ವಿಡಿಯೋ; ಕೆಂಪುಕೋಟೆ ಗೋಡೆಗೆ ತಲುಪಿದ ಯಮುನಾ ಪ್ರವಾಹ! | Yamuna River Has Touched Red Fort Wall Watch Video

India

oi-Gururaj S

|

Google Oneindia Kannada News

ನವದೆಹಲಿ, ಜುಲೈ 16; ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರವಾಹ ಉಂಟಾಗಿದೆ. ಯಮುನಾ ನದಿ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ನಗರದ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗಿದೆ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಸಹ ಪ್ರವಾಹ ಸಾಕ್ಷಿಯಾಗಿದೆ.

ಉಕ್ಕಿ ಹರಿಯುತ್ತಿರುವ ಯಮುನಾ ನದಿ ಪ್ರವಾಹದಿಂದ ನವದೆಹಲಿಯ ಹಲವು ರಸ್ತೆ, ಬಡಾವಣೆಗಳು ಜಲಾವೃತವಾಗಿವೆ. ಈಗ ಪ್ರವಾಹದ ನೀರು ಐತಿಹಾಸಿಕ ಕೆಂಪುಕೋಟೆಯ ಗೋಡೆಯನ್ನು ತಲುಪಿದೆ. ಈ ಕುರಿತ ವಿಡಿಯೋವನ್ನು ANI ಟ್ವೀಟ್ ಮಾಡಿದೆ.

 Delhi Flood News: ದೆಹಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ Delhi Flood News: ದೆಹಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

delhi-flood

ದೆಹಲಿಯ ರಿಂಗ್ ರೋಡ್‌ನಲ್ಲಿರುವ ಕೆಂಪುಕೋಟೆಯ ಗೋಡೆಗೆ ಯಮುನಾ ನದಿ ನೀರು ತಲುಪಿದೆ. ಸುತ್ತಮುತ್ತಲಿನ ಪ್ರದೇಶಗಳು ಯಮುನಾ ಪ್ರವಾಹದಲ್ಲಿ ಮುಳುಗಿವೆ. ನೀರು ತುಂಬಿರುವ ಕಾರಣ ರಿಂಗ್ ರಸ್ತೆಯನ್ನು ದೆಹಲಿ ಪೊಲೀಸರು ಬಂದ್ ಮಾಡಿದ್ದಾರೆ.

ಮುಂಗಾರು: ಭಾರೀ ಮಳೆಗೆ ನಿದ್ದೆಯಿಂದ ಎದ್ದ ದೆಹಲಿ, ದೇಶದ ಹಲವೆಡೆ ವರುಣನ ಆರ್ಭಟಮುಂಗಾರು: ಭಾರೀ ಮಳೆಗೆ ನಿದ್ದೆಯಿಂದ ಎದ್ದ ದೆಹಲಿ, ದೇಶದ ಹಲವೆಡೆ ವರುಣನ ಆರ್ಭಟ

ವಿಡಿಯೋ ನೋಡಿ; ಎಎನ್‌ಐ ಕೆಂಪುಕೋಟೆಯ ಗೋಡೆಗೆ ಯಮುನಾ ನದಿ ನೀರು ತಲುಪಿರುವ ರಿಂಗ್ ರಸ್ತೆಯ ವಿಡಿಯೋವನ್ನು ಟ್ವೀಟ್ ಮಾಡಿದೆ. ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರಿನಲ್ಲಿ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತವಾಗಿದ್ದನ್ನು ಕಾಣಬಹುದಾಗಿದೆ.

ಶನಿವಾರ ದೆಹಲಿಯ ಪ್ರವಾಹ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದು ವಿಭಾಗೀಯ ಆಯುಕ್ತ ಅಶ್ವನಿ ಕುಮಾರ್ ಹೇಳಿದ್ದರು. ಮಳೆ ಬಾಧಿತ ಪ್ರದೇಶಗಳಲ್ಲಿನ ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದರು.

ದೆಹಲಿ ಮಳೆ: ಸುಪ್ರೀಂ ಕೋರ್ಟ್ ಆವರಣದವರೆಗೂ ಬಂದ ಯುಮುನಾ ನದಿ ಪ್ರವಾಹದೆಹಲಿ ಮಳೆ: ಸುಪ್ರೀಂ ಕೋರ್ಟ್ ಆವರಣದವರೆಗೂ ಬಂದ ಯುಮುನಾ ನದಿ ಪ್ರವಾಹ

ದೆಹಲಿ ಮಹಾನಗರ ಪಾಲಿಕೆ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವುದು. ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಅಗತ್ಯ ಕಾರ್ಯಗಳಲ್ಲಿ ತೊಡಗಿದೆ.

ಯಮುನಾ ನದಿ ಪ್ರವಾಹ ಕೊಂಚ ಇಳಿಮುಖವಾದ ಕಾರಣ ಜನರು ಸ್ವಲ್ಪ ನಿರಾಳರಾಗಿದ್ದರು. ಕೆಲವು ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ ಬಾಧಿತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಮುಂದುವರೆಸಲಾಗಿದೆ.

ಒಡಿಶಾ ರಾಜ್ಯದ ಭುವನೇಶ್ವರ ಮತ್ತು ಕಟಕ್‌ನಲ್ಲಿ ಶನಿವಾರವೂ ಮಳೆಯಾಗಿದೆ. ರಸ್ತೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದರು. ಭಾರತೀಯ ಹವಾಮಾನ ಇಲಾಖೆ ಜುಲೈ 17ರ ತನಕ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹೇಳಿದೆ. ಜುಲೈ 18ರಂದು ಯೆಲ್ಲೋ ಅಲರ್ಟ್‌ ಸಹ ಘೋಷಣೆ ಮಾಡಿದ್ದು, ಜನರ ಆತಂಕ ಹೆಚ್ಚಿಸಿದೆ.

English summary

Delhi flood video; Yamuna River has touched the Red Fort wall on ring road.

Story first published: Sunday, July 16, 2023, 8:42 [IST]

Source link