ಐಪಿಎಲ್‌ನಿಂದ ಎಂಎಸ್‌ ಧೋನಿ ನಿವೃತ್ತಿ: ಸಿಎಸ್‌ಕೆ ಸಿಇಒ ಕೊಟ್ರು ಮಹತ್ವದ ಹೇಳಿಕೆ | MS Dhoni Retirement: CSK CEO Kasi Viswanathan Gives Important Update

Sports

oi-Naveen Kumar N

|

Google Oneindia Kannada News

2022ರ ಐಪಿಎಲ್ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ 2023ರಲ್ಲಿ ಅದ್ಭುತ ವಾಪಸಾತಿ ಮಾಡಿತು. ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ಸಿಎಸ್‌ಕೆ, 2023ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ನಾಯಕನಾಗಿ ಎಂಎಸ್ ಧೋನಿ ಯುವ ಬೌಲರ್ ಗಳ ತಂಡ ಕಟ್ಟಿಕೊಂಡು ತಂಡಕ್ಕೆ 5ನೇ ಕಪ್ ತಂದುಕೊಟ್ಟರು.

ಇನ್ನು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಎಂಎಸ್‌ ಧೋನಿಗೆ ಕೊನೆಯ ಆವೃತ್ತಿ ಎಂದು ಹೇಳಲಾಗಿತ್ತು, ಇಡೀ ಟೂರ್ನಿಯಲ್ಲಿ ಧೋನಿಗೆ ಇದು ಕೊನೆ ಐಪಿಎಲ್, ಫೈನಲ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಇದು ಧೋನಿ ಅವರ ಕೊನೆ ಐಪಿಎಲ್ ಎಂದು ಭಾರತದಲ್ಲಿ ಯಾವುದೇ ಸ್ಟೇಡಿಯಂನಲ್ಲಿ ಆಡಿದರೂ, ಧೋನಿಗೆ ಅಪೂರ್ವ ಬೆಂಬಲ ಸಿಕ್ಕಿತ್ತು.

MS Dhoni Retirement

ಅನನುಭವಿ ಬೌಲಿಂಗ್ ಪಡೆಯನ್ನು ಕಟ್ಟಿಕೊಂಡು ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡುವ ಮೂಲಕ ಧೋನಿ ತಾನೇಕೆ ಅದ್ಭುತ ಕ್ಯಾಪ್ಟನ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದರು. ಮೊಣಕಾಲು ನೋವಿನ ನಡುವೆಯೇ ಅವರು ಒಂದು ಪಂದ್ಯದಲ್ಲೂ ವಿಶ್ರಾಂತಿ ಪಡೆಯದೆ ತಂಡವನ್ನು ಮುನ್ನಡೆಸಿದರು. ಐಪಿಎಲ್ ಮುಗಿದ ಬಳಿಕ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ನಿವೃತ್ತಿ ಬಗ್ಗೆ ಧೋನಿ ಹೇಳಿದ್ದೇನು?

ಸಿಎಸ್‌ಕೆ ತಂಡಕ್ಕಾಗಿ ಐದನೇ ಕಪ್ ಗೆದ್ದ ನಂತರ ಮಾತನಾಡಿದ್ದ ಅವರು, ಐಪಿಎಲ್ ಟ್ರೋಫಿ ಗೆದ್ದು ನಿವೃತ್ತಿಯಾಗುವುದು ಉತ್ತಮ ಮಾರ್ಗವಾಗಿದೆ. ಸಾಂದರ್ಭಿಕವಾಗಿ ನೋಡಿದರೆ ನನ್ನ ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ ಎಂದು ಹೇಳುವ ಮೂಲಕ ಅಭಿಮಾನಿಗಳ ಎದೆ ಬಡಿತ ನಿಲ್ಲಿಸಿದ್ದರು. ಆದರೆ ಮುಂದುವರೆದು, ನನ್ನ ನಿವೃತ್ತಿ ಘೋಷಿಸಲು ಇನ್ನೂ ಸಮಯ ಇದೆ, ಇನ್ನೂ 9 ತಿಂಗಳು ಕಷ್ಟಪಟ್ಟು ಕೆಲಸ ಮಾಡುತ್ತೇನೆ, ಸಾಧ್ಯವಾದರೆ ಇನ್ನೂ ಒಂದು ಆವೃತ್ತಿ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.

 ಫಿಕ್ಸಿಂಗ್ ಆರೋಪ: ಐಪಿಎಸ್ ಅಧಿಕಾರಿ ವಿರುದ್ಧ ಧೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಸಮ್ಮತಿ ಫಿಕ್ಸಿಂಗ್ ಆರೋಪ: ಐಪಿಎಸ್ ಅಧಿಕಾರಿ ವಿರುದ್ಧ ಧೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಸಮ್ಮತಿ

41ನೇ ವಯಸ್ಸಿನ ಧೋನಿ ಮೊಣಕಾಲು ನೋವಿನ ನಡುವೆ ಆಡಿದ್ದು ಅವರ ಬದ್ಧತೆಯನ್ನು ತೋರುತ್ತದೆ. ಇನ್ನೂ ಸಮಯ ತೆಗೆದುಕೊಂಡು ಮುಂದಿನ ಆವೃತ್ತಿಯಲ್ಲಿ ಆಡುವ ಬಗ್ಗೆ ನಿರ್ಧರಿಸಲಿದ್ದಾರೆ. ಈಗ ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಕೂಡ ಮಾಹಿತಿ ನೀಡಿದ್ದಾರೆ.

ಫೆಬ್ರವರಿ ಬಳಿಕ ನಿವೃತ್ತಿ ಬಗ್ಗೆ ನಿರ್ಧಾರ

“ಫೈನಲ್ ಮುಗಿದ ಬಳಿಕ ಮುಂಬೈಗೆ ತೆರಳಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಪುನರ್ವಸತಿಗೆ ರಾಂಚಿಗೆ ತೆರಳಲಿದ್ದಾರೆ. ಮುಂಬೈನಲ್ಲಿ ರುತುರಾಜ್ ಗಾಯಕ್ವಾಡ್ ಮದುವೆ ನಂತರ ಜೂನ್ 4ರಂದು ನಾನು ಅವರನ್ನು ಭೇಟಿ ಮಾಡಿದ್ದೇನೆ, ಅವರು ಈಗ ಆರಾಮಾಗಿದ್ದಾರೆ. ಮೂರು ವಾರಗಳ ವಿಶ್ರಾಂತಿ ಪಡೆದ ನಂತರ, ಪುನರ್ವಸತಿ ಪ್ರಾರಂಭಿಸಲಿದ್ದಾರೆ. ಜನವರಿ-ಫೆಬ್ರವರಿ ತನಕ ಅವರು ಆಡುವುದಿಲ್ಲ, ಅವರಿಗೆ ಎಲ್ಲವನ್ನೂ ಹೇಳುವ ಅಗತ್ಯವಿಲ್ಲ” ಎಂದು ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಕೂಡ ಮಾಹಿತಿ ನೀಡಿದ್ದಾರೆ.

“ಧೋನಿಗೆ ಏನು ಮಾಡಬೇಕು ಎಂದು ಗೊತ್ತಿದೆ, ನಾವು ಅವರ ಬಳಿ ಏನು ಮಾಡುತ್ತೀರಿ ಎಂದು ಪ್ರಶ್ನೆ ಮಾಡುವುದಿಲ್ಲ, ಅವರೇ ನಮಗೆ ತಿಳಿಸುತ್ತಾರೆ. ಏನೇ ಮಾಡುವುದಿದ್ದರೂ ಅವರು ಕರೆ ಮಾಡುತ್ತಾರೆ. ಏನೆ ಇದ್ದರೂ ಮೊದಲು ಎನ್‌ ಶ್ರೀನಿವಾಸನ್‌ ಅವರಿಗೆ ತಿಳಿಸುತ್ತಾರೆ. ಧೋನಿ ಅವರ ಜೊತೆ ನೇರವಾಗಿ ಮಾತನಾಡುತ್ತಾರೆ. 2008ರಿಂದ ಕೂಡ ಅದು ಹೀಗೆಯೆ ಬಂದಿದೆ, ಹೀಗೆ ಮುಂದುವರೆಯಲಿದೆ ಎಂದು ಹೇಳಿದರು.

ಎಂಎಸ್‌ ಧೋನಿಗೆ ಮತ್ತೊಂದು ಐಪಿಎಲ್ ಆವೃತ್ತಿಯಲ್ಲಿ ಆಡಲು ಇಷ್ಟವಿದೆ, ಆದರೆ ಅದು ಅವರ ಮೊಣಕಾಲು ಗಾಯ, ಫಿಟ್ನೆಸ್ ಅನ್ನು ಅವಲಂಬಿಸಿದೆ. ಮೊಣಕಾಲು ಗಾಯ ಸಂಪೂರ್ಣವಾಗಿ ಗುಣವಾಗಿ, ಆಡಲ್ ಫಿಟ್ ಆಗಿದ್ದರೆ 2024ರ ಐಪಿಎಲ್‌ನಲ್ಲೂ ಕ್ಯಾಪ್ಟನ್ ಕೂಲ್ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಅವರು ಇನ್ನೊಂದು ಸೀಸನ್ ಆಡಲಿ ಎನ್ನುವುದೇ ಕೋಟ್ಯಂತರ ಅಭಿಮಾನಿಗಳ ಬಯಕೆಯಾಗಿದೆ.

English summary

After leading Chennai Super Kings to their fifth IPL title, MS Dhoni hinted at the possibility of retirement but expressed his desire to return for another season if his body allows. Dhoni’s final decision will be made closer to March, according to CSK CEO Kasi Viswanathan.

Story first published: Thursday, June 22, 2023, 11:00 [IST]

Source link