KRS ಜಲಾಶಯದಲ್ಲೇ ನೀರಿಲ್ಲ, ತಮಿಳುನಾಡಿಗೆ ಹೇಗೆ ನೀರು ಬಿಡಲು ಸಾಧ್ಯ?: ಚಲುವರಾಯಸ್ವಾಮಿ ಪ್ರಶ್ನೆ | No water in Krs reservoir, How can water released to Tamil Nadu?: N.Chaluvaraya Swamy question

Mandya

lekhaka-Srinivasa K

By ಮಂಡ್ಯ ಪ್ರತಿನಿಧಿ

|

Google Oneindia Kannada News

ಮಂಡ್ಯ, ಜುಲೈ, 15: ತಮಿಳುನಾಡಿಗೆ ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳಿದ್ದಾರೆ. ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ?. ಈ ಬಗ್ಗೆ ನಾವು ಸಭೆ ನಡೆಸಿ ಚಚಿಸುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಂಡ್ಯದಲ್ಲಿ ಸ್ಪಷ್ಟಪಡಿಸಿದರು.

ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಕ್ಯಾತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಳೆಯ ಸಮಸ್ಯೆ ಎದುರಾಗಿದೆ. ಒಂದು ಕಡೆ ಕುಡಿಯಲು ನೀರು ಬೇಕಾಗಿದೆ. ಇನ್ನೊಂದೆಡೆ ಕೇಂದ್ರದ ಮಾನಿಟರಿಂಗ್ ಕಮಿಟಿಯಲ್ಲಿ ತಮಿಳುನಾಡು ನೀರು ಕೇಳಿದೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ತಮಿಳುನಾಡಿಗೆ ನೀರು ಬಿಡದ ಪರಿಸ್ಥಿತಿ ಇದೆ. ಇದರಿಂದ ರೈತರ ಬೆಳಗಳಿಗೂ ತೊಂದರೆಯಾಗುತ್ತಿದೆ. ಇದನ್ನು ಸಿಎಂ ಹಾಗೂ ನೀರಾವರಿ ಸಚಿವರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

Minister N.Chaluvaraya Swamy

ಜುಲೈ ಅಂತ್ಯದೊಳಗೆ ಉತ್ತಮ ಮಳೆಯಾಗಲಿದೆ ಎನ್ನುವ ವರದಿ ಇದೆ. ಒಂದು ವೇಳೆ ಮಳೆ ಬಾರದಿದ್ದರೇ ಬರಗಾಲ ಘೋಷಣೆ ಮತ್ತು ಮೋಡ ಬಿತ್ತನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು. ಹಾಗೆಯೇ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಆದ್ದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಆಶಾದಾಯಕವಾಗಿ ಇರಬೇಕಾದದ್ದು ಅನಿರ್ವಾಯತೆವಾಗಿದೆ ಎಂದರು.

ಕೆಆರ್‌ಎಸ್ ಡ್ಯಾಂನ ಒಳಹರಿವು ಕೂಡ ಕಡಿಮೆ ಆಗಿದೆ. ಸಮಸ್ಯೆಯಂತೂ ಇದೆ. ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡುವುದು, ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡಲಾಗುತ್ತದೆ. ಕ್ಯಾಬಿನೆಟ್ ಉಪ ಸಮಿತಿ ಈಗಾಗಲೇ ಒಂದು ಸಭೆ ಮಾಡಿದೆ. ಕೆಲ ಮಾನದಂಡದ ನಂತರ ಬರಗಾಲ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಬರ ಘೋಷಣೆಯ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಿಷ್ಟುಬರ ಘೋಷಣೆಯ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಿಷ್ಟು

ಸದನದ ವಿಚಾರ ಹೊರಗೆ ಮಾತನಾಡುವಂತಿಲ್ಲ

ಭ್ರಷ್ಟಾಚಾರಕ್ಕೆ ಜಾತಿ ಇದ್ಯಾ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಕೂಡ ಭ್ರಷ್ಟಾಚಾರದಲ್ಲಿ ಜಾತಿ ಇದೇ ಎಂದು ಹೇಳಿಲ್ಲ. ಸದನದಲ್ಲಿ ಎರಡು ದಿನ ಆ ಕುರಿತು ಚರ್ಚೆಯಾಗಿದೆ. ಸದನದ ವಿಷಯವನ್ನು ಪ್ರತಿದಿನ ಹೊರಗಡೆ ಬಂದು ಮಾತನಾಡುವುದು ಸೂಕ್ತವಲ್ಲ. ಅವರು ಮಾಜಿ ಪ್ರಧಾನಿ ಮಗ ಎಂದು ಮಾತನಾಡುತ್ತಾರೆ. ದೇವೇಗೌಡರ ಮಗ ಎಂದು ಎಲ್ಲರಿಗೂ ಗೊತ್ತಲ್ವ. ದೇವೇಗೌಡರ ಹೆಸರನ್ನು ಏಕೆ ಕುಮಾರಸ್ವಾಮಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

6 ಜನ ಗೆದ್ದಿದ್ದನ್ನು ಸಹಿಸಲಾಗುತ್ತಿಲ್ಲ

ಮಂಡ್ಯ ಜಿಲ್ಲೆಯಲ್ಲಿ 6 ಜನರು ಗೆದ್ದಿದ್ದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಬಗ್ಗೆ ಹರಿಹಾಯ್ದರೇ ಅನುಕೂಲ ಆಗುತ್ತದೆ ಎಂದು ಮಾತಾಡುತ್ತಿದ್ದಾರೆ. ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನು ರೈತನ ಮಗ ಎನ್ನುತ್ತಾರೆ. ಆದರೆ ಕುಮಾರಸ್ವಾಮಿ ಅವರನ್ನು ರೈತನ ಮಗ ಎನ್ನುತ್ತಾರಾ?. ದೇವೇಗೌಡರ ಮಗ ಎನ್ನುತ್ತಾರೆ. ಆದ್ದರಿಂದ ಎಚ್‌ಡಿಕೆ ಅವರಿಗೆ ಒಳ್ಳೆಯದಾಗಲಿ, ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ದ್ವೇಷವೋ-ಪ್ರೀತಿಯೋ ಗೊತ್ತಿಲ್ಲ

ವರ್ಗಾವಣೆಯ ರೇಟ್ ಕಾರ್ಡ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ರೇಟ್ ಕಾರ್ಡ್‌ನ ತೋರಿಸಿದ್ದೀನಲ್ಲ. 2019 ರಲ್ಲಿ ಬಿಡುಗಡೆ ಆಗಿತ್ತು. ಅದೇ ರೇಟ್ ಕಾರ್ಡ್ ಅನ್ನು ಅಸೆಂಬ್ಲಿಯಲ್ಲಿ ತೋರಿಸಿದ್ದೇನೆ. ಅದರ ಬಗ್ಗೆ ಪ್ರಸ್ತಾಪ ಮಾಡುವುದು ಬೇಡ. ಅವರಿಗೆ ನನ್ನ ಮೇಲೆ ದ್ವೇಷವಿದ್ಯೋ?. ಪ್ರೀತಿ ಇದ್ಯೋ ಅವರಿಗೆ ಬಿಟ್ಟಿದ್ದು ಎಂದರು.

English summary

No water in Krs reservoir, How can water released to Tamil Nadu?: Miniter N.Chaluvaraya Swamy question in Mandya

Story first published: Saturday, July 15, 2023, 17:48 [IST]

Source link