Fennel Seeds Benefits: ಅಜೀರ್ಣ, ತೂಕ ಇಳಿಕೆ ಜೊತೆಗೆ ಸೋಂಪು ಕಾಳುಗಳ ಉಪಯೋಗ ಎಷ್ಟೇಲ್ಲಾ ಇದೆ ಗೊತ್ತೆ? | Fennel Seeds Benefits for Weight Loss, Nutrients and Side Effects in Kannada

Features

oi-Mamatha M

|

Google Oneindia Kannada News

ಬೆಂಗಳೂರು, ಜೂನ್. 22: ಭಾರತೀಯರ ಅಡುಗೆ ಮನೆಯನ್ನು ಆವರಿಸಿರುವ, ಪ್ರತಿಶತ ಎಲ್ಲಾ ಅಡುಗೆಯಲ್ಲೂ ಪರಿಮಳಕ್ಕಾಗಿ ಬಳಸುವ ಸೋಂಪು ಬೀಜಗಳು ಹಲವಾರು ಫೋಷಕಾಂಖಗಳ ಕಣಜವಾಗಿದ್ದು, ಆರೋಗ್ಯಕಾರಿಯಾಗಿದೆ. ಈ ಬೀಜಗಳು ಲೈಕೋರೈಸ್‌ಗೆ ಹೋಲುವ ಸಿಹಿ, ಶಕ್ತಿಯುತ ಪರಿಮಳವನ್ನು ಹೊಂದಿದ್ದು, ಸಾಮಾನ್ಯವಾಗಿ ಆಹಾರ ಬೇಗ ಜೀರ್ಣವಾಗಲಿ ಎಂದು ಬಳಸಲಾಗುತ್ತದೆ.

ಸೋಂಪು ಬೀಜಗಳನ್ನು ಸಾಂಪ್ರದಾಯಿಕವಾಗಿ ಇಟಾಲಿಯನ್ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೂ, ಅವುಗಳನ್ನು ಎಲ್ಲಾ ರೀತಿಯ ಆಹಾರಗಳಲ್ಲಿ ಬಳಸಬಹುದು. ಇತ್ತೀಚಿನ ವರ್ಷಗಳಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯು ಪಾಕವಿಧಾನಗಳಲ್ಲಿ ಸೋಂಪು ಬೀಜಗಳ ವಿಶಿಷ್ಟ ಸ್ಥಾನ ಪಡೆದಿವೆ. ಹಾಗೇಯೇ ಭಾರತದಲ್ಲಿಯೂ ಅದರ ಬಳಕೆ ಹೆಚ್ಚಾಗಿದೆ.

Fennel Seeds In Kannada

ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು

ಪ್ರಪಂಚದ ಅನೇಕ ಭಾಗಗಳಲ್ಲಿ, ಸೋಂಪು ಬೀಜಗಳನ್ನು ಮುಟ್ಟಿನ ಸೆಳೆತದಿಂದ ಹಿಡಿದು ಗ್ಯಾಸ್ ಪ್ರಾಬ್ಲಮ್‌ವರೆಗೆ ಚಿಕಿತ್ಸೆ ನೀಡಲು ಔಷಧೀಯವಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ಬಳಕೆಗಳನ್ನು ಸಂಶೋಧನೆಯಿಂದ ದೃಢೀಕರಿಸಲಾಗಿದೆ .ಆದರೆ ಇತರ ಪ್ರಯೋಜನಗಳನ್ನು ಇನ್ನೂ ಪರೀಕ್ಷಿಸಲಾಗುತ್ತಿದೆ.

ತೂಕ ಇಳಿಕೆ

ಸೋಂಪು ಬೀಜಗಳನ್ನು ಕೆಲವೊಮ್ಮೆ ತೂಕ ಇಳಿಕೆಗೆ ಸಾಧನವಾಗಿ ಮಾರಾಟ ಮಾಡಲಾಗುತ್ತದೆ. ಸೋಂಪು ಬೀಜಗಳು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬ ವಾದದಲ್ಲಿ ಸ್ವಲ್ಪ ಸತ್ಯವಿರಬಹುದು. ಏಕೆಂದರೆ, ಒಂದು ಆರಂಭಿಕ ಅಧ್ಯಯನದ ಪ್ರಕಾರ ಸೋಂಪು ಬೀಜಗಳನ್ನು ತಿನ್ನುವುದರಿಂದ ಹಸಿವು ಕಡಿಮೆ ಮಾಡುತ್ತದೆ ಮತ್ತು ಊಟದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸೂಚಿಸುತ್ತದೆ.

Bael Fruit Benefits: ಪೋಷಕಾಂಶಗಳ ಖಜಾನೆ ಬಿಲ್ಪಪತ್ರೆ ಹಣ್ಣಿನ ಆರೋಗ್ಯ ಉಪಯೋಗಗಳನ್ನು ತಿಳಿಯಿರಿBael Fruit Benefits: ಪೋಷಕಾಂಶಗಳ ಖಜಾನೆ ಬಿಲ್ಪಪತ್ರೆ ಹಣ್ಣಿನ ಆರೋಗ್ಯ ಉಪಯೋಗಗಳನ್ನು ತಿಳಿಯಿರಿ

ಆಹಾರದ ಬಯಕೆ ಮತ್ತು ಅತಿಯಾಗಿ ತಿನ್ನುವುದರಿಂದ ಉಂಟಾಗುವ ಬೊಜ್ಜು ಹೊಂದಿರುವ ಜನರಿಗೆ, ಸೋಂಪು ಬೀಜಗಳು ಸಹಾಯಕವಾಗಬಹುದು. ಆದರೂ ಇದರ ಪರಿಣಾಮವನ್ನು ಖಚಿತಪಡಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ. ತೂಕ ನಿರ್ವಹಣೆಗೆ ಸಹಾಯ ಮಾಡಲು ಸೋಂಪು ಬೀಜಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

Fennel Seeds In Kannada

ಕ್ಯಾನ್ಸರ್ ತಡೆಗಟ್ಟುವಿಕೆ

ಸೋಂಪು ಬೀಜಗಳಲ್ಲಿ ಕಂಡುಬರುವ ಒಂದು ಪ್ರಮುಖ ಸಂಯುಕ್ತವೆಂದರೆ ಅನೆಥೋಲ್, ಇದು ಕ್ಯಾನ್ಸರ್ ವಿರುದ್ಧ ಹೋರಾಟದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಮತ್ತು ಸ್ತನ ಮತ್ತು ಯಕೃತ್ತಿನ ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಲ್ಲಿಸಲು ಅನೆಥೋಲ್ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ತೋರಿಸಿದೆ.

ಬಾಣಂತಿ ಮಹಿಳೆಯರಲ್ಲಿ ಹಾಲು ಹೆಚ್ಚಳ

ಸ್ತನ್ಯಪಾನ ಮಾಡಿಸುವ ಮಹಿಳೆಯರು ಕೆಲವೊಮ್ಮೆ ತಮ್ಮ ಮಕ್ಕಳಿಗೆ ಬೇಕಾದಷ್ಟು ಹಾಲು ನೀಡಲು ಹೆಣಗಾಗಬೇಕಾಗುತ್ತದೆ. ಸೋಂಪು ಬೀಜಗಳು ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಸೋಂಪು ಬೀಜಗಳಲ್ಲಿ ಕಂಡುಬರುವ ಪ್ರಮುಖ ಸಂಯುಕ್ತವಾದ ಅನೆಥೋಲ್, ಈಸ್ಟ್ರೊಜೆನ್ ಅನ್ನು ಅನುಕರಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಸೋಂಪು ಬೀಜಗಳನ್ನು ತಿನ್ನುವುದು ಪ್ರೊಲ್ಯಾಕ್ಟಿನ್ ಅನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಪ್ರೊಲ್ಯಾಕ್ಟಿನ್ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಹಾರ್ಮೋನ್ ಆಗಿದೆ.

Fennel Seeds In Kannada

ಸೋಂಪು ಬೀಜಗಳಲ್ಲಿರುವ ಪೋಷಕಾಂಶಗಳು ಹೀಗಿವೆ.

ವಿಟಮಿನ್ ಸಿ

ಕ್ಯಾಲ್ಸಿಯಂ

ಕಬ್ಬಿಣ

ಮೆಗ್ನೀಸಿಯಮ್

ಪೊಟ್ಯಾಸಿಯಮ್

ಒಂದು ಟೀ ಚಮಚ ಸೋಂಪು ಬೀಜಗಳಲ್ಲಿರುವ ಪೋಷಕಾಂಶಗಳು

ಕ್ಯಾಲೋರಿಗಳು: 7

ಕೊಬ್ಬು: 0 ಗ್ರಾಂ

ಕೊಲೆಸ್ಟ್ರಾಲ್: 0 ಮಿಗ್ರಾಂ

ಕಾರ್ಬೋಹೈಡ್ರೇಟ್ಗಳು: 1 ಗ್ರಾಂ

ಫೈಬರ್: 1 ಗ್ರಾಂ

ಸಕ್ಕರೆ: 0 ಗ್ರಾಂ

ಪ್ರೋಟೀನ್: 0.3 ಗ್ರಾಂ

Fennel Seeds In Kannada

ಸೋಂಪು ಬೀಜಗಳನ್ನು ಬಳಸುವುದು ಹೇಗೆ?

ಸೋಂಪು ಬೀಜಗಳು ಕಡಿಮೆ ಕ್ಯಾಲೋರಿ, ಕೊಲೆಸ್ಟ್ರಾಲ್ ಮುಕ್ತ ಪರಿಮಳವನ್ನು ಒದಗಿಸುತ್ತವೆ. ಈ ಕಾಳುಗಳು ಸಿಹಿ, ಘಮಘಮಿಸುವ ರುಚಿಯನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ಪಲ್ಯಗಳು, ಕರಿಗಳು ಮತ್ತು ಇಟಾಲಿಯನ್ ಆಹಾರಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಅಡುಗೆಯಲ್ಲಿ ನೀವು ಸೋಂಪು ಬೀಜಗಳನ್ನು ಬಳಸಬಹುದಾದ ಹಲವಾರು ವಿಧಾನಗಳಿವೆ.

ಸಲಾಡ್‌ಗಳು

ಬ್ರೆಡ್‌ಗಳು

ಸೂಪ್‌ಗಳು

ಮೇಲೋಗರಗಳು (ಕರಿಗಳು)

ಪಾಸ್ತಾ

ಸಿಹಿತಿಂಡಿಗಳು

ಪ್ರಪಂಚದ ಕೆಲವು ಭಾಗಗಳಲ್ಲಿ, ಹುರಿದ ಸೋಂಪು ಬೀಜಗಳನ್ನು ಹಾಗೆಯೇ ತಿನ್ನುವುದು ಜನಪ್ರಿಯವಾಗಿದೆ. ರುಚಿಕರವಾದ, ತೃಪ್ತಿಕರವಾದ ತಿಂಡಿ ಮಾಡಲು ಅವುಗಳನ್ನು ಸ್ವಲ್ಪ ಉಪ್ಪು ಅಥವಾ ಸಕ್ಕರೆಯೊಂದಿಗೆ ಹುರಿದು ತಿನ್ನಬಹುದು. ಎಲ್ಲಾ ಹೋಟೆಲ್‌ಗಳಲ್ಲಿ ಇದನ್ನು ಇಟ್ಟು ಗ್ರಾಹಕರಿಗೆ ನೀಡಲಾಗುತ್ತದೆ. ಊಟದ ನಂತರ ಜೀರ್ಣಕ್ರಿಯೆಗಾಗಿ ಇದನ್ನು ಬಳಸಲಾಗುತ್ತದೆ.

ಅತಿಯಾದ ಸೋಂಪು ಬೀಜಗಳನ್ನು ಸೇವಿಸುವುದರಿಂದ ಆಗುವ ಅಡ್ಡಪರಿಣಾಮಗಳು

ಸೋಂಪು ಬೀಜಗಳನ್ನು ಸಾಮಾನ್ಯವಾಗಿ ಊಟದ ನಂತರ ಬಾಯಿ ವಾಸನೆ ಬರದಂತೆ ಇರಲು ಸೇವಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸಂಪೂರ್ಣ ಸೋಂಪು ಬೀಜಗಳು ಮಿತವಾಗಿ ತಿನ್ನಲು ಸುರಕ್ಷಿತವಾಗಿದ್ದರೂ, ಅನೇಕ ಪೂರಕಗಳು ಅಥವಾ ತೈಲಗಳಲ್ಲಿ ಕಂಡುಬರುವ ರಾಸಾಯನಿಕಗಳ ಕೇಂದ್ರೀಕೃತ ಮಟ್ಟಗಳು ಸುರಕ್ಷಿತವಾಗಿರುವುದಿಲ್ಲ.

* ತಜ್ಞರ ಪ್ರಕಾರ, ಗರ್ಭಿಣಿಯರು ಸೋಂಪು ಬೀಜಗಳನ್ನು ತಪ್ಪಿಸಬೇಕು ಏಕೆಂದರೆ ಬೀಜಗಳು ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುತ್ತದೆ ಮತ್ತು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು.

* ಆಸ್ತಮಾ ಮತ್ತು ಇತರ ರೀತಿಯ ಅಲರ್ಜಿಯಿಂದ ಬಳಲುತ್ತಿರುವ ಜನರು ಸೋಂಪು ಬೀಜಗಳಿಂದ ದೂರವಿರಬೇಕು. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆಯ ಸೆಳೆತ ಕೂಡ ಸೋಂಪು ಬೀಜಗಳ ಅಲರ್ಜಿಯ ಪ್ರತಿಕ್ರಿಯೆಯಾಗಿರಬಹುದು ಎಂದಿದ್ದಾರೆ.

*ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂಬುದು ಚರ್ಮದ ಸೋಂಕು. ಇದು ಚರ್ಮದ ಉರಿಯೂತ ಮತ್ತು ಗುಳ್ಳೆಗಳನ್ನು ಉಂಟುಮಾಡಬಹುದು. ಅತಿಯಾದ ಸೋಂಪು ಬೀಜಗಳು ಅಥವಾ ಸೋಂಪು ಬೀಜಗಳ ಎಣ್ಣೆ ಸೇವನೆಯಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ.

* ಸೋಂಪುಗಳ ಅತಿಯಾದ ಸೇವನೆಯು ಅಕಾಲಿಕ ಥೆಲಾರ್ಚೆಗೆ ಕಾರಣವಾಗುತ್ತದೆ. ಅಂದರೆ, ಇದು ಪ್ರೌಢಾವಸ್ಥೆಯ ಆರಂಭದಲ್ಲಿ ಸ್ತನಗಳ ಬೆಳವಣಿಗೆಯನ್ನು ಸೂಚಿಸುತ್ತದೆ.

English summary

Health Benefits of consuming Fennel Seeds in Kannada.

Story first published: Thursday, June 22, 2023, 16:28 [IST]

Source link