News
oi-Srinivasa A
ಮೊನ್ನೆಯಷ್ಟೇ
(
ಜುಲೈ
12
)
ಸೆಂಚುರಿ
ಸ್ಟಾರ್
ಶಿವರಾಜ್‌ಕುಮಾರ್
ಅವರ
ಹುಟ್ಟುಹಬ್ಬವನ್ನು
ಅವರ
ಅಭಿಮಾನಿಗಳು
ಬಹಳ
ವಿಜೃಂಭಣೆಯಿಂದ
ಆಚರಿಸಿದರು.
ರಾಜ್ಯದ
ಮೂಲೆ
ಮೂಲೆಗಳಿಂದ
ಆಗಮಿಸಿ
ರಾತ್ರೋರಾತ್ರಿ
ಶಿವಣ್ಣನ
ಮನೆ
ಮುಂದೆ
ಕೇಕ್
ಹಾಗೂ
ಹಾರಗಳನ್ನು
ಹಿಡಿದು
ಹಾಜರಾಗಿದ್ದ
ಶಿವಣ್ಣನ
ಅಭಿಮಾನಿಗಳು
ನೆಚ್ಚಿನ
ನಟನಿಗೆ
ಜೈಕಾರ
ಕೂಗಿ
ಹುಟ್ಟುಹಬ್ಬದ
ಶುಭಾಶಯವನ್ನು
ಕೋರಿದ್ದರು.
ಹೀಗೆ
ಶಿವಣ್ಣನ
ಅಭಿಮಾನಿಗಳು
ತಮ್ಮ
ನೆಚ್ಚಿನ
ನಟನ
ಹುಟ್ಟುಹಬ್ಬವನ್ನು
ಆಚರಿಸುತ್ತಿರುವಾಗಲೇ
ಅವರಿಗೆ
ಮತ್ತಷ್ಟು
ಕಿಕ್ಕೇರಿಸಿದ್ದು
ಶಿವರಾಜ್‌ಕುಮಾರ್
ನಟನೆಯ
ಮುಂದಿನ
ಚಿತ್ರ
ಘೋಸ್ಟ್‌ನ
ಟೀಸರ್.
ಹೌದು,
ಶಿವ
ರಾಜ್‌ಕುಮಾರ್
ಹಾಗೂ
ನಿರ್ದೇಶಕ
ಶ್ರೀನಿ
ಕಾಂಬಿನೇಶನ್‌ನಲ್ಲಿ
ಮೂಡಿ
ಬಂದಿರುವ
ಘೋಸ್ಟ್
ಚಿತ್ರದ
ಬಿಗ್
ಡ್ಯಾಡಿ
ಟೀಸರ್
ಅನ್ನು
ಶಿವಣ್ಣನ
ಹುಟ್ಟುಹಬ್ಬದ
ಪ್ರಯುಕ್ತ
ಬಿಡುಗಡೆಗೊಳಿಸಲಾಗಿತ್ತು.

ಈ
ಟೀಸರ್
ಕಂಡು
ಶಿವಣ್ಣನ
ಅಭಿಮಾನಿಗಳು
ಸಂತಸ
ವ್ಯಕ್ತಪಡಿಸಿದರು.
ಸಿಕ್ಕಾಪಟ್ಟೆ
ಮಾಸ್
ಅವತಾರದಲ್ಲಿ
ಕಾಣಿಸಿಕೊಂಡಿರುವ
ಶಿವರಾಜ್‌ಕುಮಾರ್
ಕಂಡು
ಬಹಳ
ದಿನಗಳ
ನಂತರ
ಶಿವಣ್ಣ
ಅವರನ್ನು
ವಿಭಿನ್ನ
ಮಾಸ್
ಅವತಾರದಲ್ಲಿ
ತೋರಿಸಿದ್ದಾರೆ
ಎಂದು
ಅಭಿಮಾನಿಗಳು
ನಿರ್ದೇಶಕ
ಶ್ರೀನಿಗೆ
ಮೆಚ್ಚುಗೆಯ
ಮಹಾಪೂರವನ್ನು
ಹರಿಸಿದ್ದರು.
ಹೀಗೆ
ಶಿವರಾಜ್‌ಕುಮಾರ್
ಅಭಿಮಾನಿಗಳಿಂದ
ಹಾಗೂ
ಕನ್ನಡ
ಸಿನಿ
ರಸಿಕರಿಂದ
ಬೃಹತ್
ಮೆಚ್ಚುಗೆಯನ್ನು
ಪಡೆದುಕೊಂಡಿರುವ
ಘೋಸ್ಟ್
ಟೀಸರ್
ಯುಟ್ಯೂಬ್‌ನಲ್ಲಿ
ಟ್ರೆಂಡಿಂಗ್
ಪಟ್ಟಿ
ಸೇರಿದ್ದು,
ಈ
ಟೀಸರ್
ವೀಕ್ಷಿಸಿದ
ತೆಲುಗಿನ
ಪವರ್
ಸ್ಟಾರ್
ಪವನ್
ಕಲ್ಯಾಣ್
ಅಭಿಮಾನಿಗಳು
ಶಿವಣ್ಣನನ್ನು
ಟ್ರೋಲ್
ಮಾಡಿ
ಘೋಸ್ಟ್
ಚಿತ್ರತಂಡದ
ವಿರುದ್ಧ
ಕಿಡಿಕಾರಿದ್ದಾರೆ.
ಹೌದು,
ಘೋಸ್ಟ್
ಟೀಸರ್‌ನಲ್ಲಿ
ಪವನ್
ಕಲ್ಯಾಣ್
ಮುಂದಿನ
ಚಿತ್ರದ
ಟೈಟಲ್
ಅನ್ನು
ಕದಿಯಲಾಗಿದೆ
ಎಂಬ
ಗಂಭೀರ
ಆರೋಪವನ್ನು
ಕೆಲ
ಪವನ್
ಕಲ್ಯಾಣ್
ಫ್ಯಾನ್ಸ್
ಮಾಡುತ್ತಿದ್ದಾರೆ.
ಈ
ಟೀಸರ್‌ನಲ್ಲಿ
ತನ್ನನ್ನು
ಹಿಡಿಯಲು
ಬರುವ
ವೈರಿಗಳ
ಗುಂಪಿಗೆ
ಪ್ರತಿಕ್ರಿಯಿಸುವ
ಶಿವರಾಜ್‌ಕುಮಾರ್
“ನೀವು
ಗನ್
ಅಲ್ಲಿ
ಎಷ್ಟು
ಜನರನ್ನು
ಎದುರಿಸಿದ್ದೀರೋ
ಅದಕ್ಕಿಂತ
ಜಾಸ್ತಿ
ಜನರನ್ನು
ನಾನು
ಕಣ್ಣಲ್ಲಿ
ಎದುರಿಸಿದ್ದೇನೆ.
ಅವರು
ನನ್ನನ್ನು
ಓಜಿ
ಎಂದು
ಕೆರಯುತ್ತಿದ್ದರು.
ಒರಿಜಿನಲ್
ಗ್ಯಾಂಗ್‌ಸ್ಟರ್..”
ಎಂದು
ಖಡಕ್
ಡೈಲಾಗ್
ಹೇಳಿ
ಗುಂಪು
ಭರ್ಜರಿ
ಟಾಂಗ್
ನೀಡಿದ್ದರು.
ಈ
ಡೈಲಾಗ್
ಪವನ್
ಕಲ್ಯಾಣ್
ಅಭಿಮಾನಿಗಳನ್ನು
ಕೆರಳಿಸಿತ್ತು.
ಏಕೆಂದರೆ
ಪವನ್
ಕಲ್ಯಾಣ್
“ಓಜಿ”
(
ಒರಿಜಿನಲ್
ಗ್ಯಾಂಗ್‌ಸ್ಟರ್
)
ಎಂಬ
ಚಿತ್ರದಲ್ಲಿ
ನಟಿಸುತ್ತಿದ್ದಾರೆ.
ಹೀಗಾಗಿ
ಘೋಸ್ಟ್
ಚಿತ್ರದ
ಟೀಸರ್‌ನಲ್ಲಿ
ಬಳಸಲಾಗಿರುವ
“ಅವರು
ನನ್ನನ್ನು
ಓಜಿ
ಎಂದು
ಕೆರಯುತ್ತಿದ್ದರು.
ಒರಿಜಿನಲ್
ಗ್ಯಾಂಗ್‌ಸ್ಟರ್..”
ಎಂಬ
ಡೈಲಾಗ್
ಪವನ್
ಫ್ಯಾನ್ಸ್‌ಗೆ
ಕೋಪ
ತರಿಸಿದೆ.
ಈ
ಡೈಲಾಗ್
ಕುರಿತು
ಸಾಮಾಜಿಕ
ಜಾಲತಾಣದಲ್ಲಿ
ಬರೆದುಕೊಂಡಿರುವ
ಪವನ್
ಕಲ್ಯಾಣ್
ಅಭಿಮಾನಿಗಳು
ನಮ್ಮ
ನಟ
ಪವನ್
ಕಲ್ಯಾಣ್
ನಟನೆಯ
ಒರಿಜಿನಲ್
ಗ್ಯಾಂಗ್‌ಸ್ಟರ್
ಚಿತ್ರದ
ಹೆಸರನ್ನು
ಶಿವಣ್ಣ
ನಟನೆಯ
ಒರಿಜಿನಲ್
ಗ್ಯಾಂಗ್‌ಸ್ಟರ್
ಚಿತ್ರದಲ್ಲಿ
ನಕಲು
ಮಾಡಲಾಗಿದೆ
ಎಂದು
ಕಿಡಿಕಾರುತ್ತಿದ್ದಾರೆ.
Ghost
:
Big
Daddy
Telugu
Teaser
Dialogues.
They
Call
me
OG
Original
Gangster🤕😏😏
em
chepalo
kuda
ardham
kavatla.
pic.twitter.com/RXI9XJJOuL—
RatpacCheck
(@RatpacCheck)
July
12,
2023
ಹೀಗೆ
ಪವನ್
ಕಲ್ಯಾಣ್
ಫ್ಯಾನ್ಸ್
ಮಾಡುತ್ತಿರುವ
ಆರೋಪದ
ವಿರುದ್ಧ
ತೆಲುಗಿನ
ಇತರೆ
ನಟರ
ಅಭಿಮಾನಿಗಳೇ
ಪ್ರತ್ಯುತ್ತರ
ನೀಡಿದ್ದಾರೆ.
ಶಿವರಾಜ್‌ಕುಮಾರ್
ಈಗಿನಿಂದ
ಅಲ್ಲ,
ಓಂ
ಚಿತ್ರ
ತೆರೆಗೆ
ಬಂದಾಗಿನಿಂದಲೂ
ಒರಿಜಿನಲ್
ಗ್ಯಾಂಗ್‌ಸ್ಟರ್
ಎಂದು
ತಿರುಗೇಟು
ನೀಡಿದ್ದಾರೆ.
ಅಲ್ಲದೇ
ನಿಮ್ಮ
ನಟನ
‘ಒರಿಜಿನಲ್
ಗ್ಯಾಂಗ್‌ಸ್ಟರ್’
ಚಿತ್ರ
ಘೋಷಣೆಯಾಗುವ
ಮುನ್ನವೇ
ಶಿವಣ್ಣನ
ಘೋಸ್ಟ್
ಚಿತ್ರ
ಸೆಟ್ಟೇರಿತ್ತು.
ಹೀಗಾಗಿ
ಘೋಸ್ಟ್
ಚಿತ್ರದ
ಈ
ಡೈಲಾಗ್
ಯಾವುದೇ
ಕಾರಣಕ್ಕೂ
ಕಾಪಿ
ಅಲ್ಲ
ಎಂದು
ಟ್ರೋಲ್
ಮಾಡಿದ್ದಾರೆ.
English summary
Pawan Kalyan fans are angry about Shivarajkumar Ghost teaser’s original gangster dialogue. Read on.
Saturday, July 15, 2023, 8:13