Music
oi-Muralidhar S
ಟಾಲಿವುಡ್
ಖುಷಿ
ಖುಷಿಯಾಗಿದೆ.
ಅದಕ್ಕೆ
ಕಾರಣ
‘ಖುಷಿ’
ಸಿನಿಮಾ
ಎರಡನೇ
ಹಾಡು.
ಟಾಲಿವುಡ್‌ನ
ಸೆನ್ಸೇಷನಲ್
ಸ್ಟಾರ್
ವಿಜಯ್
ದೇವರಕೊಂಡ
ಹಾಗೂ
ಸಮಂತಾ
ಅಭಿನಯದ
‘ಖುಷಿ’
ಸಿನಿಮಾದ
ಹಾಡು
ರಿಲೀಸ್
ಆಗಿದೆ.
ಈ
ಸಿನಿಮಾದ
‘ಆರಾಧ್ಯ’
ಹಾಡು
ಕೇಳಿದವರು
ಕೂಡ
ಖುಷಿ
ಖುಷಿಯಾಗಿದ್ದಾರೆ.
ಅಂದ್ಹಾಗೆ,
‘ಖುಷಿ’
ಸಿನಿಮಾದ
ಎರಡನೇ
ಹಾಡು
ಗಂಡ
ಹೆಂಡತಿ
ನಡುವಿನ
ಪ್ರೇಮಗೀತೆ.
ಸಮಂತಾ
ಹಾಗೂ
ವಿಜಯ್
ದೇವರಕೊಂಡು
ಜೋಡಿಯ
ತೆರೆಮೇಲಿನ
ಕೆಮಿಸ್ಟ್ರಿ
ವರ್ಕ್‌ಔಟ್
ಆಗಿದೆ.
ಪ್ಯಾನ್
ಇಂಡಿಯಾ
ಸಿನಿಮಾ
ಆಗಿರುವುದರಿಂದ
ಕನ್ನಡದಲ್ಲಿಯೂ
ಆರಾಧ್ಯ
ಹಾಡು
ಬಿಡುಗಡೆ
ಮಾಡಲಾಗಿದೆ.

‘ಖುಷಿ’
ಸಿನಿಮಾ
ಎರಡನೇ
ಹಾಡಿನ
ಕನ್ನಡ
ಅವತರಣಿಕೆಗೆ
ಡಾ.ವಿ.
ನಾಗೇಂದ್ರ
ಪ್ರಸಾದ್
ಸಾಹಿತ್ಯ
ಬರೆದಿದ್ದಾರೆ.
ತೆಲುಗಿನಲ್ಲಿ
ಶ್ರೀರಾಮ್
ಹಾಡಿದ
ಈ
ಹಾಡನ್ನು
ಕನ್ನಡದಲ್ಲಿ
ಹರಿಚರಣ್
ಹಾಗೂ
ಚಿನ್ಮಯಿ
ಶ್ರೀಪಾದ್
ಧ್ವನಿ
ನೀಡಿದ್ದಾರೆ.
ಮಲಯಾಳಂ
ಚಿತ್ರರಂಗದಲ್ಲಿ
ಮೆಲೋಡಿ
ಹಾಡುಗಳಿಗೆ
ಜನಪ್ರಿಯರಾಗಿರುವ
ಹೇಷಂ
ಅಬ್ದುಲ್
ವಹಾಬ್
ಈ
ಸಿನಿಮಾದ
ಹಾಡಿಗೂ
ಟ್ಯೂನ್
ಹಾಕಿದ್ದಾರೆ.
ಈಗಾಗಲೇ
ರಿಲೀಸ್
ಆಗಿರೋ
ನನ್ನ
ರೋಜಾ
ನೀನೇ
ಎಂಬ
ಹಾಡಿಗೆ
ಸಂಗೀತ
ಪ್ರಿಯರು
ಹೊಗಳಿಕೊಂಡಾಡಿದ್ದರು.
ಈಗ
ಆರಾಧ್ಯ
ಗೀತೆಯ
ಸರದಿ.
ವಿಜಯ್
ದೇವರಕೊಂಡು
ಹಾಗೂ
ಸಮಂತಾ
ನಟನೆಯ
‘ಖುಷಿ’
ಪ್ಯಾನ್
ಇಂಡಿಯಾ
ಸಿನಿಮಾ.
ತೆಲುಗು
ಸೇರಿದಂತೆ
ಕನ್ನಡ,
ತಮಿಳು,
ಮಲಯಾಳಂ
ಹಾಗೂ
ಹಿಂದಿ
ಭಾಷೆಯಲ್ಲಿಯೂ
ಬಿಡುಗಡೆಯಾಗಲಿದೆ.
ಮೈತ್ರಿ
ಮೂವಿ
ಬ್ಯಾನರ್
ಈ
ಸಿನಿಮಾವನ್ನು
ಅದ್ಧೂರಿಯಾಗಿ
ನಿರ್ಮಿಸಿದ್ದು,
ಸಮಂತಾ
ಹಾಗೂ
ನಾಗಚೈತನ್ಯ
ನಟಿಸಿದ್ದ
‘ಮಜಿಲಿ’
ಸಿನಿಮಾದ
ನಿರ್ದೇಶಕ
ಶಿವ
ನರ್ವಣ
ಆಕ್ಷನ್
ಕಟ್
ಹೇಳಿದ್ದಾರೆ.
ರೊಮ್ಯಾಂಟಿಕ್
ಲವ್
ಎಂಟರ್‌ಟೈನರ್
‘ಖುಷಿ’
ಸಿನಿಮಾವನ್ನು
ಸೆಪ್ಟೆಂಬರ್
1ರಂದು
ವಿಶ್ವಾದ್ಯಂತ
ಬಿಡುಗಡೆ
ಮಾಡಲಾಗುತ್ತಿದೆ.
ಜಯರಾಮ್,
ಮುರಳಿ
ಶರ್ಮಾ,
ಲಕ್ಷ್ಮೀ,
ಅಲಿ,
ವಿನ್ನಿಲ್ಲಾ
ಕಿಶೋರ್,
ರೋಹಿನಿ
ಸೇರಿದಂತೆ
ಹಲವರು
ಈ
ಸಿನಿಮಾದಲ್ಲಿ
ನಟಿಸಿದ್ದಾರೆ.
ಹೇಷಂ
ವಾಹೆಬ್
ಸಂಗೀತ,
ಜಿ
ಮುರಳಿ
ಛಾಯಾಗ್ರಹಣ,
ಪ್ರವೀಣ್
ಪುಡಿ
ಸಂಕಲನ
ಚಿತ್ರಕ್ಕಿದೆ.
English summary
Vijay Devarakonda and Samantha Starrer Kushi movie 2nd song released, know more.
Thursday, July 13, 2023, 23:59
Story first published: Thursday, July 13, 2023, 23:59 [IST]