ಐಪಿಎಲ್‌ನಲ್ಲಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ಕೋಚ್ ಬದಲಾವಣೆ ಮಾಡಿದ ಲಕ್ನೋ

ಲಕ್ನೋ ಸೂಪರ್ ಜೈಂಟ್ಸ್ ಆಂಡಿ ಫ್ಲವರ್ ಬದಲಿಗೆ ಆಸ್ಟ್ರೇಲಿಯಾದ ಮಾಜಿ ಓಪನರ್ ಮತ್ತು ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಜಿಂಬಾಬ್ವೆಯ ಮಾಜಿ ನಾಯಕರಾದ ಫ್ಲವರ್ ಈಗಾಗಲೇ ಇತರ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಐಪಿಎಲ್‌ನಲ್ಲಿ ಮತ್ತೊಂದು ತಂಡದ ಕೋಚ್ ಆಗುವ ಸಾಧ್ಯತೆ ಇದೆ.

English summary

RCB parts ways with Mike Hesson and Sanjay Bangar, as they search for new coaches for the upcoming Indian Premier League season. The franchise aims to revamp its coaching staff in their pursuit of an elusive IPL title.

Story first published: Sunday, July 16, 2023, 18:56 [IST]

Source link