ಅಸ್ಸಾಂ: ಪ್ರವಾಹದಿಂದ ಸಂಕಷ್ಟಕ್ಕೀಡಾದ 17 ಜಿಲ್ಲೆಗಳ 67,000 ಕ್ಕೂ ಹೆಚ್ಚು ಜನರು | Flood situation in Assam, Over 67,000 People In 17 Districts Affected

India

oi-Mamatha M

|

Google Oneindia Kannada News

ಗುವಾಹಟಿ, ಜುಲೈ. 14: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರ ಸಂಪೂರ್ಣ ಹದಗೆಟ್ಟಿದ್ದು, ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟವು ಹಲವಾರು ಸ್ಥಳಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ. ಈ ಹಿನ್ನೆಲೆ ರಾಜ್ಯದ 17 ಜಿಲ್ಲೆಗಳಲ್ಲಿ 67,000 ಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ಸರ್ಕಾರದ ಅಧಿಕೃತ ಬುಲೆಟಿನ್ ತಿಳಿಸಿದೆ.

ಪ್ರವಾಹದಿಂದ ಹಗಲಿನಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಈವರೆಗಿನ ಸಾವಿನ ಸಂಖ್ಯೆಯನ್ನು ಏಳು ಎಂದು ಇಟ್ಟುಕೊಂಡಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಬುಲೆಟಿನ್ ತಿಳಿಸಿದೆ.

Flood situation in Assam

ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆಯು ಹಿಂದಿನ ದಿನದ 10 ಕ್ಕೆ ಹೋಲಿಸಿದರೆ ಈಗ 17 ಕ್ಕೆ ಏರಿದೆ. ಬಕ್ಸಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ, ಗೋಲಾಘಾಟ್, ಜೋರ್ಹತ್, ಕೊಕ್ರಜಾರ್, ಲಖಿಂಪುಯ್ಟ್, ಮಜುಲಿಯು, ನಾಗಾವ್, ನಲ್ಬರಿ, ಶಿವಸಾಗರ್ ಮತ್ತು ತಾಮ್ ಉಲ್, ಟಿನ್ಸುಕಿಯಾ ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿವೆ.

ಕರ್ನಾಟಕ ಕರಾವಳಿ, ಬೆಂಗಳೂರಿನಲ್ಲಿ ಮುಂದಿನ ವಾರದವರೆಗೂ ವರುಣನ ಆರ್ಭಟ: ಹವಾಮಾನ ಇಲಾಖೆಕರ್ನಾಟಕ ಕರಾವಳಿ, ಬೆಂಗಳೂರಿನಲ್ಲಿ ಮುಂದಿನ ವಾರದವರೆಗೂ ವರುಣನ ಆರ್ಭಟ: ಹವಾಮಾನ ಇಲಾಖೆ

ಬ್ರಹ್ಮಪುತ್ರ ನದಿಯು ಧುಬ್ರಿ, ತೇಜ್‌ಪುರ, ಬೆಕಿ, ಬುರಿದಿಹಿಂಗ್ ಮತ್ತು ಗೋಲಕ್‌ಗಂಜ್‌ನಲ್ಲಿ ಸಂಕೋಶ್‌ನಲ್ಲಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಭೂತಾನ್ ಗಡಿಯಲ್ಲಿರುವ ಪಶ್ಚಿಮ ಅಸ್ಸಾಂನ ಜಿಲ್ಲೆಗಳಲ್ಲಿ ಮುಂಜಾನೆ ನೀರು ಬಿಡುಗಡೆಯಾದ ನಂತರ ಅಲರ್ಟ್ ಮಾಡಲಾಗಿದೆ.

Flood situation in Assam

ನೀರಿನ ಹರಿವನ್ನು ನಿಯಂತ್ರಿಸಲು ಹೆಚ್ಚುವರಿ ಗೇಟ್‌ಗಳನ್ನು ತೆರೆಯಲಾಗುತ್ತದೆ. ಇದರ ಬಗ್ಗೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಬಿಡುಗಡೆಯಾದ ನೀರಿನ ಪ್ರಮಾಣವು ಬೃಹತ್ ಪ್ರಮಾಣದಲ್ಲಿರುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಿಂದಿನ ದಿನ ಟ್ವೀಟ್ ಮಾಡಿದ್ದಾರೆ.

ಇನ್ನು, ಪ್ರವಾಹ ಪೀಡಿತ ಎಲ್ಲಾ ಜಿಲ್ಲೆಯ ಅಧಿಕಾರಿಗಳು ಸ್ಥಾಪಿಸಿರುವ 78 ಪರಿಹಾರ ಶಿಬಿರಗಳಲ್ಲಿ 4,500 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 2,770 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ಈವರೆಗೆ 49,535 ಪ್ರಾಣಿಗಳು ಮೃತಪಟ್ಟಿವೆ. ಮಜುಲಿಯಲ್ಲಿ ಒಡ್ಡು ಹಾನಿಯಾಗಿದ್ದು, ಬಾರ್ಪೇಟಾ, ಚಿರಾಂಗ್, ಧುಬ್ರಿ, ಗೋಲಾಘಾಟ್, ಲಖಿಂಪುರ, ಮಜುಲಿ, ಶಿವಸಾಗರ ಮತ್ತು ಸೋನಿತ್‌ಪುರ ಜಿಲ್ಲೆಗಳಲ್ಲಿ 18 ರಸ್ತೆಗಳು ಹಾನಿಗೊಳಗಾಗಿವೆ. ಬರ್ಪೇಟಾ, ಬೊಂಗೈಗಾಂವ್, ಧುಬ್ರಿ, ಕೊಕ್ರಜಾರ್, ಶಿವಸಾಗರ್ ಮತ್ತು ತಮುಲ್‌ಪುರ್‌ನಲ್ಲಿಯೂ ಸಹ ದೊಡ್ಡ ಪ್ರಮಾಣದ ಭೂಕುಸಿತ ವರದಿಯಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

English summary

Over 67,000 people in 17 districts of Assam affected by flood says Assam State Disaster Management Authority (ASDMA). know more.

Story first published: Friday, July 14, 2023, 23:17 [IST]

Source link