ಗೃಹಲಕ್ಷ್ಮಿ ಯೋಜನೆಗೆ ಕಡ್ಡಾಯ ಆಧಾರ್ ಕಾರ್ಡ್ ಜೋಡಣೆಗೆ ವಿನಾಯಿತಿ? : ಸಚಿವ ಸಂಪುಟದ ಮಹತ್ವದ ನಿರ್ಣಯಗಳೇನು? | State Cabinet Meeting: Here Are The Decisions Taken By The Congress Government

Karnataka

oi-Reshma P

|

Google Oneindia Kannada News

ಬೆಂಗಳೂರು,ಜುಲೈ 14: ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಣ್ಮಿ ಯೋಜನೆ ಜುಲೈ 17 ಅಥವಾ 18 ರಂದು ಜಾರಿಯಾಗಲಿದ್ದು, ಗೃಹ ಲಕ್ಣ್ಮಿ ಯೋಜನೆಗೆ ಅರ್ಜಿ ಸ್ವೀಕಾರಕ್ಕೆ ದಿನಾಂಕ ನಿಗದಿ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.

ಈ ಕುರಿತು ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಗೃಹಲಕ್ಷ್ಮಿ ಯೋಜನೆಗೆ ಕಡ್ಡಾಯ ಆಧಾರ್ ಕಾರ್ಡ್ ಜೋಡಣೆಗೆ ವಿನಾಯಿತಿ ನೀಡುವ ಬಗ್ಗೆ ಚರ್ಚೆಯಾಗಿದೆ. ಆಧಾರ್ ಕಾರ್ಡ್ ಜೋಡಣೆಯಾಗದಿದ್ದರೂ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

State Cabinet Meeting: Here Are The Decisions Taken By The Congress Government

ಇನ್ನೂ ಬಯಲು ಸೀಮೆ ಅಭಿವೃದ್ಧಿ ಜನ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ ಎನ್ನಲಾಗಿದೆ. ಮೈಸೂರು ಲ್ಯಾಂಪ್ಸ್ ವರ್ಕ್ಸ್‌ ಲಿ. ಮೌಲ್ಯಮಾಪನ ವಿಧಾನವನ್ನು ಪರಿಷ್ಕರಿಸಲು ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹಾಗೂ ಸುತ್ತಮುತ್ತ ಮತ್ತು ಅದಕ್ಕೆ ಹೊಂದಿಕೊಂಡ ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳ 111 ಎಕರೆ 17 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲ್ದೇ ಕೃಷಿ ಮತ್ತು ತೋಟಗಾರಿಕಾ ಬೆಲೆಗಳ ಸ್ಥಿರೀಕರಣ ಮತ್ತು ಬೆಲೆ ನಿಗದಿ ಮಾಡಲು ಸಚಿವ ಸಂಪುಟ ಉಪಸಮಿತಿ ರಚನೆಗೆ ಸಂಪುಟಇಂದ ಅನುಮೋದನೆ ಸಿಕ್ಕಿದೆ ಎನ್ನಲಾಗಿದೆ.

State Cabinet Meeting: Here Are The Decisions Taken By The Congress Government

ಹಲವು ಮಹತ್ವದ ತಿರ್ಮಾನಗಳು ಇಲ್ಲಿವೆ?

  • ನ್ಯಾಯಾಲಯಗಳಲ್ಲಿ ಆದ್ಯತೆ ಮೇರೆಗೆ ಪ್ರಕರಣಗಳನ್ನ ಕೈಗೆತ್ತಿಕೊಳ್ಳಲು ನಿರ್ಧಾರ
  • ಬಿಪಿಎಲ್ ಕಾರ್ಡ್ ದಾರರ ಕುಟುಂಬಗಳ ಪ್ರಕರಣಗಳಿಗೆ ಆದ್ಯತೆ.ಬಡ ಕುಟುಂಬಗಳ ವಿಚಾರಣೆ ಆದ್ಯತೆ ಕಲ್ಪಿಸಲು ಸಿವಿಲ್‌ ಪ್ರಕ್ರಿಯ ಸಂಹಿತೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಒಪ್ಪಿಗೆ
  • ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಸರ್ಕಾರಿ ವಕೀಲರು, ಅಧಿಕಾರಿಗಳಿಗೆ ಹೊಣೆ. ಈ ಸಂಬಂಧ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಮಸೂದೆ ಮಂಡಿಸುವ ಪ್ರಸ್ತಾವಕ್ಕೂ ಒಪ್ಪಿಗೆ
  • ಗ್ರೂಪ್‌ ‘ಎ’ ಮತ್ತು ಗ್ರೂಪ್‌-ಬಿ ವೃಂದದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ, ದಂಡನಾ ಶಿಫಾರಸುಗಳನ್ನು ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ
  • 371ಜೆ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ
  • ಕೃಷಿ ಬೆಲೆ ಆಯೋಗದ ಅವಧಿ ವಿಸ್ತರಣೆ
  • ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 63 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವುದು
  • ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ
  • ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ
  • ಸಹಕಾರ ಕ್ಷೇತ್ರದಲ್ಲಿ ವೈದ್ಯನಾಥನ್‌ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಒಪ್ಪಿಗೆ

English summary

State Cabinet Meeting: Here are the decisions taken by the Chief Minister siddaramaiah government.

Story first published: Friday, July 14, 2023, 12:31 [IST]

Source link