Karnataka
oi-Reshma P

ಧಾರವಾಡ, ಜೂನ್22: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಳ್ಳಕಾಕರು, ಗುಂಡಾಗಳಿಗೆ ಒಮ್ಮಿಂದೊಮ್ಮೆಲೆ ಧೈರ್ಯ ಬಂದಿದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂಥವರಿಗೆಲ್ಲ ಧೈರ್ಯ ಬರುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆಯೇ ಇವೆಲ್ಲ ಹೆಚ್ಚಾಗಿವೆ ಬಿಜೆಪಿ ಸರ್ಕಾರ ಇದ್ದಾಗ ಕಳ್ಳತನ ಕಡಿಮೆ ಇದ್ದವು ಈ ಹಿಂದೆ ಸಹ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮರ್ಡರ್ಗಳು ಆಗಿದ್ದವು. ನಮ್ಮ ಸರ್ಕಾರ ಇದ್ದಾಗ ಮರ್ಡರ್ಗಳು ಹೆಚ್ಚು ಆಗಿಲ್ಲ ಕಾಂಗ್ರೆಸ್ ಸರ್ಕಾರ ಬಂದಿದ್ದಕ್ಕೆ ಇಂಥವೆಲ್ಲ ಹೆಚ್ಚಾಗಿವೆ. ಕಳ್ಳರು, ಕಳ್ಳರಿಂದ ಪೋಷಿತರ ಸರ್ಕಾರ ಅದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ವಿದ್ಯುತ್ ದರ ಏರಿಕೆಯಿಂದ ಉದ್ಯಮಗಳು ಅನ್ಯ ರಾಜ್ಯಕ್ಕೆ ಹೋಗುತ್ತವೆಂಬ ವಿಚಾರವಾಗಿ ಮಾತನಾಡಿ, ಅನ್ಯ ರಾಜ್ಯಕ್ಕೆ ಹೋಗಲು ಅವು ಡಬ್ಬಾ ಅಂಗಡಿ ಅಲ್ಲ ಅಂತಾ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರ ಸರಿಯಲ್ಲ ಸಚಿವರಾದ ಸತೀಶ ಜಾರಕಿಹೊಳಿ ಸಹ ಓರ್ವ ಉದ್ಯಮಿ ಆಗಿದ್ದು, ಅವರಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ ಅವರು ಬೇಜವಾಬ್ದಾರಿಯಾಗಿ ಹೇಳುವುದು ಸರಿಯಲ್ಲ ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದರು.
ವಾಣಿಜ್ಯ ಹಾಗೂ ಕೈಗಾರಿಕಾ ಉದ್ಯಮಿ ಬಂದ್ ಕರೆ ನೀಡಿದ ಕುರಿತು ಮಾತನಾಡಿ, ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ಅವರು ಉದ್ಯಮ ನಡೆಸಲು ಆಗಲ್ಲ ಎಂದಿದ್ದಾರೆ ಆದರೆ ಸರ್ಕಾರ ಮೊದಲಿನ ಸರ್ಕಾರ ದರ ಹೆಚ್ಚಳ ಮಾಡಿದ್ದು ಎಂದಿದೆ, ವಿದ್ಯುತ್ ಕಂಪನಿಗಳ ತಮ್ಮ ವಿದ್ಯುತ್ ದರ ಹೆಚ್ಚಳ ಮಾಡಲು ಬೇಡಿಕೆ ಇಟ್ಟಿದ್ದಾರೆ ಈಗ ಕಾಂಗ್ರೆಸ್ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚು ದರ ಮಾಡಿದೆ ಎಂದರು.
ವಿದ್ಯುತ್ ಉಚಿತ ಕೊಡುವ ಬಗ್ಗೆ ನಾವು ಸ್ವಾಗತ ಮಾಡುತ್ತೇವೆ. ಆದರೆ ಮೊದಲಿನ ಬಿಲ್ ಮೇಲೆ ಹೆಚ್ಚು ದರ ಏರಿಸಿದ್ದಾರೆ, ಮೊದಲು ನಮ್ಮ ಸರ್ಕಾರದಲ್ಲಿ ಕಡಿಮೆ ದರ ಇತ್ತು, 290 ಕೆವಿ ಬೇಕು ಎಂದು ಬೇಡಿಕೆ ಇತ್ತು. ಸರ್ಕಾರ 360 ಯುನಿಟ್ ಮಾಡಿದೆ. ಇನ್ನು ರಾಜ್ಯಾದ್ಯಂತ ಬಂದ್ ಕರೆ ಕೊಡಲಾಗಿದೆ, ಪಿಣ್ಯಾದಲ್ಲಿ ಸಣ್ಣ ಕೈಗಾರಿಕಾ ಇವೆ. ದರ ಹೆಚ್ಚಳದಿಂದ ಇವರಿಗ 4% ಹೆಚ್ಚು ದರ ತುಂಬಬೇಕು ಹೀಗಾಗಿ ಅವರು ಇಲ್ಲಿ ಯಾಕೆ ತುಂಬಬೇಕು ಎಂದು ಪಕ್ಕದ ರಾಜ್ಯಕ್ಕೆ ಹೋಗ್ತಾರೆ. ನಮ್ಮಲ್ಲಿ ಡಿಪಾರ್ಟ್ಮೆಂಟ್ ಸ್ಟೋರ್ ಇವೆ, ಅಲ್ಲಿ ಉದ್ಯೋಗ ಕಡಿತ ಆಗುತ್ತಿದೆ ಇದು ಆರಂಭ, ದೊಡ್ಡ ಪ್ರಮಾಣದಲ್ಲಿ ಕೆಲಸ ಹೋಗಲಿವೆ ಎಂದರು.
ಆಗಸ್ಟ್ ವೇಳೆಗೆ ಅನ್ನಭಾಗ್ಯ ಅಕ್ಕಿ ವಿತರಣೆ ಸಾಧ್ಯತೆ?
ವಿದ್ಯುತ್ ಉಚಿತ ಕೊಡುವ ಮಾತನ್ನ ಅವರು ಹೇಳಿದಂತೆ ಕೊಡಲಿ
ಕೈಗಾರಿಕೆಗಳು, ಉದ್ಯೋಗ ಹೋಗದಂತೆ ವಿದ್ಯುತ್ ದರ ಇರಲಿ ಎಂದು ಹೇಳಿದ ಅವರು, ಇದೇ ವೇಳೆ ಬಸ್ ಉಚಿತ ಕೊಟ್ಡಿದ್ದಕ್ಕೆ ಸ್ವಾಗತ. ವಿದ್ಯಾರ್ಥಿಗಳಿಗೆ ಉಚಿತ ಕೊಡಬೇಕು. ಎಲ್ಲ ಮಹಿಳೆಯರು ಉಚಿತ ಹೋಗುತ್ತಿರುವುದರಿಂದ ಕ್ಯಾಬ್ ಹಾಗೂ ಆಟೋಗೆ ನಷ್ಟ ಆಗುತಿದ್ದು, ಸರ್ಕಾರಕ್ಕೆ ಆಟೋ ಕ್ಯಾಬ್ ನವರಿಗೆ ತಿಂಗಳಿಗೆ 10 ಸಾವಿರ ಕೊಡಬೇಕು ಎಂದು ಬಿಜೆಪಿ ಒತ್ತಾಯ ಮಾಡ್ತೆವೆ ಎಂದರು.
ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ 10 ಕೆಜಿ ಅಕ್ಕಿ ಕೊಡ್ತೆವೆ ಎಂದಿದ್ದರು. ಈಗ ಅವರು ಮಾತನಾಡುತ್ತಿಲ್ಲ, ಇದೀಗ ಕೇಂದ್ರದ ಮೇಲೆ ಗೂಬೆ ಕುರಿಸುತ್ತಿದ್ದಾರೆ. ರೇಷನ್ ಅಕ್ಕಿ ಕೇಂದ್ರ ಕೊಡ್ತಿದೆ, ಅದನ್ನ ಅವರು ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಜನರಿಗೆ ಕೊಡಬೇಕು. ಅದನ್ನ ಬಿಟ್ಟು ಆರೋಪ ಮಾಡುತಿದ್ದಾರೆ ಇದು ಸರಿನಾ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರಕ್ಕೆ ನಾವು ಮನವಿ ಮಾಡ್ತೆವೆ, ಜನ ಅವರಿಗೆ ಮತ ಹಾಕಿದ್ದಾರೆ. ಜನ ಕಾನೂನು ಕೈಯಲ್ಲಿ ತೆಗೆದುಕೊಳ್ತಾರೆ ಎಂದು ನಾನು ಹೇಳ್ತೆನೆ. ಸರ್ಕಾರ ವಿಚಿತ್ರ ಇದೆ, ನೂರು ರೂಪಾಯಿ ಸಂಬಳ ಹೆಚ್ಚು ಮಾಡಲ್ಲ ಜನ ವಿರೋಧಿ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಜೂನ್ 1 ರಿಂದ ಅಕ್ಕಿಕೊಡಬೇಕಿತ್ತು, ಕುಂಟು ನೆಪ ಮಾಡಿ ಅದನ್ನ ತಪ್ಪಿಸುವ ಕೆಲಸ ಮಾಡುತಿದ್ದಾರೆ. ಮೂರು ತಿಂಗಳ ನಂತರ ಮತ್ತೇ ಬಂದ್ ಮಾಡಿ,ಕೇಂದ್ರದ ಚುನಾವಣೆ ಬಂದಾಗ ಮತ್ತೇ ಕೊಡ್ತಾತೆ. ಜನರಿಗೆ ಸುಳ್ಳು ಹೇಳಬೇಡಿ, ಜನ ರಸ್ತೆಗೆ ಬರ್ತಾರೆ ಎಂದು ಎಚ್ಚರಿಸಿದರು.
English summary
Arvind Bellad Said That Pick Pocketers, Rowdies Feel Motivated after Congress Came into Power in Karnataka
Story first published: Thursday, June 22, 2023, 13:38 [IST]