Tv
oi-Srinivasa A
By ಶೃತಿ ಹರೀಶ್ ಗೌಡ
|
ಆರಾಧನಾ
ದೇವಸ್ಥಾನದಿಂದ
ಮನೆಗೆ
ಬರುವಾಗ
ತನ್ನನ್ನೇ
ತಾನು
ಶಪಿಸಿಕೊಂಡಿದ್ದಾಳೆ.
ಯಾವುದೇ
ರೀತಿಯಲ್ಲೂ
ಸಹ
ದೊಡ್ಡ
ಕನಸನ್ನ
ಕಂಡಿರುವುದನ್ನ
ನನಸು
ಮಾಡಿ
ಕೊಳ್ಳಲು
ಸಾಧ್ಯವಿಲ್ಲ
ಎಂದು
ಅಂದುಕೊಂಡಿದ್ದಾಳೆ.
ಅದೇ
ಯೋಚನೆಯಲ್ಲಿ
ಮನೆಗೆ
ಬಂದಿದ್ದಾಳೆ
ಆರಾಧನಾಗಾಗಿ
ಮಹೇಶ್
ಮನೆಯಲ್ಲಿ
ಕುಳಿತುಕೊಂಡಿದ್ದಾನೆ.
ಆರಾಧನಾ
ದಾರಿಯನ್ನೇ
ಮಹೇಶ್
ಕಾಯುತ್ತಾ
ಕುಳಿತಿದ್ದಾನೆ.
ಆರಾಧನಾ
ಮನೆಗೆ
ಬಂದ
ತಕ್ಷಣವೇ
ತನ್ನ
ರಗಳೆಯನ್ನು
ತೆಗೆದಿದ್ದಾನೆ.
ಏನು
ಅಮ್ಮನವರಿಗೆ
ಕೆಲಸ
ಸಿಕ್ಕಿತಾ
ಅದು
ಪರ್ಮನೆಂಟಾಗಿ
ಕೆಲಸ
ಸಿಕ್ಕಿತಾ
ಎಂದು
ಹೇಳಿದ್ದಾನೆ
ಆದರೆ
ಆರಾಧನಾ
ತಲೆಯನ್ನ
ತಗ್ಗಿಸಿ
ನಿಂತುಕೊಂಡಿದ್ದಾಳೆ.
ಈ
ವೇಳೆ
ಮಹೇಶ್‌ಗೆ
ಆರಾಧನಾಗೆ
ಕೆಲಸ
ಸಿಗದೇ
ಇರುವುದು
ಗೊತ್ತಾಗಿದೆ.
ನನಗೆ
ಹೀಗೆ
ಆಗುತ್ತದೆ
ಎಂದು
ಮೊದಲೇ
ಗೊತ್ತಿತ್ತು
ಅದಕ್ಕಾಗಿ
ನಿನಗೆ
ಒಂದು
ಕೆಲಸವನ್ನ
ಹುಡುಕಿ
ಇಟ್ಟಿದ್ದೇನೆ
ನೀನು
ಅದಕ್ಕೆ
ಹೋಗು
ಎಂದು
ಚುಚ್ಚಿ
ಮಾತನಾಡಿದ್ದಾನೆ.

ನನ್ನನ್ನು
ನೀವುಗಳು
ರಾಕ್ಷಸ
ಎಂದರೂ
ಸಹ
ನನಗೆ
ಬೇಸರವಿಲ್ಲ
ನಾನು
ಪುಣ್ಯದ
ಕೆಲಸಗಳನ್ನ
ಮಾಡುತ್ತೇನೆ
ಅದಕ್ಕಾಗಿ
ನಿನಗೂ
ಸಹ
ಕೆಲಸವನ್ನ
ನನ್ನ
ಫ್ರೆಂಡ್
ಕೈಲಿ
ಹುಡುಕಿಸಿ
ಇಟ್ಟಿದ್ದೇನೆ
ನಾಳೆಯಿಂದಲೇ
ನೀನು
ಅಲ್ಲಿಗೆ
ಹೋಗಬಹುದು
ಎಂದು
ಆರಾಧನಾಳಿಗೆ
ಮಹೇಶ್
ಹೇಳಿದ್ದಾನೆ.
ನನಗೆ
ಎರಡು
ಆಪ್ಷನ್
ಕೊಡುತ್ತೇನೆ,
ಅದರಲ್ಲಿ
ಒಂದು
ನನ್ನ
ಅಕ್ಕನ
ಮಗನನ್ನ
ಮದುವೆ
ಆಗುವುದು
ಅದು
ಬಿಟ್ಟರೆ
ಕೆಲಸಕ್ಕೆ
ಹೋಗುವುದು
ನೀನು
ಯಾವುದನ್ನ
ಆಯ್ಕೆ
ಮಾಡಿಕೊಳ್ಳುತ್ತೀಯ
ಎಂದು
ಕೇಳಿದ್ದಾನೆ.
ಆರಾಧನಾ
ನಾನು
ಮದುವೆಯನ್ನು
ಆಗುವುದಿಲ್ಲ
ಕೆಲಸಕ್ಕೆ
ಹೋಗುತ್ತೇನೆ
ಎಂದು
ಮಹೇಶ್
ಮುಂದೆ
ಒಪ್ಪಿಕೊಂಡಿದ್ದಾಳೆ,
ಮಗಳ
ಈ
ಪರಿಸ್ಥಿತಿಯನ್ನ
ಕಂಡಂತಹ
ರೇವತಿಗೆ
ಅಳುವೆ
ಬಂದಿದೆ.
ನಂತರ
ಮಹೇಶ್,
ನಾಳೆ
9:30ಕ್ಕೆ
ನೀನು
ಗಾರ್ಮೆಂಟ್ಸ್
ಬಳಿ
ಹೋಗು
ಮೊದಲನೇ
ದಿನವೇ
ಲೇಟಾಗಿ
ಹೋಗಬೇಡ
ಎಂದು
ಹೇಳಿದ್ದಾನೆ.
ಇದಕ್ಕೆ
ಆರಾಧನಾ
ಆಯ್ತು
ಎಂದು
ತಲೆಯನ್ನ
ಅಲ್ಲಾಡಿಸಿದ್ದಾಳೆ.
ಮಗಳ
ಬಗ್ಗೆ
ಯೋಚನೆ
ಮಾಡುತ್ತಿರುವ
ರೇವತಿಗೆ
ಒಲೆ
ಮೇಲೆ
ಮುಂದೆ
ಇಟ್ಟಿರುವುದೇ
ನೆನಪಿಗೆ
ಬಂದಿಲ್ಲ
ನಂತರ
ಆರಾಧನಾಳೆ
ಓಡಿ
ಬಂದು
ಮುದ್ದೆಯನ್ನ
ಕೆಳಗೆ
ಇಳಿಸಿದ್ದಾಳೆ.
ನೀವ್
ಏಕೆ
ಅಮ್ಮ
ಯಾವತ್ತೂ
ಸಹ
ವಾಪಸ್
ಮಾತನಾಡುವುದಿಲ್ಲ
ಎಂದು
ಕೇಳಿದ್ದಕ್ಕೆ
ಜೀವನವೇ
ಹಾಗೆ
ಮದುವೆಯಾಯಿತು
ಎಂದರೆ
ಗಂಡ
ಹೇಳಿದಂತೆ
ಕೇಳಿಕೊಂಡು
ಹೋಗುವುದು
ಆರಾಧನಾ
ಅದು
ನನಗೆ
ಅನಿವಾರ್ಯ
ಎಂದು
ಮಗಳ
ಬಳಿ
ರೇವತಿ
ಹೇಳಿದ್ದಾಳೆ.
ಈ
ಕಡೆ
ಸತ್ತುಹೋಗಿರುವ
ಆರಾಧನಾ
ತಂದೆ
ಶಂಕರ್‌ನನ್ನು
ನೆನೆದುಕೊಂಡು
ಆರಾಧನಾ
ಅಳುತ್ತಿದ್ದಾಳೆ.
ಅಪ್ಪ
ನಾನು
ಕನಸು
ಕಂಡಿದ್ದೆ
ಅದನ್ನು
ನನಸು
ಮಾಡಿಕೊಳ್ಳಲು
ಸಾಧ್ಯವಾಗಲಿಲ್ಲ.
ಒಂದು
ಕಂಪನಿಯನ್ನ
ಕಟ್ಟಿ
ನಾನು
ಸಹ
ನಾಲ್ಕಾರು
ಜನರಿಗೆ
ಕೆಲಸ
ಕೊಡಬೇಕು
ಅಂದುಕೊಂಡಿದ್ದೆ
ಅದು
ನಿಮ್ಮ
ಕನಸು
ಸಹ
ಆಗಿತ್ತು.
ಆದರೆ
ಈಗ
ನಾನು
ನನ್ನ
ಕನಸನ್ನೇ
ನನಸು
ಮಾಡಿಕೊಳ್ಳಲಾಗದ
ಪರಿಸ್ಥಿತಿಗೆ
ಬಂದು
ನಿಂತಿದ್ದೇನೆ.
ಅದಕ್ಕೆ
ಫ್ಯಾಮಿಲಿ
ಇರಬೇಕಿತ್ತಂತೆ
ದುಡ್ಡು
ಇರಬೇಕಿತ್ತಂತೆ.
ನನ್ನ
ಬಳಿ
ಇದ್ಯಾವುದೂ
ಇಲ್ಲ
ಎಂದು
ಕಣ್ಣೀರನ್ನು
ಹಾಕಿದ್ದಾಳೆ.
ಎಂದು
ಬಾರದ
ಸಂದೀಪ್
ತಾಯಿ
ಈಗ
ಧರ್ಮೇಂದ್ರ
ಪ್ರಧಾನ್
ಮನೆಗೆ
ಬಂದಿದ್ದು
ಅಮಲಾಳನ್ನು
ನಾನು
ಪೂಜೆಯನ್ನು
ಇಟ್ಟುಕೊಂಡಿದ್ದೇನೆ
ನೀನು
ಮತ್ತು
ಸಂದೀಪ್
ಇಬ್ಬರೂ
ಸಹ
ಮನೆಗೆ
ಬರಬೇಕು
ಎಂದು
ಕರೆದಿದ್ದಾರೆ.
ಇದೇ
ವೇಳೆ
ಧರ್ಮೇಂದ್ರ
ಪ್ರಧಾನ
ಬಳಿ
ನಾನು
ಮನೆಯಲ್ಲಿ
ಪೂಜೆ
ಇಟ್ಟುಕೊಂಡಿದ್ದು
ನಿಮ್ಮ
ಅಳಿಯ
ಹಾಗೂ
ಮಗಳನ್ನು
ಕಳುಹಿಸಿ
ಕೊಡುತ್ತೀರಾ
ಎಂದು
ಪ್ರಶ್ನೆಯನ್ನ
ಮಾಡಿದ್ದಾಳೆ.
ಇದಕ್ಕಾಗಿ
ಧರ್ಮೇಂದ್ರ
ಪ್ರಧಾನ
ನಿಮ್ಮ
ಮಗ
ಹಾಗೂ
ಸೊಸೆಯನ್ನು
ಕರೆದುಕೊಂಡು
ಹೋಗಿ
ಇದರಲ್ಲಿ
ನನಗೆ
ಯಾವುದೇ
ಅಭ್ಯಂತರವಿಲ್ಲ
ಎಂದು
ಹೇಳಿದ್ದಾರೆ.
ಇನ್ನು
ಇದೇ
ವೇಳೆ
ಅಮಲಾ
ನಾನು
ಈಗ
ಹೋದರೆ
ಪ್ರಾಜೆಕ್ಟ್
ಗತಿ
ಏನು
ಎಂದು
ತಂದೆಗೆ
ಹೇಳಿದ್ದಾಳೆ.
ಆದರೆ
ಧರ್ಮೇಂದ್ರ
ಪ್ರಧಾನ್
ಮಗಳಿಗೆ
ಬುದ್ಧಿಯನ್ನು
ಹೇಳಿದ್ದಾರೆ.ಕಂಪನಿ
ಕೆಲಸಕ್ಕೂ
ಮನೆಯ
ಕೆಲಸವನ್ನು
ಮಿಕ್ಸ್
ಮಾಡಬಾರದು
ಅದು
ಬೇರೆ
ಇದು
ಬೇರೆ
ಎಂದು
ಹೇಳಿದ್ದಾರೆ.
ನೀನು
ಮೊದಲು
ಹೋಗಿ
ಪೂಜೆಯನ್ನ
ನೆರವೇರಿಸಿ
ಬಾ
ಎಂದು
ಮಗಳಿಗೆ
ಹೇಳಿದ್ದಾರೆ.ಇದೇ
ವೇಳೆ
ಅಮಲಾಳನ್ನ
ತಬ್ಬಿಕೊಂಡಿರುವ
ಅತ್ತೆ
ಈಗ
ನನ್ನ
ಕಾಲ
ಶುರುವಾಗಿದೆ
ಎಂದು
ಅಮಲಾಳ
ಕಿವಿಯಲ್ಲಿ
ಹೇಳಿದ್ದಾರೆ
ಇದರ
ಗುಟ್ಟೇನು
ಎಂಬುದೇ
ಈಗ
ಕಾಡುತ್ತಿದೆ.
English summary
Colors Kannada serial Antarapata, here details about aradana decided to going to garment work, amala mother in law telling arranged pooja at her home
Thursday, June 22, 2023, 6:42
Story first published: Thursday, June 22, 2023, 6:42 [IST]